HomeIndiaಮಕ್ಕಳ ಬದಲು ತನ್ನ ಪ್ರೇಯಸಿಗೆ ಆಸ್ತಿ ಬರೆಯಲು ಮುಂದಾದ ಉದ್ಯಮಿ ತಂದೆ: ಅಪ್ಪನನ್ನೇ ಹತ್ಯೆಗೈದ ಮಗ

ಮಕ್ಕಳ ಬದಲು ತನ್ನ ಪ್ರೇಯಸಿಗೆ ಆಸ್ತಿ ಬರೆಯಲು ಮುಂದಾದ ಉದ್ಯಮಿ ತಂದೆ: ಅಪ್ಪನನ್ನೇ ಹತ್ಯೆಗೈದ ಮಗ

ಲಕ್ನೋ: ಉದ್ಯಮಿ ತಂದೆ ತನ್ನ ಪ್ರೇಯಸಿಗೆ ಎಲ್ಲಾ ಆಸ್ತಿ ಬರೆಯುತ್ತಾನೆಂಬ ಆತಂಕದಿಂದ ಮಗ ಮಹಾಶಯ ತಂದೆಯನ್ನೇ ಹತ್ಯೆ ಮಾಡಿರುವ ಘೋರ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಔಷಧಿ ವ್ಯಾಪಾರಿ ಉದ್ಯಮಿ ವಿನೀತ್‌ ಮನೋಚಾ (60) ಕೊಲೆಯಾದ ದುರ್ದೈವಿ. ವಿಶಾಲ್ ತಂದೆಯನ್ನೇ ಹತ್ಯೆಗೈದ ಮಗ. ಇಂದಿರಾನಗರ ಪ್ರದೇಶದಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ವಿನೀತ್ ಮನೋಚಾ ಮೃತದೇಹ ಪತ್ತೆಯಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಕರಣದ ತನಿಖೆ ನಡೆಸಿದ ಪಿಲೀಸರಿಗೆ ಪುತ್ರನೇ ತನ್ನ ತಂದೆಯನ್ನು ಹತ್ಯೆ ಮಾಡಿರುವ ವಿಚಾರ ಬಯಲಾಗಿದೆ. ವಿನೀತ್‌ ಅವರ ಮತ್ತೊಬ್ಬ ಪುತ್ರ ಸುಬ್ರತ್‌ ಮತ್ತು ಪತ್ನಿ ಶಾಲು ಪಾರ್ಟಿಯೊಂದಕ್ಕೆ ತೆರಳಿದ್ದರು. ಈ ವೇಳೆ ವಿನೀತ್‌ ಒಬ್ಬರೇ ಮನೆಯಲ್ಲಿದ್ದರು. ಆಗ ಸಂಚು ರೂಪಿಸಿ ಪುತ್ರ ವಿಶಾಲ್‌ ತನ್ನ ತಂದೆಯ ಕೊಲೆ ಮಾಡಿದ್ದಾನೆ.

ಪ್ರಾಥಮಿಕ ತನಿಖೆಯಲ್ಲಿ ವಿನೀತ್ ಅವರ ಸೊಸೆಯೇ ಈ ಸಂಚಿನ ರೂವಾರಿ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಸೊಸೆ, ವಿನೀತ್ ಮಾಜಿ ಉದ್ಯೋಗಿ, ಪುತ್ರ ವಿಶಾಲ್ ಹಾಗೂ ಆತನ ಸಹಚರ ರಾಜ್‌ಕಿಶೋರ್ ಅವರನ್ನು ಬಂಧಿಸಿದ್ದಾರೆ.

ತಂದೆಯ ಕೊಲೆ ಬಗ್ಗೆ ಸುಬ್ರತ್‌ ನೀಡಿದ ದೂರಿನಲ್ಲಿ, ತನ್ನ ತಂದೆ ಹಲವು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತನ್ನೆಲ್ಲಾ ಆಸ್ತಿಯನ್ನು ಬೇರೊಬ್ಬ ಮಹಿಳೆಗೆ ನೀಡಲು ತಂದೆ ಸಿದ್ಧರಾಗಿದ್ದರು. ಈ ಕಾರಣಕ್ಕೆ ನನ್ನ ಸಹೋದರ ಕೊಲೆ ಮಾಡಿದ್ದಾನೆಂದು ಸುಬ್ರತ್‌ ಪೊಲೀಸರಿಗೆ ತಿಳಿಸಿದ್ದಾರೆ.

ಫೋನ್ ಕರೆ ವಿವರಗಳ ದಾಖಲೆಗಳು , ಸಿಸಿಟಿವಿ ದೃಶ್ಯಾವಳಿಗಳು, ಡಿಜಿಟಲ್ ಹಾಗೂ ವೈಜ್ಞಾನಿಕ ಸಾಕ್ಷ್ಯಗಳು, ವಶಪಡಿಸಿಕೊಳ್ಳಲಾದ ವಸ್ತುಗಳು ಮತ್ತು ಇತರ ಪರೋಕ್ಷ ಸಾಕ್ಷ್ಯಗಳ ವಿಶ್ಲೇಷಣೆಯ ಮೂಲಕ ಈ ಪಿತೂರಿಯು ಬೆಳಕಿಗೆ ಬಂದಿದೆ ಎಂದು ಕಾನ್ಪುರದ ಪೊಲೀಸ್ ಆಯುಕ್ತ ರಘುಬೀರ್ ಲಾಲ್ ತಿಳಿಸಿದ್ದಾರೆ. ಆಸ್ತಿಗಾಗಿ ಮಗ ತನ್ನ ತಂದೆಯನ್ನೇ ಕೊಲೆಗೈದು ಸದ್ಯ ಜೈಲುಪಾಲಾಗಿದ್ದಾನೆ.

ಪತ್ನಿಯನ್ನು ಹತ್ಯೆಗೈದು ಶವವನ್ನು ಹಾಸಿಗೆಯಲ್ಲಿ ಸುತ್ತಿ ಎಸೆದಿದ್ದ ಪತಿ: ಜಿಬಿಎ ಸೈಟ್ ಕ್ಲೀನಿಂಗ್ ಬೇಳೆ ಬಯಲಾಯ್ತು ಮಹಿಳೆಯ ಭೀಕರ ಕೊಲೆ ರಹಸ್ಯ

ಬೆಂಗಳೂರು: ಖಾಲಿ ಸೈಟ್ ಗಳಲ್ಲಿ ಕಸ ಎಸೆಯುವಂತಿಲ್ಲ, ಅವುಗಳನ್ನು ಸ್ವಚ್ಛವಾಗಿಡದಿದ್ದರೆ ದಂಡ ವಿಧಿಸುವುದಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನೀಡಿದ ನೋಟಿಸ್ ಹಿನ್ನೆಲೆಯಲ್ಲಿ ಸೈಟ್ ಕ್ಲೀನಿಂಗ್ ವೇಳೆ ಮುಚ್ಚಿಹೋಗಿದ್ದ ಕೊಲೆ ರಹಸ್ಯವೊಂದು ಬಯಲಾಗಿದೆ.

ಜಿಬಿಎ ನಿಯಮಕ್ಕೆ ಹೆದರಿ ಮಾಲೀಕರು ಸೈಟ್ ಕ್ಲೀನ್ ಮಾಡಿಸಲು ಹೋದಾಗ, ಹಾಸಿಗೆಯಲ್ಲಿ ಸುತ್ತಿ ಎಸೆಯಲಾಗಿದ್ದ ಮಹಿಳೆಯ ಕೊಳೆತ ಶವ ಪತ್ತೆಯಾಗಿದ್ದು, ತನಿಖೆ ನಡೆಸಿದ ಸಂಪಿಗೆಹಳ್ಳಿ ಪೊಲೀಸರು ಆರೋಪಿ ಪತಿಯನ್ನುಬಂಧಿಸಿದ್ದಾರೆ.

ಒಡಿಶಾ ಮೂಲದ ಸಾಗರ್ ಚಂದ್ರ ರಾವತ್ (32) ಬಂಧಿತ ಆರೋಪಿ. ಈತ ತನ್ನ ಪತ್ನಿ ಅನುಸೂಯ (28) ಎಂಬಾಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಪ್ರೀತಿಸಿ ಮದುವೆಯಾಗಿದ್ದ ಈ ದಂಪತಿ ಬೆಂಗಳೂರಿನ ಪ್ರತ್ಯೇಕ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದರು. ಹಣಕಾಸಿನ ವಿಚಾರವಾಗಿ ಹಾಗೂ ಪತಿಯ ಸಂಬಳದ ವಿಷಯದಲ್ಲಿ ಆಗಾಗ ಗಲಾಟೆ ನಡೆಯುತ್ತಿತ್ತು. ಆಗಸ್ಟ್ 11ರಂದು ಮನೆಗೆ ಬಂದಾಗ ಮತ್ತೆ ಜಗಳ ವಿಕೋಪಕ್ಕೆ ತಿರುಗಿ, ಸಾಗರ್ ಪತ್ನಿಯನ್ನು ಕೊಲೆ ಮಾಡಿದ್ದ.

ಕೊಲೆ ಮಾಡಿದ ನಂತರ ಆರೋಪಿ ಮೂರು ದಿನಗಳ ಕಾಲ ಶವದ ಜೊತೆಯಲ್ಲೇ ಮನೆಯಲ್ಲಿದ್ದ. ಬಳಿಕ ಮೃತದೇಹವನ್ನು ಹಾಸಿಗೆಯಲ್ಲಿ ಸುತ್ತಿ, ಸಂಪಿಗೆಹಳ್ಳಿ ಸಮೀಪದ ಎಂ.ಎಸ್. ನಗರ ಅಗ್ರಹಾರ ಲೇಔಟ್‌ನ ಖಾಲಿ ಸೈಟ್‌ನಲ್ಲಿ ಎಸೆದು ಬಂದಿದ್ದ. ಯಾರಿಗೂ ಅನುಮಾನ ಬಾರದಂತೆ ಪ್ರತಿದಿನ ಅದೇ ಜಾಗದ ಬಳಿ ಬಂದು ಶವ ಪತ್ತೆಯಾಗಿದೆಯೇ ಎಂದು ಗಮನಿಸಿ ಹೋಗುತ್ತಿದ್ದ.

ಆದರೆ, ಜಿಬಿಎ ಖಾಲಿ ಸೈಟ್‌ಗಳನ್ನು ಸ್ವಚ್ಛಗೊಳಿಸುವಂತೆ ನೋಟಿಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ, ಸೈಟ್ ಮಾಲೀಕರು ಕಾರ್ಮಿಕರನ್ನು ಕಳುಹಿಸಿ ಕ್ಲೀನ್ ಮಾಡಿಸಲು ಮುಂದಾಗಿದ್ದರು. ಈ ವೇಳೆ ಕೊಳೆತ ಸ್ಥಿತಿಯಲ್ಲಿದ್ದ, ನಾಯಿಗಳು ಎಳೆದೊಯ್ದಿದ್ದ ಶವ ಕಂಡುಬಂದಿದೆ. ಸೈಟ್ ಮಾಲೀಕರು ನೀಡಿದ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.

ಈ ವೇಳೆ ಶವದ ಮೇಲಿದ್ದ ‘ವಿಶಾಲ್ ಮಾರ್ಟ್’ ಬಟ್ಟೆಯ ಟ್ಯಾಗ್ ಪೊಲೀಸರ ಪಾಲಿಗೆ ಮುಖ್ಯ ಸುಳಿವಾಯಿತು. ಆ ಬಿಲ್ ಆಧಾರದ ಮೇಲೆ ಮೃತರ ಸಂಪರ್ಕ ಸಂಖ್ಯೆ ಪತ್ತೆಹಚ್ಚಿದ ಪೊಲೀಸರಿಗೆ ಅನುಸೂಯ ಗುರುತು ಸಿಕ್ಕಿತು. ಬಳಿಕ ಹೋಟೆಲ್‌ನಲ್ಲಿ ವಿಚಾರಿಸಿದಾಗ ದಂಪತಿಯ ಗಲಾಟೆ ವಿಷಯ ತಿಳಿದುಬಂದಿದೆ.

ಸಾಗರ್ ಚಂದ್ರ ರಾವತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular