HomeKarnatakaನಾಳೆ ಅಖಿಲ ಕರ್ನಾಟಕ ಅಸಂಘಟಿತ ಪುರೋಹಿತ ಮತ್ತು ಬಾಣಸಿಗ ಕಾರ್ಮಿಕರ ಸಂಘದ ರಾಜ್ಯ ಘಟಕ ಉದ್ಘಾಟನಾ...

ನಾಳೆ ಅಖಿಲ ಕರ್ನಾಟಕ ಅಸಂಘಟಿತ ಪುರೋಹಿತ ಮತ್ತು ಬಾಣಸಿಗ ಕಾರ್ಮಿಕರ ಸಂಘದ ರಾಜ್ಯ ಘಟಕ ಉದ್ಘಾಟನಾ ಸಮಾರಂಭ

ಅಖಿಲ ಕರ್ನಾಟಕ ಅಸಂಘಟಿತ ಪುರೋಹಿತ ಮತ್ತು ಬಾಣಸಿಗ ಕಾರ್ಮಿಕರ ಸಂಘ (ರಿ)ದ ರಾಜ್ಯ ಘಟಕ ಉದ್ಘಾಟನಾ ಕಾರ್ಯಕ್ರಮ ಇದೇ ಸೆಪ್ಟೆಂಬರ್ 24ರ ಗುರುವಾರದಂದು ನಡೆಯಲಿದ್ದು, ಸಂಘದ ಅಧ್ಯಕ್ಷರು ಹಾಗೂ ಇತರೆ ಸದಸ್ಯರು ರಾಜ್ಯದ್ಯಂತ ಇರುವ ಪುರೋಹಿತ, ಬಾಣಸಿಗರು ಹಾಗೂ ಸಾರ್ವಜನಿಕರಿಗೆ ಆಹ್ವಾನವನ್ನು ಬಿಡುಗಡೆ ಮಾಡಿದ್ದಾರೆ.

ಬೆಂಗಳೂರಿನ ಕೊಡಿಚಿಕನಹಳ್ಳಿ ಮೇನ್ ರೋಡ್ ಬಿಲೇಖಹಳ್ಳಿ ಸರ್ಕಾರಿ ಶಾಲೆ ಪಕ್ಕದಲ್ಲಿರುವ ಶ್ರೀ ಸೋಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಈ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಅಂದು ಬೆಳಗ್ಗೆ 11ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಖಿಲ ಕರ್ನಾಟಕ ಅಸಂಘಟಿತ ಪುರೋಹಿತ ಮತ್ತು ಬಾಣಸಿಗ ಕಾರ್ಮಿಕರ ಸಂಘ (ರಿ)ವು ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯಡಿ ನೋಂದಣಿಯಾಗಿದ್ದು, ರಾಜ್ಯಾದ್ಯಂತ ಸೇವೆ ಸಲ್ಲಿಸುತ್ತಿರುವ ಪುರೋಹಿತ ಹಾಗೂ ಬಾಣಸಿಗರ ಅಭಿವೃದ್ಧಿ ಇದರ ಉದ್ದೇಶವಾಗಿದೆ.

ರಾಜ್ಯಾಧ್ಯಕ್ಷರಾದ ಡಾ. ಜೆ. ಶ್ರೀನಿವಾಸ ಮೂರ್ತಿ, ಪ್ರಧಾನ ಕಾರ್ಯದರ್ಶಿಗಳಾದ ಡಾ. ಸತೀಶ್ ಸಿಂಹ ಹಾಗೂ ಖಜಾಂಚಿ ಡಾ. ವೇಣು ಗೋಪಾಲ್ ಶರ್ಮಾ ನಿಯೋಗಿ ಇವರುಗಳ ಸಾರಥ್ಯದಲ್ಲಿ ಈ ಕಾರ್ಯಕ್ರಮ ಆಯೋಜನೆಯಾಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಆಗಮಿಸಲು ಕರೆ

‘ಈ ಕಾರ್ಯಕ್ರಮ ಸೆಪ್ಟೆಂಬರ್ 24ರಂದು ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದ್ದು, ಅನೇಕ ಗಣ್ಯರು, ಪುರೋಹಿತರು, ಬಾಣಸಿಗರು, ಸಂಘದ ಪ್ರತಿ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು ಆಗಮಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಪಾಲ್ಗೊಳ್ಳಬೇಕೆಂದು ಸಂಘದ ಪರ ಕೋರುತ್ತಿದ್ದೇನೆ’ ಎಂದು ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular