ಸಂಜೆಯ ಚಹಾ ಜೊತೆಗೆ ಬಿಸಿಬಿಸಿಯಾದ ಮತ್ತು ಗರಿಗರಿಯಾದ ತಿಂಡಿ ಸವಿಯಲು ಇಷ್ಟಪಡುವವರಿಗೆ ಪಂಜಾಬಿ ಶೈಲಿಯ ಅಮೃತಸರಿ ಪನೀರ್ ಪಕೋಡ ಅತ್ಯುತ್ತಮ ಆಯ್ಕೆ. ಮಸಾಲೆಗಳ ಸುವಾಸನೆ ಹಾಗೂ ಪನೀರ್ನ ಮೆದುತನದ ಸಂಯೋಜನೆಯಿಂದ ಕೂಡಿರುವ ಈ ಪಕೋಡಾವನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.
ಅಗತ್ಯವಿರುವ ಸಾಮಗ್ರಿಗಳು:
-
ಕಡಲೆ ಹಿಟ್ಟು – 2 ದೊಡ್ಡ ಚಮಚ
-
ಅಕ್ಕಿ ಹಿಟ್ಟು – 2 ದೊಡ್ಡ ಚಮಚ
-
ಮೈದಾ ಹಿಟ್ಟು – 2 ದೊಡ್ಡ ಚಮಚ
-
ಹಿಂಗು – ಒಂದು ಚಿಟಿಕೆ
-
ಓಮ ಕಾಳು (ಅಜ್ವೈನ) – 1/2 ಚಮಚ
-
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
-
ಅರಿಶಿನ ಪುಡಿ – 1/2 ಚಮಚ
-
ಅಚ್ಚ ಖಾರದ ಪುಡಿ – 1 ಚಮಚ
-
ನಿಂಬೆ ರಸ – ಅರ್ಧ ನಿಂಬೆಹಣ್ಣಿನ ರಸ
-
ಅಮಚೂರ್ ಪೌಡರ್ (ಮಾಂಗೋ ಪೌಡರ್) – 1 ಚಮಚ
-
ಪನೀರ್ – 500 ಗ್ರಾಂ (ತಲಪದ ಆಕಾರದಲ್ಲಿ ಹೆಚ್ಚಿದವು)
-
ರುಚಿಗೆ ತಕ್ಕಷ್ಟು ಉಪ್ಪು
-
ಅಗತ್ಯಕ್ಕೆ ತಕ್ಕಷ್ಟು ನೀರು ಮತ್ತು ಎಣ್ಣೆ (ಕರಿಯಲು)
ತಯಾರಿಸುವ ವಿಧಾನ:
-
ಹಿಟ್ಟಿನ ಮಿಶ್ರಣ ತಯಾರಿಕೆ: ಒಂದು ದೊಡ್ಡ ಪಾತ್ರೆಯಲ್ಲಿ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಹಿಂಗು, ಓಮ ಕಾಳು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ, ಖಾರದ ಪುಡಿ, ನಿಂಬೆ ರಸ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸ್ವಲ್ಪ ನೀರು ಸೇರಿಸಿ ಹದವಾದ ಹಿಟ್ಟು ತಯಾರಿಸಿ ಬದಿಗೆ ಇಡಿ.
-
ಪನೀರ್ ಸಿದ್ಧತೆ: ಹೆಚ್ಚಿಟ್ಟುಕೊಂಡ ಪನೀರ್ ತುಂಡುಗಳ ಮೇಲೆ ಸ್ವಲ್ಪ ಉಪ್ಪು ಉದುರಿಸಿ ಚೆನ್ನಾಗಿ ಬೆರೆಸಿ.
-
ಕರಿಯುವುದು: ಪನೀರ್ ತುಂಡುಗಳನ್ನು ತಯಾರಿಸಿಟ್ಟುಕೊಂಡ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ, ಬಿಸಿಯಾದ ಎಣ್ಣೆಯಲ್ಲಿ ಹಾಕಿ ಕರಿಯಿರಿ.
-
ಚಿನ್ನದ ಬಣ್ಣ ಬರುವವರೆಗೆ ಬೇಯಿಸಿ: ಪಕೋಡಾಗಳು ಚಿನ್ನದ ಬಣ್ಣಕ್ಕೆ ತಿರುಗಿ ಗರಿಗರಿಯಾಗುವವರೆಗೆ ಹೆಚ್ಚಿನ ಉರಿಯಲ್ಲಿ ಕರಿದು, ಪ್ಲೇಟ್ಗೆ ತೆಗೆದಿರಿಸಿ.
-
ಸೇವನೆಗೆ ಸಿದ್ಧ: ಬಿಸಿಬಿಸಿ ಪಕೋಡಾದ ಮೇಲೆ ಅಮಚೂರ್ ಪೌಡರ್ ಉದುರಿಸಿ ಚಟ್ನಿ ಅಥವಾ ಸಾಸ್ ಜೊತೆ ಸವಿಯಿರಿ.

