HomeIndia₹2,700ರ ಕ್ಯಾನ್ಸರ್ ಔಷಧಿಗೆ ₹27,000 MRP..! ಫಾರ್ಮಾ ಕಂಪನಿಗಳ ವಿರುದ್ಧ ಸುಪ್ರೀಂಕೋರ್ಟ್ ಆಕ್ರೋಶ

₹2,700ರ ಕ್ಯಾನ್ಸರ್ ಔಷಧಿಗೆ ₹27,000 MRP..! ಫಾರ್ಮಾ ಕಂಪನಿಗಳ ವಿರುದ್ಧ ಸುಪ್ರೀಂಕೋರ್ಟ್ ಆಕ್ರೋಶ

ದೇಶದಲ್ಲಿ ಔಷಧ ಕಂಪನಿಗಳ ಬೆಲೆ ನಿಗದಿ ವಿಚಾರ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಔಷಧ ತಯಾರಕರು ರಿಟೇಲರ್‌ಗಳಿಗೆ ಮಾರಾಟ ಮಾಡುವ ಬೆಲೆ ಹಾಗೂ ಔಷಧ ಪ್ಯಾಕೆಟ್‌ಗಳ ಮೇಲೆ ಮುದ್ರಿಸುವ ಗರಿಷ್ಠ ಚಿಲ್ಲರೆ ಬೆಲೆ (MRP) ನಡುವೆ ಇರುವ ಭಾರಿ ವ್ಯತ್ಯಾಸದ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಔಷಧದ ನೈಜ ಬೆಲೆಗೆ ಹೋಲಿಸಿದರೆ 10 ಪಟ್ಟು ಹೆಚ್ಚು MRP ನಿಗದಿಪಡಿಸಿ ಮಾರಾಟ ಮಾಡುವುದು ಜನರನ್ನು ಶೋಷಣೆ ಮಾಡುವಂತಾಗಿದೆ ಎಂದು ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ ಮತ್ತು ವಿಕ್ರಮ್ ನಾಥ್ ಅವರ ಪೀಠ ಅಭಿಪ್ರಾಯಪಟ್ಟಿದೆ.

₹2,700ರ ಔಷಧಿಗೆ ₹27 ಸಾವಿರ MRP

ತಯಾರಕರಿಂದ ರಿಟೇಲರ್‌ಗಳಿಗೆ ಕೇವಲ ₹2,700ಕ್ಕೆ ದೊರೆಯುವ ಜೀವ ಉಳಿಸುವ ಕ್ಯಾನ್ಸರ್‌ನಂತಹ ಔಷಧಿಗಳಿಗೆ ಮಾರುಕಟ್ಟೆಯಲ್ಲಿ ₹27,000 MRP ನಿಗದಿಪಡಿಸಿರುವುದಕ್ಕೆ ಸುಪ್ರೀಂ ಕೋರ್ಟ್ ಆಶ್ಚರ್ಯ ವ್ಯಕ್ತಪಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಾಣ ಉಳಿಸಿಕೊಳ್ಳಲು ಸಾಮಾನ್ಯ ಜನರು ತಮ್ಮ ಮನೆ, ಚಿನ್ನಾಭರಣಗಳನ್ನೇ ಮಾರಾಟ ಮಾಡಿಕೊಳ್ಳುವ ಪರಿಸ್ಥಿತಿ ಇದೆ ಎಂದು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಆವೇಶ ವ್ಯಕ್ತಪಡಿಸಿದ್ದಾರೆ. ಇಂತಹ ಅಕ್ರಮಗಳ ಬಗ್ಗೆ ಜವಾಬ್ದಾರಿಯುತ ಸರ್ಕಾರಿ ನಿಯಂತ್ರಣ ಸಂಸ್ಥೆಗಳು ಮೌನವಾಗಿರುವುದನ್ನೂ ಅವರು ಪ್ರಶ್ನಿಸಿದ್ದಾರೆ.

ಕಿಶನ್ ಚಂದ್ ಜೈನ್ ಮತ್ತು ಡಾ. ಸಂಜಯ್ ಕುಲಶ್ರೇಷ್ಠ ಅವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ದೇಶದ ಔಷಧ ಮಾರಾಟ ವ್ಯವಸ್ಥೆಯಲ್ಲಿನ ಹಲವು ಲೋಪಗಳು ಬೆಳಕಿಗೆ ಬಂದಿವೆ.

ಅರ್ಜಿದಾರರ ಪ್ರಕಾರ, ಮಾರುಕಟ್ಟೆಯಲ್ಲಿ ಲಭ್ಯವಿರುವ ಸುಮಾರು 82% ನಾನ್-ಶೆಡ್ಯೂಲ್ಡ್ ಔಷಧಿಗಳ ಆರಂಭಿಕ ಬೆಲೆಗಳ ಮೇಲೆ ಯಾವುದೇ ಪರಿಣಾಮಕಾರಿ ಸರ್ಕಾರಿ ನಿಯಂತ್ರಣವಿಲ್ಲ.

ಆಸ್ಪತ್ರೆಗಳು, ದೊಡ್ಡ ರಿಟೇಲ್‌ಗಳ ವಿರುದ್ಧ ಪ್ರಶ್ನೆ

ಖಾಸಗಿ ಕಾರ್ಪೊರೇಟ್ ಆಸ್ಪತ್ರೆಗಳು ಹಾಗೂ ದೊಡ್ಡ ಔಷಧ ಅಂಗಡಿಗಳು ರೋಗಿಗಳ ಅನಿವಾರ್ಯತೆಯನ್ನು ದುರುಪಯೋಗಪಡಿಸಿಕೊಂಡು ಭಾರಿ ಮೊತ್ತ ವಸೂಲಿ ಮಾಡುತ್ತಿವೆ ಎಂದು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಇಂತಹ ದರದ ಶೋಷಣೆಯನ್ನು ತಡೆಯಲು ಕಠಿಣ ನಿಯಮಗಳನ್ನು ಜಾರಿಗೆ ತರಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಔಷಧಿಗಳ ಬೆಲೆಯಲ್ಲಿ ಇಷ್ಟೊಂದು ದೊಡ್ಡ ವ್ಯತ್ಯಾಸವು ಸಾಮಾನ್ಯ ರೋಗಿಗಳಿಗೆ ಮಾತ್ರವಲ್ಲದೆ, ಸರ್ಕಾರದ ಸಾರ್ವಜನಿಕ ಆರೋಗ್ಯ ಯೋಜನೆಗಳ ಮೇಲೂ ದೊಡ್ಡ ಆರ್ಥಿಕ ಹೊರೆ ಉಂಟುಮಾಡುತ್ತಿದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ.

ಆಯುಷ್ಮಾನ್ ಭಾರತ ಯೋಜನೆಗೂ ಹೊರೆ

ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ ಸೇರಿದಂತೆ ಸಾರ್ವಜನಿಕ ಆರೋಗ್ಯ ಯೋಜನೆಗಳಡಿ, ಆಸ್ಪತ್ರೆಗಳು ಹೆಚ್ಚಿಸಿರುವ MRP ಆಧಾರದ ಮೇಲೆಯೇ ಹಣದ ಮರುಪಾವತಿ (Reimbursement) ಪಡೆಯುತ್ತಿರುವುದನ್ನು ನ್ಯಾಯಾಲಯ ಗಮನಿಸಿದೆ.

ಇದರಿಂದ ಸರ್ಕಾರದ ಬೊಕ್ಕಸಕ್ಕೂ ದೊಡ್ಡ ಹೊರೆ ಬೀಳುತ್ತದೆ. ಅಂತಿಮವಾಗಿ ಇದು ತೆರಿಗೆದಾರರ ಹಣದ ದುರುಪಯೋಗಕ್ಕೆ ಕಾರಣವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಔಷಧ ತಯಾರಕರು ತಾವು ಕಡಿಮೆ ಬೆಲೆಗೆ ಔಷಧಿಗಳನ್ನು ಮಾರಾಟ ಮಾಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರೂ, ಆ ಔಷಧಿಗಳ ಮೇಲೆ ಭಾರಿ MRP ಅನ್ನು ಮುದ್ರಿಸುವವರು ಅವರೇ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular