ಬೆಂಗಳೂರು-ಕರ್ನಾಟಕ ವಿಧಾನಮಂಡಲದ ಉಭಯ ಸದನಗಳಲ್ಲಿ ಡಾ. ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿ ಒಂದು ಸಾಲಿನ ನಿರ್ಣಯ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿರುವುದು ಪಶ್ಚಿಮ ಘಟ್ಟ ಮತ್ತು ಮಲೆನಾಡಿನ ಲಕ್ಷಾಂತರ ಜನರಿಗೆ ದೊಡ್ಡ ಮಟ್ಟದ ನೆಮ್ಮದಿ ತಂದಿದೆ.
ಸರ್ಕಾರದ ನಿರ್ಧಾರದ ಹಿನ್ನೆಲೆ
ಈ ವರದಿಯು ಈ ಭಾಗದ ಜನರ ಬದುಕಿನ ಮೇಲೆ ತಂದೊಡ್ಡಬಹುದಾದ ಗಂಭೀರ ಪರಿಣಾಮಗಳನ್ನು ಮನಗಂಡು ಸರ್ಕಾರ ಈ ದಿಟ್ಟ ನಿರ್ಧಾರಕ್ಕೆ ಬಂದಿದೆ.
ಕೇವಲ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಜನರ ಬದುಕು, ಆಸ್ತಿ-ಪಾಸ್ತಿ ಹಾಗೂ ಒಡೆತನದ ಹಕ್ಕುಗಳಿಗೆ ಕುತ್ತು ತರುವ ಅಂಶಗಳು ವರದಿಯಲ್ಲಿದ್ದು, ಅನುಕೂಲಕ್ಕಿಂತ ಹಾನಿಯೇ ಹೆಚ್ಚಿದೆ ಎಂದು ಆಡಳಿತ ಮತ್ತು ಪ್ರತಿಪಕ್ಷಗಳು ಒಮ್ಮತಕ್ಕೆ ಬಂದಿವೆ.
ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸುವ ಹಾಗೂ ಪಶ್ಚಿಮ ಘಟ್ಟದ ಜನರನ್ನು ರಕ್ಷಿಸುವ ಉದ್ದೇಶದಿಂದ “ಈ ವರದಿಯನ್ನು ನಮ್ಮ ರಾಜ್ಯದಲ್ಲಿ ಒಪ್ಪಲು ಸಾಧ್ಯವಿಲ್ಲ” ಎಂದು ಕಡಂಡಿತವಾಗಿ ತಿಳಿಸಿ, ಒಂದು ಸಾಲಿನ ನಿರ್ಣಯವನ್ನು ಮಂಡಿಸಲು ಸಿದ್ಧತೆ ನಡೆಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ
ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸುವ ಹಾಗೂ ಪಶ್ಚಿಮ ಘಟ್ಟದ ಜನರನ್ನು ರಕ್ಷಿಸುವ ಉದ್ದೇಶದಿಂದ “ಈ ವರದಿಯನ್ನು ನಮ್ಮ ರಾಜ್ಯದಲ್ಲಿ ಒಪ್ಪಲು ಸಾಧ್ಯವಿಲ್ಲ” ಎಂದು ಕಡಂಡಿತವಾಗಿ ತಿಳಿಸಿ, ಒಂದು ಸಾಲಿನ ನಿರ್ಣಯವನ್ನು ಮಂಡಿಸಲು ಸಿದ್ಧತೆ ನಡೆಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.
ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮತೆ
ಕಸ್ತೂರಿರಂಗನ್ ಸಮಿತಿ ಶಿಫಾರಸುಗಳ ಆಧಾರದ ಮೇಲೆ ಪಶ್ಚಿಮಘಟ್ಟದ ಕೆಲವು ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳಾಗಿ ಘೋಷಿಸುವ ಕೇಂದ್ರದ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿದ್ದು, ವಿಧಾನಸಭೆ ಹಾಗೂ ವಿಧಾನಪರಿಷತ್ನಲ್ಲಿ ಸುದೀರ್ಘ ಚರ್ಚೆಯ ಬಳಿಕ ರಾಜ್ಯದ ಆಕ್ಷೇಪವನ್ನು ಕೇಂದ್ರಕ್ಕೆ ಅಧಿಕೃತವಾಗಿ ತಿಳಿಸುವ ನಿರ್ಣಯ ಕೈಗೊಳ್ಳುವ ಪ್ರಕ್ರಿಯೆ ನಡೆದಿದೆ
ಕಸ್ತೂರಿರಂಗನ್ ವರದಿಯ ಅನುಷ್ಠಾನದಿಂದ ಮಲೆನಾಡು ಮತ್ತು ಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿ ಕೃಷಿ, ವಸತಿ, ಪ್ರವಾಸೋದ್ಯಮ, ಸಣ್ಣ ಕೈಗಾರಿಕೆ ಸೇರಿದಂತೆ ದೈನಂದಿನ ಚಟುವಟಿಕೆಗಳ ಮೇಲೆ ನಿರ್ಬಂಧಗಳು ಬರಬಹುದೆಂಬ ಆತಂಕ ಸ್ಥಳೀಯರಲ್ಲಿ ಇದೆ. ಪ್ರಸಕ್ತ ಕೇಂದ್ರದ ಏಳನೇ ಕರಡು ಅಧಿಸೂಚನೆಯಲ್ಲಿ ಕರ್ನಾಟಕದ 10 ಜಿಲ್ಲೆಗಳ 33 ತಾಲೂಕುಗಳ 1,576 ಗ್ರಾಮಗಳ ವ್ಯಾಪ್ತಿಯ ಸುಮಾರು 20,668 ಚದರ ಕಿ.ಮೀ. ಪ್ರದೇಶವನ್ನು ESA ವ್ಯಾಪ್ತಿಗೆ ತರುವ ಪ್ರಸ್ತಾವವಿದೆ.
ಇದೇ ಕಾರಣಕ್ಕೆ ವರದಿಯ ಅನುಷ್ಠಾನವನ್ನು ಕೇವಲ ಪರಿಸರ ನೀತಿಯ ಪ್ರಶ್ನೆಯಾಗಿ ನೋಡದೆ, ಜನರ ಭೂಮಿ, ಕೃಷಿ ಮತ್ತು ಜೀವನೋಪಾಯದ ಪ್ರಶ್ನೆಯಾಗಿಯೂ ರಾಜ್ಯ ಸರ್ಕಾರ ಮುಂದಿಟ್ಟಿದೆ.
ಸೆ.21ರಿಂದ ಆರಂಭವಾಗಿರುವ ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ಕಸ್ತೂರಿರಂಗನ್ ವರದಿ ಪ್ರಮುಖ ಚರ್ಚೆಯ ವಿಷಯವಾಗಿದೆ. ಆಡಳಿತಾರೂಢ ಕಾಂಗ್ರೆಸ್ ಮಾತ್ರವಲ್ಲದೆ ಪ್ರತಿಪಕ್ಷ ಬಿಜೆಪಿ ಸೇರಿದಂತೆ ಹಲವು ಸದಸ್ಯರು ವರದಿಯ ಅನುಷ್ಠಾನದಿಂದ ಸ್ಥಳೀಯರಿಗೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಪ್ರತಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ನಾಯಕರು ತಮ್ಮ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ರಾಜ್ಯದ ಹಿತಾಸಕ್ತಿಯನ್ನು ರಕ್ಷಿಸುವ ಅಗತ್ಯವನ್ನು ಪ್ರತಿಪಾದಿಸಿದ್ದು, ಕೇವಲ ನಿರ್ಣಯ ಕೈಗೊಳ್ಳುವುದಕ್ಕಿಂತ ಮುಂದಾಗಿ ಕಾನೂನುಬದ್ಧವಾಗಿ ರಾಜ್ಯದ ನಿಲುವನ್ನು ಸಮರ್ಥಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ನಿರ್ಣಯದ ಹಿಂದೆ ರಾಜಕೀಯ ಉದ್ದೇಶ
‘ಒಂದು ಸಾಲಿನ ನಿರ್ಣಯ’ದ ಹಿಂದೆ ದೊಡ್ಡ ಸಂದೇಶ
ರಾಜ್ಯ ಸರ್ಕಾರದ ನಿಲುವಿನ ಸಾರಾಂಶವನ್ನು ಒಂದು ಸಾಲಿನಲ್ಲಿ ಹೇಳುವುದಾದರೆ—ಪಶ್ಚಿಮಘಟ್ಟವನ್ನು ಸಂರಕ್ಷಿಸುವುದು ಅಗತ್ಯ, ಆದರೆ ಅದರ ಹೆಸರಿನಲ್ಲಿ ಮಲೆನಾಡಿನ ಜನರ ಕೃಷಿ, ವಸತಿ ಮತ್ತು ಜೀವನೋಪಾಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಕಸ್ತೂರಿರಂಗನ್ ಶಿಫಾರಸುಗಳನ್ನು ಜಾರಿಗೊಳಿಸಲು ರಾಜ್ಯ ಒಪ್ಪುವುದಿಲ್ಲ.
ಇದೇ ನಿಲುವನ್ನು ವಿಧಾನಮಂಡಲದ ನಿರ್ಣಯದ ಮೂಲಕ ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಉದ್ದೇಶ ರಾಜ್ಯ ಸರ್ಕಾರದ್ದಾಗಿದೆ. ಕೇಂದ್ರದ ಏಳನೇ ಕರಡು ಅಧಿಸೂಚನೆಗೆ ರಾಜ್ಯ ತನ್ನ ಆಕ್ಷೇಪ ಸಲ್ಲಿಸಬೇಕಾದ ಗಡುವು ಸೆ.27 ಆಗಿರುವ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನವನ್ನು ತುರ್ತಾಗಿ ಕರೆಯಲಾಗಿದೆ
ಅಂದರೆ, ಇದು ಕೇವಲ ಒಂದು ನಿರ್ಣಯವಲ್ಲ; ರಾಜ್ಯ–ಕೇಂದ್ರ ಪರಿಸರ ನೀತಿ, ಸ್ಥಳೀಯ ಹಕ್ಕುಗಳು ಮತ್ತು ಪಶ್ಚಿಮಘಟ್ಟ ಸಂರಕ್ಷಣೆ ನಡುವಿನ ಸಮತೋಲನದ ಬಗ್ಗೆ ಕರ್ನಾಟಕದ ಅಧಿಕೃತ ನಿಲುವನ್ನು ದಾಖಲಿಸುವ ರಾಜಕೀಯ ಹಾಗೂ ಆಡಳಿತಾತ್ಮಕ ಹೆಜ್ಜೆಯಾಗಿದೆ
ವಿಧಾನಮಂಡಲದ ನಿರ್ಣಯ ಅಂಗೀಕಾರವಾದ ತಕ್ಷಣವೇ ಕೇಂದ್ರದ ಕರಡು ಅಧಿಸೂಚನೆ ಕಾನೂನುಬದ್ಧವಾಗಿ ರದ್ದಾಗುತ್ತದೆ ಎಂದರ್ಥವಲ್ಲ. ರಾಜ್ಯ ತನ್ನ ಆಕ್ಷೇಪ, ಪರ್ಯಾಯ ಸಲಹೆ ಹಾಗೂ ಸ್ಥಳೀಯ ವಾಸ್ತವಾಂಶಗಳನ್ನು ಕೇಂದ್ರದ ಮುಂದೆ ದಾಖಲಿಸಲಿದೆ. ಅಂತಿಮವಾಗಿ ಪರಿಸರ ಸೂಕ್ಷ್ಮ ಪ್ರದೇಶದ ಅಧಿಸೂಚನೆ ಕುರಿತು ಕೇಂದ್ರ ಮಟ್ಟದಲ್ಲೇ ಮುಂದಿನ ಪ್ರಕ್ರಿಯೆ ನಡೆಯಲಿದೆ.
ಹೀಗಾಗಿ ವಿಶೇಷ ಅಧಿವೇಶನದಲ್ಲಿ ಹೊರಬರಲಿರುವ ನಿರ್ಣಯದ ರಾಜಕೀಯ ಮಹತ್ವಕ್ಕಿಂತಲೂ ಅದರ ಮುಂದಿನ ಆಡಳಿತಾತ್ಮಕ ಪರಿಣಾಮ ಮುಖ್ಯವಾಗಲಿದೆ. ರಾಜ್ಯದ ಎಲ್ಲಾ ಪಕ್ಷಗಳ ಅಭಿಪ್ರಾಯವನ್ನು ಒಳಗೊಂಡ ನಿರ್ಣಯ ಕೇಂದ್ರಕ್ಕೆ ತಲುಪಿದರೆ, ಕರ್ನಾಟಕದ ಪಶ್ಚಿಮಘಟ್ಟ ಪ್ರದೇಶದ ಕುರಿತಾಗಿ ರಾಜ್ಯದ ನಿಲುವು ಸ್ಪಷ್ಟವಾಗಿ ದಾಖಲಾಗಲಿದೆ.
ರಾಜ್ಯ ಸರ್ಕಾರದ ಮುಂದೆ ಸವಾಲು
ಕಸ್ತೂರಿರಂಗನ್ ವರದಿಯನ್ನು “ಮಲೆನಾಡು–ಪಶ್ಚಿಮಘಟ್ಟದ ಜನರ ಪಾಲಿನ ಮರಣಶಾಸನ” ಎಂದು ರಾಜಕೀಯವಾಗಿ ಬಿಂಬಿಸುವ ವಾದದ ನಡುವೆ, ರಾಜ್ಯ ಸರ್ಕಾರದ ಮುಂದಿರುವ ನಿಜವಾದ ಸವಾಲು ಪರಿಸರ ಸಂರಕ್ಷಣೆಯ ಅಗತ್ಯವನ್ನು ನಿರಾಕರಿಸದೆ, ಅದೇ ಸಮಯದಲ್ಲಿ ಸ್ಥಳೀಯರ ಭೂಮಿ, ಕೃಷಿ, ವಸತಿ ಮತ್ತು ಜೀವನೋಪಾಯಕ್ಕೆ ಕಾನೂನುಬದ್ಧ ರಕ್ಷಣೆ ಒದಗಿಸುವ ಪರ್ಯಾಯ ವ್ಯವಸ್ಥೆಯನ್ನು ಕೇಂದ್ರದ ಮುಂದೆ ಮಂಡಿಸುವುದಾಗಿದೆ. ವಿಶೇಷ ಅಧಿವೇಶನದ ನಿರ್ಣಯ ಆ ಹೋರಾಟದ ಮೊದಲ ಅಧಿಕೃತ ಹೆಜ್ಜೆಯಾಗಲಿದೆ.
ಮರಣ ಶಾಸನದಂತಿರುವ ವರದಿ: ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಂಡರೆ ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶಗಳಲ್ಲಿ ವಾಸಿಸುವ ರೈತರು, ಸ್ಥಳೀಯ ನಿವಾಸಿಗಳು ಮತ್ತು ಆದಿವಾಸಿಗಳ ದೈನಂದಿನ ಚಟುವಟಿಕೆಗಳು ಹಾಗೂ ಸಾಂಪ್ರದಾಯಿಕ ಕೃಷಿ ಪದ್ಧತಿಗಳಿಗೆ ತೀವ್ರ ಸ್ವರೂಪದ ತಡೆ ಉಂಟಾಗುವ ಆತಂಕವಿತ್ತು.
ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಮಾತ್ರವಲ್ಲದೆ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಬಹುತೇಕ ಎಲ್ಲಾ ನಾಯಕರು ವರದಿಯನ್ನು ವಿರೋಧಿಸಿ, ಇದು ಜನವಿರೋಧಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

