HomeKarnataka2028ಕ್ಕೂ ಡಿಕೆಶಿಯೇ ಸಿಎಂ ಆಗಲಿ, ನನಗೆ ವಯಸ್ಸಿದೆ; ನಾನಿನ್ನೂ ಕಾಯುತ್ತೇನೆ ಎಂದ ಸತೀಶ್ ಜಾರಕಿಹೊಳಿ

2028ಕ್ಕೂ ಡಿಕೆಶಿಯೇ ಸಿಎಂ ಆಗಲಿ, ನನಗೆ ವಯಸ್ಸಿದೆ; ನಾನಿನ್ನೂ ಕಾಯುತ್ತೇನೆ ಎಂದ ಸತೀಶ್ ಜಾರಕಿಹೊಳಿ

ಮೈಸೂರು: 2028ಕ್ಕೆ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದಿದ್ದ ಬಗ್ಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. ಅವಕಾಶ ಸಿಕ್ಕರೆ ಆಗುತ್ತೇನೆ ಎಂದಿದ್ದೆ. ಆದರೆ ಈಗ ಡಿ.ಕೆ.ಶಿವಕುಮಾರ್ ಅವರೇ ತಾವು ಮುಂದುವರೆಯುವುದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಅವಕಾಶ ಸಿಕ್ಕರೆ 2028ಕ್ಕೆ ನಾನು ಸಿಎಂ ಆಗುತ್ತೇನೆ ಎಂದು ಹೇಳಿದ್ದೆ. ಆದರೆ ಡಿ.ಕೆ.ಶಿವಕುಮಾರ್ ನಾನೇ ಮುಂದೆಯೂ ಸಿಎಂ ಎಂದು ಹೇಳುತ್ತಿದ್ದಾರೆ. ಹಾಗಾಗಿ ಅವರೇ ಸಿಎಂ ಆಗಲಿ ಸಂತೋಷ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2028ಕ್ಕೂ ಡಿ.ಕೆ.ಶಿವಕುಮಾರ್ ಅವರೇ ಸಿಎಂ ಆಗಲಿ, ನಮಗೆ ಇನ್ನೂ ವಯಸ್ಸಿದೆ. ನಾನಿನ್ನೂ ಕಾಯುತ್ತೇನೆ ಎಂದರು. ಶಿವಕುಮಾರ್ ಅವರಿಂದಲೇ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿ. ಅವರೇ ಸಿಎಂ ಆಗಿ ಮುಂದುವರೆಯಲಿ ಸಂತೋಷವಿದೆ ಎಂದು ಹೇಳಿದರು.

ಇದೇ ವೇಳೆ ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿಹೊಳಿ ನಡಿವೆ ಅಸಮಾಧಾನವಿದೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಅಸಮಾಧಾನವಿಲ್ಲ. ನಾವು ಚನ್ನಾಗಿಯೇ ಇದ್ದೇವೆ ಎಂದರು.

ಸಿದ್ದರಾಮಯ್ಯ ನಮಗೆ ಈಗಲೂ ಆರ್ಮಿ ಕ್ಯಾಪ್ಟನ್. ನಾನು ಅದರ ವೈಸ್ ಕ್ಯಾಪ್ಟನ್. ಯಾರಿಗೂ ಅನುಮಾನ ಬೇಡ. ನಾವಿಬ್ಬರೂ ಚನ್ನಾಗಿಯೇ ಇದ್ದೇವೆ. ಸಿದ್ದರಾಮಯ್ಯ ಅವರ ಆರ್ಮಿ ಛಿದ್ರವಾಗಿಲ್ಲ ಎಂದು ಹೇಳಿದರು.

ನನ್ನ ಮನೆ ಮೇಲೆ ಇಡಿ ದಾಳಿ ನಡೆದಾಗ ಯತೀಂದ್ರ ಸಿದ್ದರಾಮಯ್ಯ ಅವರು ಕರೆ ಮಾಡಿ ಮಾತನಾಡಿದ್ದರು. ಧೈರ್ಯ ತುಂಬಿದ್ದರು. ಮನೆಯಲ್ಲಿ ಒಬ್ಬರು ಸ್ವಾಂತ್ವನ ಹೇಳಿದರೆ ಸಾಕು. ಮನೆಯವರೆಲ್ಲ ಸಾಂತ್ವನ ಹೇಳಬೇಕೆಂದು ಬಯಸಬಾರದು. ಮದುವೆ, ಗೃಹಪ್ರವೇಶಕ್ಕೆ ಮನೆಯಿಂದ ಒಬ್ಬರು ಹೋಗುತ್ತಾರೆ. ಎಲ್ಲರೂ ಬರಲಿ ಎಂದು ನಿರೀಕ್ಷೆ ಮಾಡಿದರೆ ಹೇಗೆ? ಎಂದು ಪ್ರಶ್ನಿಸಿದರು.

ಇನ್ನು ಮೊನ್ನೆ ಬೆಂಗಳೂರಿನಲ್ಲಿ ನಡೆದಿದ್ದು ಅಹಿಂದ ಸಮಾವೇಶವಲ್ಲ. ಅದು ಕೇವಲ ಹಿಂದುಳಿದ ವರ್ಗಗಳ ಸಮಾವೇಶ. ಸಮಾವೇಶ ಆಯೋಜನೆ ಮಾಡಿದವ್ಬರು ನನ್ನನ್ನು ಕರೆದಿಲ್ಲ. ಹಾಗಂತ ಯಾಕೆ ನನ್ನ ಕರೆದಿಲ್ಲ ಎಂದು ಕೇಳಲು ಆಗುತ್ತಾ? ಎಂದು ಪ್ರಶ್ನಿಸಿದರು. ಅಹಿಂದ ಸಂಘಟನೆ ಭದ್ರವಾಗಿದೆ ಯಾವುದೇ ಗೊಂದಲಗಳು ಇಲ್ಲ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular