HomeEntertainmentಕೆವಿಎನ್ ಪ್ರೊಡಕ್ಷನ್ಸ್ ವಿರುದ್ಧ ವಂಚನೆ ಆರೋಪ: ನಿರ್ಮಾಪಕರ ಸಂಘಕ್ಕೆ ದೂರು: 2 ಕೋಟಿ ಪರಿಹಾರ ಕೊಡಿಸುವಂತೆ...

ಕೆವಿಎನ್ ಪ್ರೊಡಕ್ಷನ್ಸ್ ವಿರುದ್ಧ ವಂಚನೆ ಆರೋಪ: ನಿರ್ಮಾಪಕರ ಸಂಘಕ್ಕೆ ದೂರು: 2 ಕೋಟಿ ಪರಿಹಾರ ಕೊಡಿಸುವಂತೆ ಪದ್ಮಾವತಿ ಫಿಲಮ್ಸ್ ಒತ್ತಾಯ

ಬೆಂಗಳೂರು: ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡೆಕ್ಷನ್ ವಿರುದ್ಧ 2 ಕೋಟಿ ರೂಪಾಯಿ ವಂಚನೆ ಎಸಗಿರುವ ಆರೋಪ ಕೇಳಿಬಂದಿದೆ. ‘ಟಾಕ್ಸಿಕ್’, ‘ಜನ ನಾಯಗನ್’ ಸೇರಿದಂತೆ ಹಲವು ಜನಪ್ರಿಯ ಸುಇನಿಮಾಗಳನ್ನು ನೀಡಿದ್ದ ಸಿನಿಮಾ ನಿರ್ಮಾಣ ಮತ್ತು ವಿತರಕ ಸಂಸ್ಥೆಯಾದ ಕೆವಿಎನ್ ನಿರ್ಮಾಣ ಸಂಸ್ಥೆಯ ವಿರುದ್ಧ ವಂಚನೆ ಆರೋಪ ಕೇಳಿಬಂದಿದ್ದು, ನಿರ್ಮಾಪಕರ ಸಂಘಕ್ಕೆ ದೂರು ನೀಡಲಾಗಿದೆ.

ಕೆವಿಎನ್ ನಿರ್ಮಾಣ ಸಂಸ್ಥೆಯ ಮೂಲಕ ವಿತರಣೆ ಮಾಡಲಾಗಿರುವ ಸಿನಿಮಾಗಳ ವ್ಯವಹಾರದಲ್ಲಿ ವಂಚನೆ ನಡೆದಿದೆ ಎಂಬ ಆರೋಪ ಬಂದಿದೆ. ತಮಗೆ ಆಗಿರುವ ಮೋಸಕ್ಕೆ ಕೆವಿಎನ್​​ ಕಡೆಯಿಂದ 2 ಕೋಟಿ ರೂಪಾಯಿ ಪರಿಹಾರವನ್ನು ಕೊಡಿಸಬೇಕೆಂದು ಕೋರಲಾಗಿದೆ.

ಪದ್ಮಾವತಿ ಫಿಲಮ್ಸ್ ವತಿಯಿಂದ ನಿರ್ಮಾಅಪಕರ ಸಂಘದಲ್ಲಿ ದೂರು ದಾಖಲಾಗಿದ್ದು, ಇತ್ತೀಚೆಗೆ ಬಿಡುಗಡೆ ಆದ ‘ಬಲರಾಮನ ದಿನಗಳು’ ಸಿನಿಮಾಕ್ಕೆ ಸಂಬಂಧಿಸಿದಂತೆ ಈ ಆರೋಪ ಕೇಳಿಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿನೋದ್ ಪ್ರಭಾಕರ್ ಅಭಿನಯದ ಪದ್ಮಾವತಿ ಫಿಲಮ್ಸ್ ನಿರ್ಮಾಣ ಮಾಡಿದ್ದ ‘ಬಲರಾಮನ ದಿನಗಳು’ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್​​ನವರು ವಿತರಣೆ ಮಾಡಿದ್ದರು. ಆದರೆ ವಿತರಣೆಯ ಬಳಿಕ ಬಂದ ಲಾಭದ ಹಣವನ್ನು ನಿರ್ಮಾಪಕರಿಗೆ ನೀಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೆವಿಎನ್​​ ಸಂಸ್ಥೆಯ ಕಡೆಯವರು ಎಂದು ಪರಿಚಯಿಸಿಕೊಂಡ ಸುಪ್ರೀತ್ ಎಂಬುವರು ‘ಬಲರಾಮನ ದಿನಗಳು’ ಸಿನಿಮಾದ ವಿತರಣೆ ಹಕ್ಕು ಖರೀದಿ ಮಾಡಿರುತ್ತಾರೆ. ಖರೀದಿ ಮಾಡುವ ಸಮಯದಲ್ಲಿ ನಿರ್ಮಾಪಕರಿಗೆ ಯಾವುದೇ ಹಣ ನೀಡಿರುವುದಿಲ್ಲ. ಆ ಬಳಿಕ ಲೆಕ್ಕಾಚಾರದ ಬಗ್ಗೆ ಕೇಳಿದಾಗ 43 ಸಾವಿರಕ್ಕೂ ಹೆಚ್ಚು ಮೊತ್ತ ಗಳಿಕೆ ಆದರಷ್ಟೆ ಚಿತ್ರಮಂದಿರದವರು ಹಣ ಕೊಡುವುದಾಗಿ ಹೇಳಿದ್ದರು. ಆದರೆ ನಾವು (ನಿರ್ಮಾಣ ಸಂಸ್ಥೆಯ ವತಿಯಿಂದ) ವಿಚಾರಿಸಿದಾಗ ಚಿತ್ರಮಂದಿರದವರು 50% ಶೇರು ನೀಡಿರುವುದಾಗಿ ಹೇಳಿದ್ದಾರೆ. ಆದರೆ ಆ ಹಣವನ್ನು ನಮಗೆ ನೀಡಲಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಿತರಣೆ ಹಕ್ಕು ಖರೀದಿ ಸಮಯದಲ್ಲಿ ‘ಬಲರಾಮನ ದಿನಗಳು’ ಸಿನಿಮಾದ ಒಟಿಟಿ ಮತ್ತು ಟಿವಿ ಸ್ಯಾಟಲೈಟ್ ಹಕ್ಕುಗಳನ್ನು ತಾವೇ ಮಾಡಿಸಿಕೊಡುವುದಾಗಿ ಹೇಳಿದ್ದರು. ಆದರೆ ಆ ರೀತಿ ಯಾವುದೇ ಕಾರ್ಯವನ್ನು ಅವರು ಮಾಡಿಲ್ಲ. ನಮಗೆ ಬರಬೇಕಾದ ಹಣವನ್ನೂ ಕೊಟ್ಟಿಲ್ಲ. ಹಾಗೂ ಸಿನಿಮಾ ಅನ್ನು ಮುಖ್ಯ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡದೆ ಕೇವಲ ಅವರ ಹಿಡಿತ ಇರುವ ಚಿತ್ರಮಂದಿರದಲ್ಲಿ ಮಾತ್ರವೇ ಬಿಡುಗಡೆ ಮಾಡಿರುತ್ತಾರೆ ಎಂದಿದ್ದಾರೆ ನಿರ್ಮಾಪಕರು.

ಸಿನಿಮಾದ ಎಲ್ಲ ಪೋಸ್ಟರ್​​ಗಳಲ್ಲಿ ‘ಕೆವಿಎನ್ ವಿತರಣೆ’ ಎಂದು ಜಾಹೀರಾತು ನೀಡಿದ್ದರು. ಆದರೆ ‘ಬಲರಾಮನ ದಿನಗಳು’ ಸಿನಿಮಾದ ಎಲ್ಲ ವ್ಯವಹಾರ ನಡೆದಿರುವುದು ಎಸ್​​ಎಸ್​​ಎಸ್ ಎಂಟರ್ಪ್ರೈಸ್​​ ಹೆಸರಿನ ಸಂಸ್ಥೆಯ ಮೂಲಕ. ನಮಗೆ ನೀಡಲಾಗಿರುವ ಇನ್​​ವಾಯ್ಸ್ ಸಹ ಅದೇ ಸಂಸ್ಥೆಯಿಂದ ನೀಡಲಾಗಿದ್ದು, ಇದರಿಂದ ತೆರಿಗೆ ವಂಚನೆ ಸಹ ಆಗಿದೆ. ಈ ಬಗ್ಗೆ ನಿರ್ಮಾಪಕರ ಸಂಘವು ತನಿಖೆ ನಡೆಸಬೇಕು ಹಾಗೂ ನಮಗೆ ಆಗಿರುವ ನಷ್ಟಕ್ಕೆ ಕೆವಿಎನ್​ ವತಿಯಿಂದ 2 ಕೋಟಿ ಪರಿಹಾರ ಕೊಡಿಸಬೇಕು ಎಂದು ಪದ್ಮಾವತಿ ಫಿಲಮ್ಸ್ ​​ನ ನಿರ್ಮಾಪಕರು ಮನವಿ ಮಾಡಿದ್ದಾರೆ.

ಪದ್ಮಾವತಿ ಫಿಲಮ್ಸ್ ನಿರ್ಮಾಣದ, ವಿನೋದ್ ಪ್ರಭಾಕರ್ ನಟನೆಯ ಹಾಗೂ ಕೆ.ಎಂ. ಚೈತನ್ಯ ನಿರ್ದೇಶನದ ‘ಬಲರಾಮನ ದಿನಗಳು’ ಚಿತ್ರದ ಸಂಪೂರ್ಣ ಕರ್ನಾಟಕ ವಿತರಣೆಯ ಹಕ್ಕನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯು ಪಡೆದುಕೊಂಡಿತ್ತು. ಚಿತ್ರದ ವಿತರಣೆ ಹಾಗೂ ವ್ಯವಹಾರದ ಹಂಚಿಕೆಗೆ ಸಂಬಂಧಿಸಿದಂತೆ ಆರ್ಥಿಕ ನಷ್ಟ ಅಥವಾ ಒಪ್ಪಂದದ ಉಲ್ಲಂಘನೆಯಾಗಿದೆ ಎಂಬ ಕಾರಣಕ್ಕೆ ಈ ಮೋಸದ ಆರೋಪ ಕೇಳಿಬಂದಿದೆ ಎನ್ನಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular