HomeKarnatakaಮೂರು ಗಂಟೆಗಳ ಕಾಲ ಮಾಫಿ ಸಾಕ್ಷಿ ಪ್ರದೋಷ್ ಹೇಳಿಕೆ ದಾಖಲು: ವಿಚಾರಣೆ ನಾಳೆಗೆ ಮುಂದೂಡಿಕೆ

ಮೂರು ಗಂಟೆಗಳ ಕಾಲ ಮಾಫಿ ಸಾಕ್ಷಿ ಪ್ರದೋಷ್ ಹೇಳಿಕೆ ದಾಖಲು: ವಿಚಾರಣೆ ನಾಳೆಗೆ ಮುಂದೂಡಿಕೆ

ಬೆಂಗಳೂರು: ನಟ ದರ್ಶನ್ ಹಾಗೂ ಗ್ಯಾಂಗ್‌ ನಿಂದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಫಿ ಸಾಕ್ಷಿಯಾಗಿ ಬದಲಾಗಿರುವ ಎ14 ಆರೋಪಿ ಪ್ರದೋಷ್ ಸಾಕ್ಷ್ಯ ವಿಚಾರಣೆಯನ್ನು ಬೆಂಗಳೂರಿನ 59ನೇ ಸಿಸಿಹೆಚ್‌ ಕೋರ್ಟ್ ನಾಳೆ (ಸೆಪ್ಟೆಂಬರ್ 29ಕ್ಕೆ ಮುಂದೂಡಿದೆ.

ಇಂದು ಪೊಲೀಸ್ ಬಿಗಿ ಭದ್ರತೆಯಲ್ಲಿ ನ್ಯಾಯಾಲಯದ ಮುಂದೆ ಹಾಜರಾಗಿದ್ದ ಪ್ರದೋಷ್ ರಾವ್ ಅವರು ರೇಣುಕಾಸ್ವಾಮಿ ಹತ್ಯೆ ಬಗ್ಗೆ ಸತತ 3 ಗಂಟೆಗಳ ಕಾಲ ಮಹತ್ವದ ಹೇಳಿಕೆಯನ್ನು ದಾಖಲಿಸಿದ್ದಾರೆ. ನ್ಯಾಅಯಾಧೀಶೆ ಸುಜಾತಾ ಸಾಂಭ್ರಾಣಿ ಸಮ್ಮುಖದಲ್ಲಿ ಹೇಳಿಕೆ ದಾಖಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರದೋಷ್ ನೀಡಿದ ಸುದೀರ್ಘ ಹೇಳಿಕೆಯನ್ನು ಪ್ರಿಂಟ್ ಔಟ್ ತೆಗೆದು, ಅವರ ಸಹಿ ಪಡೆಯಬೇಕಿರುವ ಹಿನ್ನೆಲೆಯಲ್ಲಿ ಹಾಗೂ ಎಸ್‌ಪಿಪಿ ಅವರ ಮನವಿ ಮೇರೆಗೆ ನ್ಯಾಯಾಧೀಶರು ವಿಚಾರಣೆಯನ್ನು ನಾಳೆಗೆ ಮುಂದೂಡಿದರು. ವಿಚಾರಣೆ ಮುಗಿದ ಬಳಿಕ ಪೊಲೀಸರು ಪ್ರದೋಷ್‌ನನ್ನು ಮರಳಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದಿದ್ದಾರೆ.

ಈ ನಡುವೆ ಪ್ರದೋಷ್ ಮಾಫಿ ಸಾಕ್ಷಿಯಾಗುವುದಕ್ಕೆ ತಡೆಯಾಜ್ಞೆ ತರಲು ದರ್ಶನ್ ಪರವಾಗಿ ಹಿರಿಯ ವಕೀಲ ಹಷ್ಮತ್ ಪಾಷಾ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ರಜಾ ಅರ್ಜಿ ಸಲ್ಲಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ವಕೀಲ ಹಷ್ಮತ್ ಪಾಷಾ, ‘ಪ್ರದೋಷ್ ಮಾಫಿ ಸಾಕ್ಷಿ ಆಗುವುದನ್ನು ಪ್ರಶ್ನಿಸಿ ನಾವು ವಿಚಾರಣಾ ನ್ಯಾಯಾಲಯದ ಮೊರೆ ಹೋಗಿದ್ದೆವು. ಆದರೆ ವಿಚಾರಣಾ ನ್ಯಾಯಾಲಯ ನಮ್ಮ ಮನವಿಯನ್ನು ತಿರಸ್ಕರಿಸಿದ ಕಾರಣ ನಾವು ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಎಲ್‌ಪಿ ಸಲ್ಲಿಕೆ ಮಾಡಿದ್ದೇವೆ’ ಎಂದು ತಿಳಿಸಿದರು.

ಕಳೆದ 14 ವರ್ಷಗಳಿಂದ ಸೌಜನ್ಯ ಆತ್ಮ ತಿರುಗುತ್ತಲೇ ಇದೆ; ಈಗಲಾದರೂ ಆತ್ಮಕ್ಕೆ ಶಾಂತಿ ಸಿಗಲಿ ಎಂದ ಕಲ್ಲಡ್ಕ ಪ್ರಭಾಕರ್ ಭಟ್

ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​​ ಮರು ತನಿಖೆಗೆ ಆದೇಶಿಸಿದ್ದು, ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಕೂಡ ಸಹ ಎಸ್ಐಟಿ ರಚಿಸಿದೆ. ಈ ವಿಚಾರವಾಗಿ ಆರ್​​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪ್ರತಿಕ್ರಿಯೆ ನೀಡಿದ್ದಾರೆ.

ಮಂಗಳೂರಿನಲ್ಲು ಮಾಅತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್, ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​​ಐಟಿ ತಂಡ ರಚಿಸಿದ್ದು, ಒಳ್ಳೆಯ ವಿಚಾರ. ಕಳೆದ 14 ವರ್ಷಗಳಿಂದ ಸೌಜನ್ಯ ಆತ್ಮ ತಿರುಗುತ್ತಲೇ ಇದೆ. ಈಗಲಾದರೂ ಸೌಜನ್ಯ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.

ಸರ್ಕಾರ ರಚಿಸಿರುವ ಎಸ್ಐಟಿ ಬಗ್ಗೆ ಸ್ವಲ್ಪ ಅಸಮಾಧಾನವಿದೆ. ಸುಧೀರ್ ಕುಮಾರ್ ರೆಡ್ಡಿಯಂತವರೇ ಎಸ್ಐಟಿಯಲ್ಲಿದ್ರೆ ಒಳ್ಳೆಯದು ಎಂದರು.

ಎಸ್ಐಟಿ ರಚನೆಯಾಗಿರುವುದು ಒಳ್ಳೆಯದೇ, ಆದರೆ ಅದರಲ್ಲಿರುವ ಎಲ್ಲ ಅಧಿಕಾರಿಗಳು ಪರಿಪೂರ್ಣರಾಗಿಲ್ಲ ಎಂಬ ಸಂಶಯವಿದೆ. ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಒಳ್ಳೆ ಕಮಿಷನರ್, ಅವರು ಆ ಕಡೆ ಈ ಕಡೆ ಹೋಗ್ಲಿಕ್ಕಿಲ್ಲ. ಆದರೆ ಉಳಿದವರ ಬಗ್ಗೆ ನಮಗೆ ಸಂಶಯ ಇದೆ ಎಂದರು.

ಪ್ರಕರಣದಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ತನಿಖೆ ಮಾಡಲಿ. ಬೇರೆ ಯಾವುದೇ ಪ್ರಕರಣದಲ್ಲಿ ಈ ರೀತಿಯಾಗಿಲ್ಲ. ಎಸ್​ಐಟಿ ತಂಡ ನ್ಯಾಯ ಕೊಡುವ ಕೆಲಸ ಮಾಡಲಿ. ಅಧಿಕಾರಿಗಳು ಆ ಕಡೆ, ಈ ಕಡೆ ನೋಡದೆ, ಸತ್ಯ ಏನೆಂದು ಹುಡುಕಲಿ. ನೂರಕ್ಕೆ ನೂರು ಸತ್ಯ ಸಿಗುತ್ತದೆ ಎಂದು ಹೇಳಿದ್ದಾರೆ.

ಸಂತೋಷ್ ರಾವ್​ನನ್ನು ಸೇರಿಸದಂತೆ ಮತ್ತು ಈ ಹಿಂದಿನ ಅಧಿಕಾರಿಗಳನ್ನು ಸೇರಿಸದಂತೆ ಕೋರ್ಟ್ ಈ ಬಾರಿ ಸ್ಪಷ್ಟವಾಗಿ ಹೇಳಿದೆ. ಅಪರಾಧಿಗಳನ್ನು ಹುಡುಕುವ ತಾಕತ್ತು ಪೊಲೀಸರಿಗೆ ಇದೆ, ಮಂಗಳೂರು ಕಮಿಷನರ್ ರೀತಿಯ ಬಲವಾದ ಇನ್ನೊಂದಷ್ಟು ಅಧಿಕಾರಿಗಳನ್ನು ತಂಡದಲ್ಲಿ ಇಟ್ಟುಕೊಳ್ಳಬೇಕಿತ್ತು ಎಂದು ಹೇಳಿದರು.

ಇದೇ ವೇಳೆ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣ ಸಂಬಂಧ ವಿಚಾರಣೆಗೆ ತಮಗೆ ನೋಟಿಸ್ ನೀಡಿದ ಕುರಿತು ಪ್ರತಿಕ್ರಿಯೆ ನೀಡಿದ ಕಲ್ಲಡ್ಕ ಪ್ರಭಾಕರ ಭಟ್, ಕೇವಲ ಫೋನ್ ಮಾಡಿದ್ದಕ್ಕೆ ನನ್ನನ್ನು ವಿಚಾರಣೆಗೆ ಕರೆಯುವುದೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭರತ್ ಕುಮ್ದೇಲ್​ಗೆ ಮಂಪರು ಪರೀಕ್ಷೆ ಯಾಕೆ ಬೇಕು? ಏನು ಆಧಾರ ಇದೆ ಮಂಪರು ಪರೀಕ್ಷೆ ಮಾಡಲು?, ಮೊದಲು ಎಸ್ಪಿ ಅರುಣ್ ಕುಮಾರ್ ಮಂಪರು ಪರೀಕ್ಷೆ ಮಾಡಿಕೊಳ್ಳಲಿ ಎಂದಿದ್ದಾರೆ.

ಫೋನ್ ಮಾಡಿದ್ದಕ್ಕೆ ನನ್ನನ್ನ ವಿಚಾರಣೆಗೆ ಕರೆಯೋದಾ? ನಾನು ಜೈಲಿಗೆ ಹೋಗಿಯಾಗಿದೆ, ನನ್ನದು ಸಾಲದು ಎಂದು ನನ್ನ ಹೆಂಡತಿಯನ್ನು ಜೈಲಿಗೆ ಹಾಕಿದ್ದಾರೆ. ಇನ್ನು ಏನಿದ್ರೂ ಗಲ್ಲಿಗೆ ಹಾಕಬೇಕು. ಅಷ್ಟು ಮಾತ್ರ ಬಾಕಿ ಇರೋದು ತಾಕತ್ ಇದ್ರೆ ನನ್ನನ್ನ ಗಲ್ಲಿಗೆ ಹಾಕಲಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ನನ್ನ ಮೇಲೂ ಗೂಂಡಾ ಕಾಯ್ದೆ ಹಾಕುವ ಯೋಚನೆಯೂ ಇರಬಹುದು. ಹಾಗಾಗಿ ವಿಚಾರಣೆ ಎಂದು ನೋಟಿಸ್ ಕೊಟ್ಟಿರಬಹುದು ಎಂದು ಕಿಡಿಕಾರಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular