HomeKarnatakaಬಾಡಿಗೆ ಮನೆ ನೋಡಿ ಬರೋಣ ಎಂದು ಕರೆದೊಯ್ದು ಪತ್ನಿ ಬರ್ಬರ ಹತ್ಯೆ: ಹಂತಕ ಪತಿಗೆ ಜೀವಾವಧಿ...

ಬಾಡಿಗೆ ಮನೆ ನೋಡಿ ಬರೋಣ ಎಂದು ಕರೆದೊಯ್ದು ಪತ್ನಿ ಬರ್ಬರ ಹತ್ಯೆ: ಹಂತಕ ಪತಿಗೆ ಜೀವಾವಧಿ ಶಿಕ್ಷೆ

ಶಿವಮೊಗ್ಗ: ಪತ್ನಿಯ ಮೇಲೆ ಹಲ್ಲೆ ನಡೆಸಿ ಬರ್ಬರಾಗಿ ಕೊಲೆಗೈದ ಪತಿಗೆ ಶಿವಮೊಗ್ಗದ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ.

ಶಿವಮೊಗ್ಗ ನಗರದ ಟಿಪ್ಪುನಗರದ ವಾಸಿ ಆರೋಪಿತನಾದ ಅಬ್ದುಲ್ ಶೊಯೆಬ್(26 ವರ್ಷ) ಶಿಕ್ಷೆಗೊಳಗಾದ ವ್ಯಕ್ತಿ. ಪಿರ್ಯಾದುದಾರರಾದ ಕೌಸರ್ ಫರ್ವಿಜ್ ಅವರ ಮಗಳಾದ ಮೃತ ಕೌಸರ್ ಫಿಜಾ(20 ವರ್ಷ) ರವರನ್ನು ಪ್ರೀತಿಸಿ ಮದುವೆಯಾಗಿದ್ದು, ಅವರಿಗೆ ಒಂದುವರೆ ವರ್ಷದ ಮಗುವಿದೆ.

ಆರೋಪಿ ಶೊಯೆಬ್ ಪತ್ನಿ ಕೌಸರ್ ಫಿಜಾ ಅವರಿಗೆ ಮಾನಸಿಕವಾಗಿ ದೈಹಿಕವಾಗಿ ಹಿಂಸೆಕೊಡುತ್ತಿದ್ದರಿಂದ, ಕೌಸರ್ ಫಿಜಾ ನಿನಗೆ ನಾನು ಇಷ್ಟವಿಲ್ಲದಿದ್ದರೆ ನನ್ನನ್ನು ಬಿಟ್ಟು ಬಿಡು ಎಂದು ಹೇಳಿದ್ದರಿಂದ ಆರೋಪಿತನು ಕೌಸರ್ ಫಿಜಾಳ ಮೇಲೆ ಅನುಮಾನಗೊಂಡು, ಆಕೆಯ ಕೊಲೆಗೆ ಸಂಚು ರೂಪಿಸಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಕೆ ಯಾರಿಗೂ ಸಿಗಬಾರದು ಎಂದು ದಿನಾಂಕ:16-10-2021 ರಂದು ಬೇರೆ ಬಾಡಿಗೆ ಮನೆ ನೋಡಿದ್ದೇನೆ ಇಬ್ಬರೂ ನೋಡಿಕೊಂಡು ಬರೋಣ ಎಂದು ಹೇಳಿ ನಂಬಿಸಿ ಕಾರ್ ನಲ್ಲಿ ಕರೆದುಕೊಂಡು ಬಂದು ಹಾಳೂರು, ಅನುಪಿನ ಕಟ್ಟೆ ರಸ್ತೆಯಲ್ಲಿ ಇರುವ ಹೊನ್ನಪ್ಪ ಲೇಔಟ್ ಗೆ ಕರೆದುಕೊಂಡು ಹೋಗಿ ಸಂಜೆ 5-15 ರಿಂದ 5-45 ಗಂಟೆಯ ಮಧ್ಯದ ಅವಧಿಯಲ್ಲಿ ಅವಳೊಂದಿಗೆ ಗಲಾಟೆ ಮಾಡಿದ್ದಾನೆ. ಈ ವೇಳೆ ಚಾಕುವಿನಿಂದ ಚುಚ್ಚಿ ಹಾಗೂ ಮಚ್ಚಿನಿಂದ ತಲೆಗೆ ಹೊಡೆದು ಕಲ್ಲಿನಿಂದ ಮುಖ ಮತ್ತಿತರೆ ಕಡೆಗಳಲ್ಲಿ ಜಜ್ಜಿ ಕೊಲೆ ಮಾಡಿದ್ದ.

ಆರೋಪಿತನ ವಿರುದ್ದ ಸೂಕ್ತ ಕಾನೂನು ಕ್ರಮಕ್ಕಾಗಿ ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆ ಗುನ್ನೆ ನಂ 341/2021 ಕಲಂ 498 (ಎ), 302 ಐಪಿಸಿ ರೀತ್ಯ ಪ್ರಕರಣ ದಾಖಲಾಗಿರುತ್ತದೆ. ಪ್ರಕರಣದ ಆಗಿನ ತನಿಖಾಧಿಕಾರಿ ದೀಪಕ್ ಎಂ.ಎಸ್ ಪಿಐ ತುಂಗಾನಗರ ಠಾಣೆ, ರವರು ಪ್ರಕರಣದ ತನಿಖೆ ಪೂರೈಸಿ, ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.

ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಪಿ.ಓ ಪುಷ್ಪಾ ಅವರು ವಾದ ಮಂಡಿಸಿದ್ದು 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಪ್ರೀತಿ ಕೆ.ಪಿ. ರವರು ದಿನಾಂಕ:23-09-2026 ರಂದು ಆರೋಪಿತನಿಗೆ ಕಲಂ 498(ಎ), 302 ಐಪಿಸಿ ಕಾಯಿದೆಗಳಿಗೆ ಜೀವಾವಧಿ ಶಿಕ್ಷೆ & 2,10,000/- ರೂ ದಂಡವನ್ನು ವಿಧಿಸಿ ಆದೇಶಿಸಿರುತ್ತದೆ. ನೊಂದವರ ಕುಟುಂಬದವರಿಗೆ 2,05,000/- ರೂ ಪರಿಹಾರ ನೀಡಿ ಆದೇಶಿಸಿರುತ್ತದೆ.

ಅಪರಿಚಿತ ಮೃತ ಮಹಿಳೆಯ ವಾರಸುದಾರರ ಪತ್ತೆಗೆ ಮನವಿ

ಶಿವಮೊಗ್ಗ: ಸೆ. 17 ರಂದು ಶಿವಮೊಗ್ಗ ಗೋಪಾಳದ ಡಿ.ವಿ.ಜಿ. ಸರ್ಕಲ್ ಬಸ್‌ ಸ್ಟ್ಯಾಂಡ್ ಬೆಂಚ್ ಮೇಲೆ ಮಲಗಿದ್ದ ಸುಮಾರು 45 ರಿಂದ 50 ವರ್ಷದ ಮಹಿಳೆಯನ್ನು ಆಂಬ್ಯುಲೆನ್ಸ್ ಮೂಲಕ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಮಹಿಳೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

ಈ ಮೃತ ಮಹಿಳೆಯ ಹೆಸರು, ವಿಳಾಸ ಅಥವಾ ವಾರಸುದಾರರ ಬಗ್ಗೆ ಸುಳಿವು ಇರುವುದಿಲ್ಲ. ಮೃತಳು ಸುಮಾರು 5 ಅಡಿ ಎತ್ತರ, ತೆಳುವಾದ ಮೈಕಟ್ಟು, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಎಡಗಾಲಿನ ಪಾದದ ಮೇಲ್ಭಾಗ ಮೊಣಕಾಲಿನ ಕೆಳಭಾಗದಲ್ಲಿ ಬ್ಯಾಂಡೇಜ್ ಹಾಕಲಾಗಿರುತ್ತದೆ. ಮೈಮೇಲೆ ಕಪ್ಪು ಲಂಗ ಹಾಗೂ ಹಸಿರು ಜಾಕೇಟ್ ಇರುತ್ತದೆ. ಈ ಮೃತ ಮಹಿಳೆಯ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

 

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular