HomeKarnatakaಕೆಪಿಎಸ್ ಸಿ ಹಗರಣ: ಬಸವರಾಜ್ ಕನ್ನಾಳೆ ಇಡಿ ಕಸ್ಟಡಿಗೆ

ಕೆಪಿಎಸ್ ಸಿ ಹಗರಣ: ಬಸವರಾಜ್ ಕನ್ನಾಳೆ ಇಡಿ ಕಸ್ಟಡಿಗೆ

ಬೆಂಗಳೂರು: ಕೆಪಿಎಸ್ ಸಿಯಿಂದ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದ ಹಗರಣದ ಪ್ರಮುಖ ಆರೋಪಿ ಬಸವರಾಜ ಕನ್ನಾಳೆಯನ್ನು ಇಡಿ ಅಧಿಕಾರಿಗಳ ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.

ಬೆಂಗಳೂರಿನ 4ನೇ ಸಿಸಿಹೆಚ್ ಕೋರ್ಟ್ ಬಸವರಾಜ್ ಕನ್ನಳೆಯನ್ನು 14 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿ ಆದೇಶಿಸಿದೆ. ಇಂದು ಬಸವರಾಜ ಕನ್ನಾಳೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಇಡಿ ಅಧಿಕಾರಿಗಳು, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಡಿ ಅಧಿಕಾರಿಗಳ ವಾದ ಪುರಸ್ಕರಿಸಿದ ಬೆಂಗಳೂರಿನ 4ನೇ ಸಿಸಿಹೆಚ್ ಕೋರ್ಟ್, ಕನ್ನಾಳೆಯನ್ನು 14 ದಿನ ಇಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.

ಶಿವಶಂಕರಪ್ಪ ಸಾಹುಕಾರ್‌ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲು

ಕೆಪಿಎಸ್‌ಸಿ ಅಕ್ರಮದ ಬೆನ್ನಲ್ಲೇ ಕೆಪಿಎಸ್ ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ಗೆ ಇದೀಗ ಮತ್ತೊಂದು ಸಂಕಷ್ಟ ಶುರುವಾಗಿದ್ದು, ಅವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಶಿವಶಂಕರಪ್ಪ ಸಾಹುಕಾರ್ ಹಾಗೂ ಅವರ ಅಳಿಯನ ವಿರುದ್ಧ ಭೂಕಬಳಿಕೆ ಮಾಡಿದ ಆರೋಪ ಕೇಳಿಬಂದಿದ್ದು, ವಿಶ್ವನಾಥ್ ಪಾಟೀಲ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಯಾದಗಿರಿ ಜಿಲ್ಲೆಯ ಶಹಾಪುರ್ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ದೂರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಶಹಾಪುರ ತಾಲೂಕಿನ ಅಣಬಿ ಗ್ರಾಮದಲ್ಲಿ 10 ಎಕರೆ 20 ಗುಂಟೆ ಜಮೀನು ಕಬಳಿಕೆ ಮಾಡಲಾಗಿದೆ. ನನ್ನ ಮಲತಾಯಿ ಬಸಮ್ಮಗೌಡತಿಗೆ ಮಕ್ಕಳಿರಲಿಲ್ಲ. ಆದರೆ ಶಿವಶಂಕರಪ್ಪ ಸಾಹುಕಾರ್ ಅಳಿಯನಾದ ಶಂಕರಗೌಡನನ್ನು ಮಗ ಎಂದು ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ ಮಾಡಿದ್ದಾರೆ ಎಂದು ಆರೊಪಿಸಲಾಗಿದೆ.

ಜಮೀನು ಕಬಳಿಕೆ ಬಳಿಕ ಅಳಿಯನಿಂದ ತನ್ನ ಹೆಸರಿಗೆ ಜಮೀನು ಮಾಡಿಕೊಂಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವಶಂಕರಪ್ಪ ಸಾಹುಕಾರ್ ಹಾಗೂ ಅವರ ಅಳಿಯನ ವಿರುದ್ಧ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular