HomeEntertainmentಸೀತಾ ರಾಮಂ ಸೆಟ್‌ನಲ್ಲಿ ಹುಟ್ಟಿಕೊಂಡಿತ್ತು ಮೈಸಾ ಕಥೆ: ರಶ್ಮಿಕಾ ಆಯ್ಕೆಯ ಹಿಂದಿನ ಸತ್ಯ ಬಿಚ್ಚಿಟ್ಟ ನಿರ್ದೇಶಕ

ಸೀತಾ ರಾಮಂ ಸೆಟ್‌ನಲ್ಲಿ ಹುಟ್ಟಿಕೊಂಡಿತ್ತು ಮೈಸಾ ಕಥೆ: ರಶ್ಮಿಕಾ ಆಯ್ಕೆಯ ಹಿಂದಿನ ಸತ್ಯ ಬಿಚ್ಚಿಟ್ಟ ನಿರ್ದೇಶಕ

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ ಪಿರಿಯಡ್ ಆಕ್ಷನ್ ಸಿನಿಮಾ ‘ಮೈಸಾ’ ಮುಂಬರುವ ನವೆಂಬರ್ 27ರಂದು ತೆರೆಗೆ ಬರಲು ಸಜ್ಜಾಗಿದೆ. ರವೀಂದ್ರ ಪುಲ್ಲೆ ನಿರ್ದೇಶನದ ಈ ಚಿತ್ರವು ಗೊಂಡ ಬುಡಕಟ್ಟು ಜನಾಂಗದ ಹಿನ್ನೆಲೆಯಲ್ಲಿ ಮೂಡಿಬರಲಿದ್ದು, ಇತ್ತೀಚೆಗೆ ಬಿಡುಗಡೆಯಾದ ಟೀಸರ್‌ನಲ್ಲಿ ರಶ್ಮಿಕಾ ಅವರ ರಗಡ್ ಹಾಗೂ ತೀವ್ರ ಸ್ವರೂಪದ ನಟನೆ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಆದರೆ, ಈ ಚಿತ್ರಕ್ಕೆ ರಶ್ಮಿಕಾ ಅವರೇ ನಾಯಕಿಯಾಗಲು ಪ್ರಸಿದ್ಧ ‘ಸೀತಾ ರಾಮಂ’ ಸಿನಿಮಾ ಪ್ರಮುಖ ಕಾರಣ ಎಂಬ ಕುತೂಹಲಕಾರಿ ವಿಷಯ ಬೆಳಕಿಗೆ ಬಂದಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ರವೀಂದ್ರ ಪುಲ್ಲೆ, ತಾವು ‘ಸೀತಾ ರಾಮಂ’ ಸಿನಿಮಾದಲ್ಲಿ ಪ್ರಥಮ ಸಹಾಯಕ ನಿರ್ದೇಶಕರಾಗಿ ಹಾಗೂ ಸಂಭಾಷಣೆ ಬರಹಗಾರರಾಗಿ ಕೆಲಸ ಮಾಡಿದ್ದಾಗಿ ತಿಳಿಸಿದ್ದಾರೆ. ಆ ಚಿತ್ರದ ಕೆಲವು ದೃಶ್ಯಗಳನ್ನು ಚಿತ್ರೀಕರಿಸುವ ಸಂದರ್ಭದಲ್ಲಿ ರಶ್ಮಿಕಾ ಅವರ ಕಣ್ಣುಗಳಲ್ಲಿನ ತೀವ್ರ ಕೋಪ ಮತ್ತು ಭಾವನೆಗಳನ್ನು ಕಂಡು, ತಮ್ಮ ಡ್ರೀಮ್ ಪ್ರಾಜೆಕ್ಟ್ ‘ಮೈಸಾ’ ಚಿತ್ರಕ್ಕೆ ಇವರೇ ಸೂಕ್ತ ನಾಯಕಿ ಎಂದು ನಿರ್ಧರಿಸಿದ್ದಾಗಿ ಹೇಳಿದ್ದಾರೆ.

ಆ ಸಮಯದಲ್ಲೇ ರಶ್ಮಿಕಾ ಅವರಿಗೆ ಈ ಬಗ್ಗೆ ತಿಳಿಸಿದ್ದ ನಿರ್ದೇಶಕರು, ಮುಂದೆ ಕಥೆ ನಿರೂಪಿಸಿದಾಗ ರಶ್ಮಿಕಾ ತಕ್ಷಣವೇ ನಟಿಸಲು ಒಪ್ಪಿಕೊಂಡರು. ಈ ಸಾಹಸಮಯ ಪಾತ್ರಕ್ಕಾಗಿ ರಶ್ಮಿಕಾ ಇಟಲಿ ಮತ್ತು ಥೈಲ್ಯಾಂಡ್‌ನಲ್ಲಿ ವಿಶೇಷ ಆಕ್ಷನ್ ತರಬೇತಿ ಕೂಡ ಪಡೆದಿದ್ದು, ಶೇಕಡಾ ನೂರರಷ್ಟು ಶ್ರಮ ಹಾಕಿದ್ದಾರೆ ಎಂದು ನಿರ್ದೇಶಕರು ಶ್ಲಾಘಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular