HomeKarnatakaBREAKING : PSI ಸೋಗಿನಲ್ಲಿ ಕೋಟ್ಯಾಂತರ ರೂ. ವಂಚನೆ ; ಚಿನ್ನ, ಹಣ ಲಪಟಾಯಿಸಿ ಲವರ್‌ಗೆ...

BREAKING : PSI ಸೋಗಿನಲ್ಲಿ ಕೋಟ್ಯಾಂತರ ರೂ. ವಂಚನೆ ; ಚಿನ್ನ, ಹಣ ಲಪಟಾಯಿಸಿ ಲವರ್‌ಗೆ ಕೊಡುತ್ತಿದ್ದ ಯುವತಿ ಅರೆಸ್ಟ್.!

ಬೆಂಗಳೂರು: ತಾನು ಬೆಂಗಳೂರಿನ ಪೊಲೀಸ್ ಇಲಾಖೆಯ ಪಿಎಸ್‌ಐ ಎಂದು ನಂಬಿಸಿ 25ಕ್ಕೂ ಹೆಚ್ಚು ಮಂದಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವತಿಯನ್ನು ನಿವೇದಿತಾ ಗೌಡ ಎಂದು ಗುರುತಿಸಲಾಗಿದೆ.

ನಿವೇದಿತಾ ಗೌಡ ಪಿಎಸ್‌ಐ ಎಂದು ಪರಿಚಯಿಸಿಕೊಂಡು ಹಲವರಿಂದ ಹಣ, ಚಿನ್ನ ಹಾಗೂ ಐಷಾರಾಮಿ ಕಾರುಗಳನ್ನು ಪಡೆದು ವಂಚಿಸಿದ್ದಾಳೆ ಎನ್ನಲಾಗಿದೆ. ಪೊಲೀಸ್ ಅಧಿಕಾರಿಯಂತೆ ನಂಬಿಕೆ ಮೂಡಿಸಿ, ವಿವಿಧ ಕಾರಣಗಳನ್ನು ನೀಡಿ ಜನರಿಂದ ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ಪಡೆದುಕೊಂಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.ನಿವೇದಿತಾ ಗೌಡ ಚಿಕ್ಕಮಗಳೂರಲ್ಲಿ ಕೆಫೆ ನಡೆಸುತ್ತಿದ್ದಳು ಎಂದು ತಿಳಿದು ಬಂದಿದೆ.

ಪೊಲೀಸ್ ಇಲಾಖೆಯ ಪಿಎಸ್‌ಐ ಎಂದು ನಂಬಿಸುವ ರೀತಿಯಲ್ಲಿ ಡ್ರೆಸ್ ಹಾಗೂ ಹೇರ್‌ಕಟ್ ಮಾಡಿಸಿಕೊಂಡು, ತಾನು ರಾಜಗೋಪಾಲನಗರ ಪೊಲೀಸ್ ಠಾಣೆಯ ಪಿಎಸ್‌ಐ ಎಂದು ಪರಿಚಯಿಸಿಕೊಂಡು ಹಲವರಿಗೆ ವಂಚಿಸಿದ ಆರೋಪ ಕೇಳಿಬಂದಿದೆ. ಪೊಲೀಸ್ ಅಧಿಕಾರಿಯಂತೆ ಕಾಣಿಸಿಕೊಳ್ಳಲು ಸೂಕ್ತವಾದ ವೇಷಭೂಷಣ ಧರಿಸುತ್ತಿದ್ದ ಯುವತಿ, ತಾನು ರಾಜಗೋಪಾಲನಗರ ಠಾಣೆಯ ಪಿಎಸ್‌ಐ ಎಂದು ಹೇಳಿಕೊಂಡು ಜನರ ವಿಶ್ವಾಸ ಗಳಿಸುತ್ತಿದ್ದಳು ಎನ್ನಲಾಗಿದೆ. ಬಳಿಕ ಇದೇ ಪರಿಚಯವನ್ನು ಬಳಸಿಕೊಂಡು ಹಣ, ಚಿನ್ನ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಪಡೆದುಕೊಳ್ಳುತ್ತಿದ್ದಳು ಎಂದು ಆರೋಪಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಿಯಕರನಿಗೆ ವಂಚನೆಯ ಹಣ?

ವಂಚನೆಯಿಂದ ಸಂಗ್ರಹಿಸಿದ ಹಣವನ್ನು ತನ್ನ ಪ್ರಿಯಕರ ದೇವುಗೆ ನೀಡುತ್ತಿದ್ದಳು ಎಂದು ಪೊಲೀಸರು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ದೇವು ಕೂಡ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ತನಿಖೆ ಚುರುಕು

ನಿವೇದಿತಾ ಗೌಡಳನ್ನು ಬಂಧಿಸಿರುವ ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆಕೆ ಎಷ್ಟು ಮಂದಿಗೆ ವಂಚಿಸಿದ್ದಾಳೆ, ಒಟ್ಟು ಎಷ್ಟು ಹಣ ಹಾಗೂ ಚಿನ್ನವನ್ನು ಪಡೆದುಕೊಂಡಿದ್ದಾಳೆ ಮತ್ತು ವಂಚನೆಯ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ತನಿಖೆಯ ಬಳಿಕ ಹೊರಬರುವ ಸಾಧ್ಯತೆಯಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular