ನವದೆಹಲಿ: ಗೃಹ ಬಳಕೆಯ ಸಬ್ಸಿಡಿ LPG ಸಿಲಿಂಡರ್ ಪಡೆಯುವ ಗ್ರಾಹಕರಿಗೆ ಅಕ್ಟೋಬರ್ 1ರಿಂದ ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯವಾಗಲಿದೆ. ಆದರೆ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಪೂರ್ಣಗೊಳಿಸದ ಗ್ರಾಹಕರ ಗ್ಯಾಸ್ ಸಿಲಿಂಡರ್ ವಿತರಣೆಯನ್ನು ಸ್ಥಗಿತಗೊಳಿಸುವುದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಹೌದು.LPG ಸಿಲಿಂಡರ್ ಗ್ರಾಹಕರಿಗೆ ಅಕ್ಟೋಬರ್ 1ರಿಂದ ಮಹತ್ವದ ನಿಯಮ ಜಾರಿಗೆ ಬರಲಿದೆ. ಗೃಹ ಬಳಕೆಯ ಸಬ್ಸಿಡಿ ಸಿಲಿಂಡರ್ ಪಡೆಯುವವರಿಗೆ ಆಧಾರ್ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯವಾಗಲಿದ್ದು, ಈ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೂ ಸಿಲಿಂಡರ್ ಡೆಲಿವರಿ ತಕ್ಷಣ ಸ್ಥಗಿತಗೊಳ್ಳುವುದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಗ್ರಾಹಕರು ಗ್ಯಾಸ್ ಡೆಲಿವರಿ ಸಿಬ್ಬಂದಿ, ವಿತರಕರ ಕಚೇರಿ ಅಥವಾ ಸಂಬಂಧಿತ ಮೊಬೈಲ್ ಆ್ಯಪ್ಗಳ ಮೂಲಕ e-KYC ಪೂರ್ಣಗೊಳಿಸಬಹುದು.
ಅಕ್ಟೋಬರ್ 1ರಿಂದ ಸಬ್ಸಿಡಿ LPG ಸಿಲಿಂಡರ್ಗಳಿಗೆ ಆಧಾರ್ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯವಾಗಿದ್ದರೂ, ಈ ಪ್ರಕ್ರಿಯೆ ಪೂರ್ಣಗೊಳಿಸದ ಕಾರಣಕ್ಕೆ ತಕ್ಷಣವೇ ಸಿಲಿಂಡರ್ ಡೆಲಿವರಿ ಸ್ಥಗಿತಗೊಳ್ಳುವುದಿಲ್ಲ. ಆದರೂ ಸಬ್ಸಿಡಿ ಸೌಲಭ್ಯದಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಗ್ರಾಹಕರು ಸಮಯಕ್ಕೆ ಸರಿಯಾಗಿ e-KYC ಹಾಗೂ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಪೂರ್ಣಗೊಳಿಸಿಕೊಳ್ಳುವುದು ಸೂಕ್ತ.
ಗ್ರಾಹಕರು ತೈಲ ಮಾರುಕಟ್ಟೆ ಕಂಪನಿಗಳ ಡಿಜಿಟಲ್ ಚಾನೆಲ್ಗಳ ಮೂಲಕ ಬಯೋಮೆಟ್ರಿಕ್ ದೃಢೀಕರಣಕ್ಕೆ ನೋಂದಣಿ ಮಾಡಿಕೊಳ್ಳಬಹುದು. ಸಬ್ಸಿಡಿ ಇಲ್ಲದೆ ಮಾರುಕಟ್ಟೆ ದರದಲ್ಲಿ 5 ಅಥವಾ 10 ಕೆಜಿ ಸಿಲಿಂಡರ್ಗಳನ್ನು ಪಡೆಯುವ ಅವಕಾಶವೂ ಇದೆ.
ಸಿಲಿಂಡರ್ ಡೆಲಿವರಿ ಸಮಯದಲ್ಲಿ ಸಿಬ್ಬಂದಿ ಮೂಲಕ ಅಥವಾ ಗ್ಯಾಸ್ ವಿತರಕರ ಕಚೇರಿಗೆ ತೆರಳಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಅಲ್ಲದೆ, ಸಂಬಂಧಿತ ಮೊಬೈಲ್ ಆ್ಯಪ್ಗಳ ಮೂಲಕವೂ e-KYC ಪೂರ್ಣಗೊಳಿಸುವ ಅವಕಾಶ ನೀಡಲಾಗಿದೆ.
ಯಾವ ಆ್ಯಪ್ ಮೂಲಕ e-KYC?
-
Indane: IndianOil ONE ಆ್ಯಪ್
-
Bharat Gas: Hello BPCL ಆ್ಯಪ್
-
HP Gas: HP Pay ಆ್ಯಪ್
ಸಬ್ಸಿಡಿ ಸಿಲಿಂಡರ್ಗಳು ಅರ್ಹ ಕುಟುಂಬಗಳಿಗೆ ಮಾತ್ರ ತಲುಪುವಂತೆ ನೋಡಿಕೊಳ್ಳುವುದು ಈ ಬಯೋಮೆಟ್ರಿಕ್ ಆಧಾರ್ ದೃಢೀಕರಣದ ಪ್ರಮುಖ ಉದ್ದೇಶವಾಗಿದೆ. ಇದರಿಂದ ನಕಲಿ ಹಾಗೂ ಅನರ್ಹ ಗ್ಯಾಸ್ ಸಂಪರ್ಕಗಳನ್ನು ಪತ್ತೆಹಚ್ಚಿ ತೆಗೆದುಹಾಕಲು ಸಾಧ್ಯವಾಗಲಿದೆ.
ಅಲ್ಲದೆ, ಸಬ್ಸಿಡಿ ಸಿಲಿಂಡರ್ಗಳನ್ನು ವಾಣಿಜ್ಯ ಅಥವಾ ಕೈಗಾರಿಕಾ ಉದ್ದೇಶಗಳಿಗೆ ದುರ್ಬಳಕೆ ಮಾಡುವುದನ್ನು ತಡೆಯುವ ಜೊತೆಗೆ ಸಬ್ಸಿಡಿ ವಿತರಣೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಈ ಕ್ರಮ ಸಹಕಾರಿಯಾಗಲಿದೆ.
ಹಲವು ಬಾರಿ ಗಡುವು ವಿಸ್ತರಣೆ
ಬಯೋಮೆಟ್ರಿಕ್ ಆಧಾರ್ ದೃಢೀಕರಣ ಪೂರ್ಣಗೊಳಿಸಲು ಸರ್ಕಾರ ಆರಂಭದಲ್ಲಿ ಜೂನ್ 30ರವರೆಗೆ ಗಡುವು ನೀಡಿತ್ತು. ಬಳಿಕ ಗ್ರಾಹಕರ ಅನುಕೂಲಕ್ಕಾಗಿ ಗಡುವನ್ನು ಜುಲೈ 31, ಆಗಸ್ಟ್ 7, 15, 23, 31, ಸೆಪ್ಟೆಂಬರ್ 7 ಮತ್ತು ಸೆಪ್ಟೆಂಬರ್ 14ರವರೆಗೆ ಹಲವು ಬಾರಿ ವಿಸ್ತರಿಸಲಾಗಿತ್ತು.
ತೈಲ ಮಾರುಕಟ್ಟೆ ಕಂಪನಿಗಳು ದೇಶಾದ್ಯಂತ ಜಾಗೃತಿ ಅಭಿಯಾನ ನಡೆಸಿದ್ದು, 12 ಕೋಟಿಗೂ ಹೆಚ್ಚು SMS ಹಾಗೂ WhatsApp ಸಂದೇಶಗಳನ್ನು ಕಳುಹಿಸಿವೆ. ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಿ ಡೆಲಿವರಿ ಸಿಬ್ಬಂದಿ ಮೂಲಕ ಗ್ರಾಹಕರನ್ನು ನೇರವಾಗಿ ಸಂಪರ್ಕಿಸಲಾಗಿದೆ.
14.2 ಕೆಜಿ ಸಿಲಿಂಡರ್ಗೆ ಸುಮಾರು ₹210 ಸಬ್ಸಿಡಿ?
2026ರ ಸೆಪ್ಟೆಂಬರ್ ವೇಳೆಗೆ ಪ್ರತಿ 14.2 ಕೆಜಿ LPG ಸಿಲಿಂಡರ್ಗೆ ಸುಮಾರು ₹210 ಸಬ್ಸಿಡಿ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಗ್ರಾಹಕರು ಸಮಯಕ್ಕೆ ಸರಿಯಾಗಿ ಆಧಾರ್ ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಳಿಸುವ ಮೂಲಕ ಯಾವುದೇ ಅಡಚಣೆಯಿಲ್ಲದೆ LPG ಸಿಲಿಂಡರ್ ಪಡೆಯಬಹುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಹೊಸ ನಿಯಮಗಳಿಂದ ಗ್ಯಾಸ್ ವಿತರಣಾ ವ್ಯವಸ್ಥೆಯಲ್ಲಿ ಮತ್ತಷ್ಟು ಪಾರದರ್ಶಕತೆ ತರಲು ಉದ್ದೇಶಿಸಲಾಗಿದೆ.

