HomeKarnatakaನಾಳೆಯಿಂದ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ 3ನೇ ಸುತ್ತಿನ ಸೀಟು ಹಂಚಿಕೆ: ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ

ನಾಳೆಯಿಂದ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ 3ನೇ ಸುತ್ತಿನ ಸೀಟು ಹಂಚಿಕೆ: ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ

ಬೆಂಗಳೂರು: UGNEET-26: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಮೂರನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಸೆ.24ರಿಂದ ಆರಂಭವಾಗಲಿದೆ.

3ನೇ ಸುತ್ತಿನಲ್ಲಿ ಭಾಗವಹಿಸಲು ಅರ್ಹರಾಗಿರುವ ಅಭ್ಯರ್ಥಿಗಳು ಕಡ್ಡಾಯವಾಗಿ ತಾವು ಸೇರಲು ಇಚ್ಛಿಸುವ ಕೋರ್ಸ್ ಶುಲ್ಕಗಳ ಆಧಾರದ ಮೇಲೆ ಸೆ. 28ರೊಳಗೆ ಕಾಷನ್ ಡೆಪಾಸಿಟ್ ಕಟ್ಟುವುದು ಕಡ್ಡಾಯ.

ಕಾಷನ್ ಡೆಪಾಸಿಟ್ ಕಟ್ಟಿದ ಅಭ್ಯರ್ಥಿಗಳಿಗೆ ಸೆ.25ರಿಂದ 29ರವರೆಗೆ ಹೊಸದಾಗಿ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುತ್ತದೆ. ಈ ಹಿಂದೆ ದಾಖಲಿಸಿದ್ದ ಆಪ್ಷನ್ಸ್ ಅನ್ನು ಪರಿಗಣಿಸುವುದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸುತ್ತಿನಲ್ಲಿ ಸೀಟು ಹಂಚಿಕೆ ನಂತರ ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದು ಕಡ್ಡಾಯ.

ಯಾರೆಲ್ಲ ಅರ್ಹರು?

 ಇದುವರೆಗೂ ಸೀಟು ಹಂಚಿಕೆಯಾಗದವರು, ಸೀಟು ಹಂಚಿಕೆ ನಂತರ ದಂಡ ಪಾವತಿಸಿರುವ ಅಭ್ಯರ್ಥಿಗಳು, ಸೀಟು ಹಂಚಿಕೆಯಾಗಿ ಈಗಾಗಲೇ ಪ್ರವೇಶ ಪಡೆದಿರುವ ಹಾಗೂ ಇನ್ನೂ ಉತ್ತಮ ಸೀಟಿಗೆ ಅಪ್ ಗ್ರೆಡೇಷನ್ ಮಾಡಿಕೊಳ್ಳಲು ಇಚ್ಛಿಸುವ ಅಭ್ಯರ್ಥಿಗಳು 3ನೇ ಸುತ್ತಿನ ಕೌನ್ಸೆಲಿಂಗ್ ನಲ್ಲಿ ಭಾಗವಹಿಸಬಹುದು.

ಯಾರು ಅರ್ಹರಲ್ಲ?

ಸೀಟು ಹಂಚಿಕೆ ನಂತರ ಯಾವುದೇ ಚಾಯ್ಸ್ ಆಯ್ಕೆ ಮಾಡದಿರುವ ಹಾಗೂ‌ ಚಾಯ್ಸ್-4 ಹಾಕಿ ಕೌನ್ಸೆಲಿಂಗ್ ನಿಂದ ಹೊರ ಹೋಗಿರುವವರು ಈ ಸುತ್ತಿನಲ್ಲಿ ಭಾಗವಹಿಸಲು ಅರ್ಹರಿರುವುದಿಲ್ಲ.

Caution Deposit Details:

  • ₹1,00,000 ಕಾಷನ್ ಡೆಪಾಸಿಟ್ ಕಟ್ಟುವ ಅಭ್ಯರ್ಥಿಗಳು ವೈದ್ಯಕೀಯ ಕೋರ್ಸ್‌ ನ ಸರ್ಕಾರಿ ಸೀಟುಗಳು ಹಾಗೂ ದಂತ ವೈದ್ಯಕೀಯ ಕೋರ್ಸ್ ನ ಎಲ್ಲ ರೀತಿಯ ಸೀಟುಗಳ ಪ್ರವೇಶಕ್ಕೆ ಆಪ್ಷನ್ಸ್ ದಾಖಲಿಸಲು ಅರ್ಹರಾಗುತ್ತಾರೆ.

  • ₹12,00,000 ಕಾಷನ್ ಡೆಪಾಸಿಟ್ ಕಟ್ಟುವ ಅಭ್ಯರ್ಥಿಗಳು G (ಸರ್ಕಾರಿ) ಮತ್ತು P (ಪ್ರೆವೈಟ್) ಸೀಟುಗಳಿಗೆ ಆಪ್ಷನ್ಸ್ ದಾಖಲಿಸಲು ಅರ್ಹರಾಗುತ್ತಾರೆ.

  • ₹25,00,000 ಕಾಷನ್ ಡೆಪಾಸಿಟ್ ಕಟ್ಟುವ ಅಭ್ಯರ್ಥಿಗಳು ಎಲ್ಲ ರೀತಿಯ ಸೀಟುಗಳ ಪ್ರವೇಶಕ್ಕೆ ಆಪ್ಷನ್ಸ್ ದಾಖಲಿಸಬಹುದು.

  • ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳಿಗೆ ಈಗಾಗಲೇ ಪ್ರವೇಶ ಪಡೆದಿರುವ ಅಭ್ಯರ್ಥಿಗಳು ಕಾಷನ್ ಡೆಪಾಸಿಟ್ ಕಟ್ಟುವ ಅಗತ್ಯ ಇರುವುದಿಲ್ಲ.

  • ಇತರೆ ಕೋರ್ಸ್ ಗಳಿಗೆ ಪಾವತಿಸಿರುವ ಶುಲ್ಕ ವನ್ನು ಕಾಷನ್ ಡೆಪಾಸಿಟ್ ಎಂದು ಪರಿಗಣಿಸುವುದಿಲ್ಲ.

ಕಾಷನ್ ಡೆಪಾಸಿಟ್ ಮುಟುಗೋಲು:

3ನೇ ಸುತ್ತಿನಲ್ಲಿ ಸೀಟು ಹಂಚಿಕೆ ನಂತರ ಕಾಲೇಜಿಗೆ ವರದಿ ಮಾಡಿಕೊಳ್ಳದಿದ್ದಲ್ಲಿ ಅಭ್ಯರ್ಥಿಯು ಪಾವತಿಸಿದ್ದ ಕಾಷನ್ ಡೆಪಾಸಿಟ್ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

MCC 3ನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಣೆ ನಂತರ #KEA 3ನೇ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗುತ್ತದೆ. #MCC ಸೀಟು ಹಂಚಿಕೆ ನಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) 3ನೇ ಸುತ್ತಿನಲ್ಲೂ ಸೀಟು ಹಂಚಿಕೆಯಾಗಿ ಕೆಇಎ ಸೀಟು ಉಳಿಸಿಕೊಳ್ಳಬೇಕಿದ್ದರೆ ಅಂತಹವರು ಖುದ್ದು ಪತ್ರದ ಮೂಲಕ ತಿಳಿಸಬೇಕು. ಇಲ್ಲದಿದ್ದರೆ ಅಂತಹವರನ್ನು 3ನೇ ಸುತ್ತಿನ ಕೌನ್ಸೆಲಿಂಗ್ ಗೆ ಪರಿಗಣಿಸುವುದಿಲ್ಲ.

ಈಗಾಗಲೇ ಎಂಜಿನಿಯರಿಂಗ್ ಸೇರಿದಂತೆ ಇತರ ಸಿಇಟಿ ಕೋರ್ಸ್ ಗಳಿಗೆ ಪ್ರವೇಶ ಪಡೆದಿರುವ ಅಭ್ಯರ್ಥಿಗಳು ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಗಳಿಗೆ ಸೇರಲು ನಿಜವಾಗಿಯೂ ಆಸಕ್ತಿ ಇದ್ದರೆ ಮಾತ್ರ ಆಪ್ಷನ್ಸ್ ದಾಖಲಿಸಬಹುದು. ಸೀಟು‌ ಸಿಕ್ಕ ನಂತರ, ಮೊದಲಿನ ಕಾಲೇಜಿನಿಂದ ಮೂಲ ದಾಖಲೆ ಪಡೆಯುವುದನ್ನು ಖಾತರಿಪಡಿಸಿಕೊಂಡೇ ಆಪ್ಷನ್ಸ್ ದಾಖಲಿಸಿ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular