HomeKarnatakaಕೆಪಿಎಸ್‌ಸಿ ಅಕ್ರಮ: ಸ್ನೇಹಿತನಿಗೆ ಸೀಟ್ ಕೊಡಿಸಲು ಮತ್ತೋರ್ವನೊಂದಿಗೆ 30 ಲಕ್ಷ ಡೀಲ್ ಮಾಡಿಕೊಂಡಿದ್ದ ಕನ್ನಾಳೆ ಆಪ್ತ...

ಕೆಪಿಎಸ್‌ಸಿ ಅಕ್ರಮ: ಸ್ನೇಹಿತನಿಗೆ ಸೀಟ್ ಕೊಡಿಸಲು ಮತ್ತೋರ್ವನೊಂದಿಗೆ 30 ಲಕ್ಷ ಡೀಲ್ ಮಾಡಿಕೊಂಡಿದ್ದ ಕನ್ನಾಳೆ ಆಪ್ತ ಪವನ್

ಬೆಂಗಳೂರು: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸುತ್ತಿದ್ದಂತೆ ಆರೋಪಿಗಳ ಕಳ್ಳಾಟ ಬಗೆದಷ್ಟು ಬಯಲಾಗುತ್ತಿದೆ. ಕಿಂಗ್ ಪಿನ್ ಬಸವರಾಜ್ ಕನ್ನಾಳೆ ಶಿಷ್ಯ ಹಾಗೂ ಆಪ್ತ ಪವನ್, ತನ್ನ ಸ್ನೇಹಿತನಿಗೆ ಸೀಟ್‌ ಕೊಡಿಸಲು ಮತ್ತೊಬ್ಬ ಅಭ್ಯರ್ಥಿ ಜೊತೆ 30 ಲಕ್ಷ ರೂ. ಡೀಲ್ ಮಾಡಿಕೊಂಡಿದ್ದ ಎಂಬ ವಿಚಾರ ತನಿಖೆಯಲ್ಲಿ ಬಯಲಾಗಿದೆ.

ಈ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿರುವ ಪವನ್ ಗಾಗಿ ಸಿಐಡಿ ಪೊಲಿಸರು ಹುಡುಕಾಟ ನಡೆಸಿದ್ದಾರೆ. ಬೀದರ್ ಜಿಲ್ಲೆಯ ಅಭ್ಯರ್ಥಿಯೊಬ್ಬನ ಕುಟುಂಬ ಕಡುಬಡವರಿದ್ದ ಕಾರಣ ಅವನಿಗೆ ಪಶು ವೈದ್ಯಾಧಿಕಾರಿ ಸೀಟ್‌ಗಾಗಿ ಅಷ್ಟೊಂದು ಹಣ ಹೊಂದಿಸಲು ಸಾಧ್ಯವಾಗಿರಲಿಲ್ಲ. ಕನ್ನಾಳೆ ಶಿಷ್ಯನಾಗಿದ್ದ ಪವನ್‌ ಹಾಗೂ ಆ ಅಭ್ಯರ್ಥಿಯ ನಡುವೆ ಒಳ್ಳೆಯ ಒಡನಾಟವಿತ್ತು. ಆದ್ದರಿಂದ ತನ್ನ ಗೆಳೆಯನಿಗೆ ಫ್ರೀ ಸೀಟ್‌ ಕೊಡಿಸಿ ಅಂತಾ ಪವನ್‌, ಕನ್ನಾಳೆ ಬಳಿ ಮನವಿ ಮಾಡಿಕೊಂಡಿದ್ದ. ಕನ್ನಾಳೆ ಆತನ ಮನವಿ ನಿರಾಕರಿಸಿದ್ದಕ್ಕೆ ಪವನ್‌ ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದ.

ಪವನ್ ಗೆ ಕನ್ನಾಳೆ, ಯಾರೊಬ್ಬರಿಗೂ ಪುಕ್ಕಟ್ಟೆಯಾಗಿ ಸರ್ಕಾರಿ ಕೆಲಸ ಕೊಡಿಸಲು ಆಗೋದಿಲ್ಲ, ನನ್ನ ಬಳಿ ದಾನ-ಧರ್ಮದ ವಿಚಾರ ಮಾತಾಡ್ಬೇಡ ಎಂದು ಬೈದಿದ್ದನಂತೆ. ಇದರಿಂದ ಪವನ್‌ ತನ್ನ ಸ್ನೇಹಿತನಿಗೋಸ್ಕರ ಬೀದರ್ ಜಿಲ್ಲೆಯ ಮತ್ತೊಬ್ಬ ಅಭ್ಯರ್ಥಿ ಜೊತೆ ಸೀಟ್‌ಗಾಗಿ 30 ಲಕ್ಷ ಹಣ ಡೀಲ್ ಕುದುರಿಸಿದ್ದ. ತನಿಖೆ ವೇಳೆ ಆ 30 ಲಕ್ಷದಲ್ಲಿ 17 ಲಕ್ಷವನ್ನ ಸ್ನೇಹಿತ ಅಭ್ಯರ್ಥಿಯ ಹೆಸರಲ್ಲಿ ಕನ್ನಾಳೆಗೆ ನೀಡಿರೋದು ಬೆಳಕಿಗೆ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲದೇ ಈಗಾಗಲೇ ಈ 17 ಲಕ್ಷ ಹಣವನ್ನ ಬಸವರಾಜ್ ಕನ್ನಾಳೆಯಿಂದ ಸೀಜ್ ಮಾಡಿರೋ ಸಿಐಡಿ ಅಧಿಕಾರಿಗಳು, ಮೊದಲ ಹಂತದ ತನಿಖೆಯಲ್ಲಿ 11 ಅಭ್ಯರ್ಥಿಗಳಿಂದ 1.45 ಕೋಟಿ ಹಣ ಕನ್ನಾಳೆ ಟೀಂ ಪಡೆದಿದ್ದು ಪತ್ತೆ ಮಾಡಿದ್ದಾರೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಸವರಾಜ್ ಕನ್ನಾಳೆ ಶಿಷ್ಯ ಪವನ್‌ ನಾಪತ್ತೆಯಾಗಿದ್ದು, ಸಿಐಡಿ ಅಧಿಕಾರಿಗಳು ಆತನ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.

ಹಾವೇರಿ ಜಿಲ್ಲಾಸ್ಪತ್ರೆ ಕ್ಯಾಂಟೀನ್ ತಿಂಡಿಯಲ್ಲಿ ಹಲ್ಲಿ ಪತ್ತೆ; ಕೇಸರಿಬಾತ್ ನಲ್ಲಿ ಇದ್ದ ಸತ್ತ ಹಲ್ಲಿ ಕಂಡು ಶಾಕ್ ಆದ ರೋಗಿ ಕುಟುಂಬ

ಹಾವೇರಿ: ಹಾವೇರಿ ಜಿಲ್ಲಾಸ್ಪತ್ರೆಯ ಕ್ಯಾಂಟೀನ್ ತಿಂಡಿಯಲ್ಲಿ ಹಲ್ಲಿ ಪತ್ತೆಯಾಗಿರುವ ಘಟನೆ ನಡೆದಿದ್ದು, ಸಾರ್ವಜನಿಕರು ಆಸ್ಪತ್ರೆಯ ಕ್ಯಾಂಟೀನ್ ಅವ್ಯವಸ್ಥೆ ಕಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾವೇರಿ ಜಿಲ್ಲಾಸ್ಪತ್ರೆಗೆ ಅನಾರೋಗ್ಯದಿಂದ ದಾಖಲಾಗಿದ್ದ ರೋಗಿಯೊಬ್ಬರಿಗೆ ನೀಡಲಾಗಿದ್ದ ಉಪ್ಪಿಟ್ಟು- ಕೇಸರಿಬಾತ್ ತಿಡಿಯಲ್ಲಿ ಹಲ್ಲಿ ಪತ್ತೆಯಾಗಿದೆ. ಜಿಲ್ಲಾಸ್ಪತ್ರೆಯ ಕ್ಯಾಂಟೀನ್ ನಿಂದ ಪಾರ್ಸಲ್ ತೆಗೆದುಕೊಂಡಿದ್ದ ಹೋಗಿದ್ದ ಕೇಸರಿ ಬಾತ್ ನಲ್ಲಿ ಸತ್ತ ಹಲ್ಲಿ ಪತ್ತೆಯಾಗಿದ್ದು, ರೋಗಿ ಹಾಗೂ ಕುಟುಂಬಸ್ಥರು ಹೌಹಾರಿದ್ದಾರೆ.

ತಕ್ಷಣ ರೋಗಿಯ ಕುಟುಂಬದವರು ಆಸ್ಪತ್ರೆಯ ವೈದ್ಯರು ಹಾಗೂ ಆಡಳಿತ ಮಂಡಳಿ, ಕ್ಯಾಂಟೀನ್ ಮಾಲೀಕರ ಗಮನಕ್ಕೆ ತಂದಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರ ಕುಟುಂಬದವರು ಇಂದು ಬೆಳಿಗ್ಗೆ ಜಿಲ್ಲಾಸ್ಪತ್ರೆಯ ಕ್ಯಾಂಟೀನ್ ನಲ್ಲಿ ತಿಂಡಿ ಸವಿದು, ವಾರ್ಡ್ ನಲ್ಲಿದ್ದ ರೋಗಿಗೆ ತಿಂಡಿ ಪಾರ್ಸಲ್ ತೆಗೆದುಕೊಂಡು ಹೋಗಿದ್ದರು. ಕ್ಯಾಂಟೀನ್ ನಿಂದ ತೆಗೆದುಕೊಂಡು ಹೋಗಿದ್ದ ಕೇಸರಿಬಾತ್ ನಲ್ಲಿ ಸತ್ತ ಹಲ್ಲಿ ಪತ್ತೆಯಾಗಿದ್ದು, ಶಾಕ್ ಆಗಿದ್ದಾರೆ.

ಈ ಬಗ್ಗೆ ಕ್ಯಾಂಟೀನ್ ಮಾಲೀಕರಿಗೆ ಕೇಳಿದರೆ ಏನೀ ಕಣ್ತಪ್ಪಿನಿಂದ ಹೀಗಾಗಿದೆ. ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ ಎಂದು ಸಮಜಾಯಿಷಿ ನೀಡಿದ್ದಾರೆ. ಆಕ್ರೋಶಗೊಂಡ ರೋಗಿ ಕುಟುಂಬದವರು, ಸಾರ್ವಜನಿಕರು ಕ್ಯಾಂಟೀನ್ ಒಳಗೆ ಪರಿಶೀಲಿಸಿದಾಗ ಕ್ಯಾಂಟೀನ್ ಸಂಪೂರ್ಣ ಅಸ್ವಚ್ಚತೆಯಿಂದ ಕೂಡಿದ್ದು ಎಲ್ಲಿ ನೋಡಿದ್ದರಲ್ಲಿ ಜಿಳರೆಗಳು ರಾಜಾರೋಷವಾಗಿ ಓಡಾಡುತ್ತಿರುವುದು, ಹುಳಗಳು ಇರುವುದು ಪತ್ತೆಯಾಗಿದೆ. ರೋಗಿಗಳಿಗೆ ಕೊಡುವ ಆಹಾರದ ಪ್ಲೇಟ್ ಗಳ ಮೇಲೂ ಜಿರಳೆಗಳು ಓಡಾಡುತ್ತಿದ್ದವು.

ಬಡ ರೋಗಿಗಳು ಅನಾರೋಗ್ಯದಿಂದ ಜೀವ ಉಳಿಸಿಕೊಳ್ಳು ಜಿಲ್ಲಾಸ್ಪತ್ರೆಗೆ ಬರುತ್ತಾರೆ. ಆದರೆ ಜಿಲ್ಲಾಸ್ಪತ್ರೆಯ ಕ್ಯಾಂಟೀನ್ ಗಳೇ ಜೀವ ತೆಗೆಯ್ವ ಹಂತದಲ್ಲಿದೆ ಅಷ್ಟರ ಮಟ್ಟಿಗೆ ಕ್ಯಾಂಟೀನ್ ನಲ್ಲಿ ಅಸ್ವಚ್ಚತೆ, ಜಿರಳೆ ಓಡಾಟ ಕಂಡುಬರುತ್ತಿದ್ದವು. ಇದರಿಂದ ಜನರು ರೊಚ್ಚಿಗೇಳುತ್ತಿದ್ದಂತ್ರೆ ಆಸ್ಪತ್ರೆಯ ಕ್ಯಾಂಟೀನ್ ಗೆ ಬೀಗ ಹಾಕಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular