HomeLatest Newsಆರೋಗ್ಯಕ್ಕೂ ಸೈ, ರುಚಿಗೂ ಸೈ: ಮನೆಯಲ್ಲೇ ಮಾಡಿ ಸಕತ್ ಟೇಸ್ಟಿ ಡ್ರೈ ಕರಿಬೇವು ಚಟ್ನಿ ಪುಡಿ

ಆರೋಗ್ಯಕ್ಕೂ ಸೈ, ರುಚಿಗೂ ಸೈ: ಮನೆಯಲ್ಲೇ ಮಾಡಿ ಸಕತ್ ಟೇಸ್ಟಿ ಡ್ರೈ ಕರಿಬೇವು ಚಟ್ನಿ ಪುಡಿ

ಸಾಮಾನ್ಯವಾಗಿ ಪ್ರತಿಯೊಬ್ಬರ ಅಡುಗೆಮನೆಯಲ್ಲೂ ಕರಿಬೇವು ಇದ್ದೇ ಇರುತ್ತದೆ. ಅಡುಗೆಯ ಒಗ್ಗರಣೆಗೆ ಮತ್ತು ಪರಿಮಳ ಹೆಚ್ಚಿಸಲು ಕರಿಬೇವನ್ನ ಬಳಸಲಾಗುತ್ತದೆ. ಕರಿಬೇವು ಕೇವಲ ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ, ಆರೋಗ್ಯಕ್ಕೂ ಅತ್ಯಂತ ಲಾಭದಾಯಕ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು, ಗ್ಯಾಸ್ಟ್ರಿಕ್ ಹಾಗೂ ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸಲು ಕರಿಬೇವು ಸಹಕಾರಿ.

ದಿನನಿತ್ಯದ ಊಟದ ಜೊತೆಗೆ ನಾಲಗೆಗೆ ರುಚಿ ನೀಡುವಂತಹ ಡ್ರೈ ಕರಿಬೇವು ಚಟ್ನಿ ಪುಡಿಯನ್ನು ಮನೆಯಲ್ಲಿಯೇ ಅತೀ ಸುಲಭವಾಗಿ ಹೇಗೆ ತಯಾರಿಸಬಹುದು ಎಂಬ ಮಾಹಿತಿ ಇಲ್ಲಿದೆ. ಈ ಚಟ್ನಿ ಪುಡಿಯು ಇಡ್ಲಿ, ದೋಸೆ, ಬಿಸಿಬಿಸಿ ದೋಸೆ-ರೊಟ್ಟಿ, ಬೇಳೆ ಸಾರು ಹಾಗೂ ಬಿಸಿ ಅನ್ನಕ್ಕೆ ತುಪ್ಪ ಹಾಕಿ ತಿನ್ನಲು ಅತ್ಯುತ್ತಮ ಕಾಂಬಿನೇಷನ್.

ಅಗತ್ಯವಿರುವ ಸಾಮಗ್ರಿಗಳು: ತೊಳೆದು ಒಣಗಿಸಿದ ಕರಿಬೇವು – 2 ಕಪ್, ಕಡಲೆಕಾಯಿ (ಶೇಂಗಾ) – ಅರ್ಧ ಕಪ್, ಎಳ್ಳು – 2 ಚಮಚ, ಒಣ ಮೆಣಸಿನಕಾಯಿ – 4 ರಿಂದ 5, ಒಣ ಕೊಬ್ಬರಿ ತುರಿ – ಕಾಲು ಕಪ್, ಬೆಳ್ಳುಳ್ಳಿ ಎಸಳು – 5 ರಿಂದ 6, ಜೀರಿಗೆ – 1 ಚಮಚ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಯಾರಿಸುವ ವಿಧಾನ: ಮೊದಲು ಕರಿಬೇವನ್ನ ಚೆನ್ನಾಗಿ ತೊಳೆದು ನೀರಿಲ್ಲದಂತೆ ಸಂಪೂರ್ಣವಾಗಿ ಒಣಗಿಸಿಕೊಳ್ಳಿ. ನಂತರ ಬಾಣಲೆಯಲ್ಲಿಣ್ಣೆ ಹಾಕದೆ ಸಣ್ಣ ಉರಿಯಲ್ಲಿ ಕರಿಬೇವು ಗರಿಗರಿಯಾಗುವವರೆಗೆ ಹುರಿದು ಪಕ್ಕಕ್ಕೆ ಎತ್ತಿಟ್ಟುಕೊಳ್ಳಿ.

ಅದೇ ಬಾಣಲೆಗೆ ಶೇಂಗಾ, ಎಳ್ಳು, ಒಣ ಮೆಣಸಿನಕಾಯಿ, ಕೊಬ್ಬರಿ ತುರಿ, ಬೆಳ್ಳುಳ್ಳಿ ಮತ್ತು ಜೀರಿಗೆ ಹಾಕಿ ಹೊಂಬಣ್ಣ ಬರುವವರೆಗೆ ಹಾಗೂ ನಲವೊಲವಿನ ಪರಿಮಳ ಬರುವವರೆಗೆ ಹುರಿಯಿರಿ. ಹುರಿದ ಈ ಎಲ್ಲಾ ಸಾಮಗ್ರಿಗಳು ತಣ್ಣಗಾಗಲು ಬಿಡಿ.

ಸಾಮಗ್ರಿಗಳು ಸಂಪೂರ್ಣ ತಣ್ಣಗಾದ ಮೇಲೆ ಮಿಕ್ಸಿ ಜಾರ್‌ಗೆ ಹಾಕಿ, ಜೊತೆಗೆ ಹುರಿದ ಕರಿಬೇವು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ತುಂಬಾ ನುಣ್ಣಗೆ ರುಬ್ಬುವ ಬದಲು ತರಿತರಿಯಾಗಿದ್ದರೆ ಚಟ್ನಿ ಪುಡಿ ಸವಿಯಲು ಹೆಚ್ಚು ರುಚಿಯಾಗಿರುತ್ತದೆ.

ತಯಾರಾದ ಈ ಚಟ್ನಿ ಪುಡಿಯನ್ನು ಗಾಳಿಯಾಡದ ಡಬ್ಬಿಯಲ್ಲಿ ಶೇಖರಿಸಿಟ್ಟರೆ ಹಲವು ದಿನಗಳ ಕಾಲ ಬಳಕೆಗೆ ಬರುತ್ತದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular