HomeEntertainment'ರಣಬಲಿ' ಚಿತ್ರತಂಡದಿಂದ ಬಿಗ್ ಸರ್ಪ್ರೈಸ್! ಪ್ರಚಾರಕ್ಕಾಗಿ 4 ಸಂಚಿಕೆಗಳ ವಿಶೇಷ ಡಾಕ್ಯುಮೆಂಟರಿ ಸರಣಿ!

‘ರಣಬಲಿ’ ಚಿತ್ರತಂಡದಿಂದ ಬಿಗ್ ಸರ್ಪ್ರೈಸ್! ಪ್ರಚಾರಕ್ಕಾಗಿ 4 ಸಂಚಿಕೆಗಳ ವಿಶೇಷ ಡಾಕ್ಯುಮೆಂಟರಿ ಸರಣಿ!

ಟಾಲಿವುಡ್‌ನ ಯುವ ನಟ ವಿಜಯ್ ದೇವರಕೊಂಡ ಅಭಿನಯದ ಬಹುನಿರೀಕ್ಷಿತ ‘ರಣಬಲಿ’ ಸಿನಿಮಾದ ಮೇಲಿನ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಜನಿಕಾಂತ್ ಅಭಿನಯದ ‘ಜೈಲರ್ 2’ ಚಿತ್ರಕ್ಕೆ ಪೈಪೋಟಿ ನೀಡಲು ಸಜ್ಜಾಗಿರುವ ಈ ಪೀರಿಯಡ್ ವಾರ್ ಆಕ್ಷನ್ ಡ್ರಾಮಾ ಚಿತ್ರವು 2026ರ ಅಕ್ಟೋಬರ್ 16 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಮೊದಲ ಹಾಡು ‘ಎಂದಯ್ಯ ಸಾಮಿ’ ಪ್ರೇಕ್ಷಕರಿಂದ ಭರ್ಜರಿ ಪ್ರಶಂಸೆ ಪಡೆದು ಸೂಪರ್ ಹಿಟ್ ಆಗಿದೆ. ಇದೇ ಹುಮ್ಮಸ್ಸಿನಲ್ಲಿರುವ ಚಿತ್ರತಂಡ ಪ್ರಚಾರ ಕಾರ್ಯವನ್ನು ಹೊಸ ಹಂತಕ್ಕೆ ಕೊಂಡೊಯ್ಯಲು ಸಜ್ಜಾಗಿದ್ದು, ಶೀಘ್ರದಲ್ಲೇ 4 ಸಂಚಿಕೆಗಳ ವಿಶೇಷ ಡಾಕ್ಯುಮೆಂಟರಿ ಸರಣಿಯನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ.

ಈ ವಿಶೇಷ ಸರಣಿಯಲ್ಲಿ ನಟ ವಿಜಯ್ ದೇವರಕೊಂಡ, ನಟಿ ರಶ್ಮಿಕಾ ಮಂದಣ್ಣ ಹಾಗೂ ನಿರ್ದೇಶಕ ರಾಹುಲ್ ಸಾಂಕೃತ್ಯಾಯನ್ ಭಾಗವಹಿಸಲಿದ್ದು, ಸಿನಿಮಾದ ಹಿನ್ನೆಲೆ ಹಾಗೂ ಈವರೆಗೆ ಬಹಿರಂಗವಾಗದ ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಳ್ಳಲಿದ್ದಾರೆ. ಈ ಸರಣಿ ಬಿಡುಗಡೆಯಾಗುವ ಒಟಿಟಿ ವೇದಿಕೆ, ಸಮಯ ಮತ್ತು ಭಾಷೆಗಳ ವಿವರಗಳನ್ನು ಚಿತ್ರತಂಡ ಶೀಘ್ರದಲ್ಲೇ ಪ್ರಕಟಿಸಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ಅತ್ಯಂತ ಅದ್ದೂರಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದು, ಅಜಯ್-ಅತುಲ್ ಸಂಗೀತ ಸಂಯೋಜಿಸಿದ್ದಾರೆ. ಟಿ-ಸೀರೀಸ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗುಲ್ಷನ್ ಕುಮಾರ್ ಹಾಗೂ ಭೂಷಣ್ ಕುಮಾರ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular