HomeKarnatakaಪರೀಕ್ಷಾ ಭಯ ನಿವಾರಣೆಗೆ ಮಾಸ್ಟರ್ ಪ್ಲಾನ್: 4,500 ವಿದ್ಯಾರ್ಥಿಗಳಿಗೆ ಒತ್ತಡ, ಸಮಯ ನಿರ್ವಹಣೆ ಬಗ್ಗೆ ಸೈಕಾಲಜಿ...

ಪರೀಕ್ಷಾ ಭಯ ನಿವಾರಣೆಗೆ ಮಾಸ್ಟರ್ ಪ್ಲಾನ್: 4,500 ವಿದ್ಯಾರ್ಥಿಗಳಿಗೆ ಒತ್ತಡ, ಸಮಯ ನಿರ್ವಹಣೆ ಬಗ್ಗೆ ಸೈಕಾಲಜಿ ಕಾರ್ಯಾಗಾರ; ವಿಶ್ವದಾಖಲೆ ಬರೆದ 15 ವರ್ಷದ ವಿದ್ಯಾರ್ಥಿನಿ

ಮಂಗಳೂರು: ಪರೀಕ್ಷಾ ಭಯ ಎಂಬುದು ಸಾಮಾನ್ಯವಾಗಿ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಕಡದೇ ಇರದು. ಪರೀಕ್ಷೆ ಸಮೀಪಿಸುತ್ತಿರುವಾಗಲೇ ಬಹುತೇಕ ವಿದ್ಯಾರ್ಥಿಗಳಲ್ಲಿ ಎದೆಯಲ್ಲಿ ಢವ ಢವ, ಆತಂಕ ಶುರುವಾಗುತ್ತದೆ. ಇನ್ನು ಪರೀಕ್ಷೆಯ ಸಮಯದಲ್ಲಂತು ವಿದ್ಯಾರ್ಥಿಗಳು ಮಾತ್ರವಲ್ಲ, ವಿದ್ಯಾರ್ಥಿಗಳ ಪೋಷಕರು ಭಯ, ಆತಂಕ, ಒತ್ತಡಕ್ಕೆ ಒಳಗಾಗುತ್ತಾರೆ. ಇಂತಹ ಸಂದರ್ಭದಲ್ಲಿ ಶಿಕ್ಷಕರು, ತಜ್ಞರು ಪರೀಕ್ಷಾ ಒತ್ತಡ ಮತ್ತು ಸಮಯ ನಿರ್ವಹಣೆ ಕುರಿತು ಪಾಠ ಮಾಡುವುದು, ಉಪನ್ಯಾಸ ನೀಡುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೋರ್ವ 10ನೇ ತರಗತಿ ವಿದ್ಯಾರ್ಥಿನಿ ತನ್ನದೇ ವಯಸ್ಸಿನ ವಿದ್ಯಾಅರ್ಥಿಗಳ, ಸಹಪಾಠಿಗಳ ಪರೀಕ್ಷಾ ಭಯವನ್ನು ಹೋಗಲಾಡಿಸಲು ವಿಶೇಷ ಅಭಿಯಾನ ನಡೆಸಿ ವಿಶ್ವ ದಾಅಖಲೆ ನಿರ್ಮಿಸಿದ್ದಾಳೆ.

15 ವರ್ಷದ ವಿದ್ಯಾರ್ಥಿನಿ ವಿಷ್ಣುಪ್ರಿಯಾ ಇಂತದ್ದೊಂದು ಅಭಿಯಾನದ ಮೂಲಕ ಗಮನ ಸೆಳೆದಿರುವುದಲ್ಲದೇ ವಿಶ್ವ ದಾಖಲೆ ಮಾಡಿದ್ದಾಳೆ. ಮೂಡುಬಿದಿರೆಯ ಆಳ್ವಾಸ್ ಸೆಂಟ್ರಲ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ವಿಷ್ಣುಪ್ರಿಯಾ ಪೈ, 15 ದಿನಗಳಲ್ಲಿ 51 ಶಾಲೆಗಳಿಗೆ ಭೇಟಿ ನೀಡಿ ಸುಮಾರು 4,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ನಿವಾರಣೆ, ಒತ್ತಡ ಹಾಗೂ ಸಮಯ ನಿರ್ವಹಣೆ ಬಗ್ಗೆ ಮಾರ್ಗದರ್ಶ್ನ ನೀಡಿ ದಾರಿದೀಪವಾಗುವ ಮೂಲಕ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಪುಟಕ್ಕೆ ಸೇರಿದ್ದಾಳೆ.

ಹಾಗಾದರೆ 15 ವರ್ಷದ ವಿದ್ಯಾರ್ಥಿನಿ ವಿದ್ಯಾರ್ಥಿಗಳ ಪರೀಕ್ಷಾ ಭಯ ನಿವಾರಿಸಿದ್ದಾದರೂ ಹೇಗೆ? ಇಲ್ಲಿದೆ ಮಾಹಿತಿ. ವಿಷ್ಣುಪ್ರಿಯಾಗೆ 6ನೇ ತರಗತಿಯಲ್ಲಿದ್ದಾಗಲೇ ಮಾನಸಿಕ ಆರೋಗ್ಯ, ಕೌನ್ಸೆಲಿಂಗ್ ಹಾಗೂ ಸೈಕಾಲಜಿ ವಿಷಯಗಳಲ್ಲಿ ತೀವ್ರ ಆಸಕ್ತಿ ಮೂಡಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ‘ಇಂಡಿಯನ್ ಕೌನ್ಸೆಲಿಂಗ್ ಸರ್ವಿಸಸ್’ ಮೂಲಕ ಆನ್‌ಲೈನ್ ಕೋರ್ಸ್‌ಗಳನ್ನು ಪೂರೈಸಿ ಜ್ಞಾನ ಹೆಚ್ಚಿಸಿಕೊಂಡಿದ್ದಾಳೆ. ತಾನು ಕಲಿತ ಸೈಕಾಲಜಿ ವಿಚಾರಗಳನ್ನು ಪುಸ್ತಕಕ್ಕೆ ಸೀಮಿತಗೊಳಿಸದೆ, ತನ್ನಂತೆಯೇ ಪರೀಕ್ಷೆಯ ಆತಂಕ ಎದುರಿಸುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಮುಂದಾಗಿ ಕಾರ್ಯರೂಪಕ್ಕೆ ತಂದಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಗಸ್ಟ್ 24 ರಿಂದ ಸೆಪ್ಟೆಂಬರ್ 11 ರವರೆಗೆ ನಡೆಸಿದ ಜಾಗೃತಿ ಅಭಿಯಾನದಲ್ಲಿ ವಿಷ್ಣುಪ್ರಿಯಾ ಕರ್ನಾಟಕದ ಹಾಸನ, ಕೊಡಗು, ಬೆಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ 51 ಶಾಲೆಗಳಿಗೆ ಭೇಟಿ ನೀಡಿದ್ದಾಳೆ. ಪ್ರತಿದಿನ 1 ಗಂಟೆಯ ಕಾರ್ಯಾಗಾರ ನಡೆಸಿ, ಪರೀಕ್ಷಾ ಒತ್ತಡವನ್ನು ನಿರ್ವಹಿಸುವುದು ಹೇಗೆ?, ಸಮಯ ನಿರ್ವಹಣೆ, ಸುಲಭ ಅಧ್ಯಯನ ತಂತ್ರಗಳು ಹಾಗೂ ಪರೀಕ್ಷೆಗೆ ಸಿದ್ಧರಾಗುವ ವೈಜ್ಞಾನಿಕ ವಿಧಾನಗಳನ್ನು ಅತ್ಯಂತ ಸರಳವಾಗಿ ವಿದ್ಯಾರ್ಥಿಗಳಿಗೆ ವಿವರಿಸಿ ಧೈರ್ಯ ತುಂಬಿದ್ದಾಳೆ.

ವಿಷ್ಣುಪ್ರಿಯಾ ಅವರ ಈ ಅಭಿಯಾನ ಶೈಕ್ಷಣಿಕ ಸಾಹಸವನ್ನು ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಸಂಸ್ಥೆಯು ಹತ್ತಿರದಿಂದ ವೀಕ್ಷಿಸಿ ವಿಶ್ವ ದಾಖಲೆಯಾಗಿ ಗುರುತಿಸಿದೆ. ಅಕ್ಟೋಬರ್ 1 ರಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರ ಉಪಸ್ಥಿತಿಯಲ್ಲಿ ಈ ವಿಶ್ವ ದಾಖಲೆಯ ಅಧಿಕೃತ ಪ್ರಮಾಣಪತ್ರವನ್ನು ಹಸ್ತಾಂತರಿಸಲಾಗುತ್ತಿದೆ. 10ನೇ ತರಗತಿ ವಿದ್ಯಾರ್ಥಿನಿ ತನ್ನದೇ ವಯಸ್ಸಿನ ವಿದ್ಯಾರ್ಥಿಗಳಿಗೆ ಕಾಡುತ್ತಿದ್ದ ಪರೀಕ್ಷಾ ಭಯ ಎಂಬ ಪೆಡಂಭೂತವನ್ನು ಹೋಗಲಾಡಿಸಲು ಮಾಡಿದ ಈ ಸಾಧನೆ ನಿಜಕ್ಕೂ ಶ್ಲಾಘನೀಯ. ವಿದ್ಯಾರ್ಥಿನಿ ವಿಷ್ಣುಪ್ರಿಯಾ ಅವರ ಈ ಪ್ರಯತ್ನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular