HomeEntertainment'ಚಿ.ತು' ಚಿತ್ರದ ಮಾಸ್ ಟೈಟಲ್ ಸಾಂಗ್ ರಿಲೀಸ್: ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸುತ್ತಿದೆ ಎನರ್ಜಿಟಿಕ್ ಹಾಡು!

‘ಚಿ.ತು’ ಚಿತ್ರದ ಮಾಸ್ ಟೈಟಲ್ ಸಾಂಗ್ ರಿಲೀಸ್: ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸುತ್ತಿದೆ ಎನರ್ಜಿಟಿಕ್ ಹಾಡು!

ಸನತ್ ಮತ್ತು ವೀರಣಿಕಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ‘ಚಿ ತು’ ಕನ್ನಡ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಚಿತ್ರದ ಬಿರುಸಿನ ಎನರ್ಜಿಯಿಂದ ಕೂಡಿದ ಟೈಟಲ್ ಸಾಂಗ್‌ಗೆ ಖ್ಯಾತ ಗಾಯಕ ಆಂಥೋನಿ ದಾಸನ್ ದ್ವನಿ ನೀಡಿದ್ದು, ತಮ್ಮ ವಿಶಿಷ್ಟ ಶೈಲಿಯ ಹಾಡುಗಾರಿಕೆಯ ಮೂಲಕ ಮಾಸ್ ಪ್ರಿಯರ ಗಮನ ಸೆಳೆದಿದ್ದಾರೆ. ಈ ಹಾಡನ್ನು ಅಲಾಪನಾ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ.

‘ಐ ಲವ್ ಯು’ ಸಿನಿಮಾ ಖ್ಯಾತಿಯ ಕಿರಣ್ ತೋಟಂಬೈಲು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದು, ಅರಸು ಅಂತಾರೆ ಅವರು ಬರೆದಿರುವ ಸಾಹಿತ್ಯಕ್ಕೆ ಪಕ್ಕಾ ಮಾಸ್ ಶೈಲಿಯ ಟ್ಯೂನ್ ಸಂಯೋಜಿಸಿದ್ದಾರೆ. ಮಂಜು ಮಹಾದೇವ್ ಅವರ ರಿದಮ್ ಹಾಗೂ ಮೈಸೂರು ವಿಜಯ್ ಸೂರ್ಯ ಅವರ ನಾದಸ್ವರ ವಾದನ ಹಾಡಿನ ರಂಗನ್ನು ಹೆಚ್ಚಿಸಿದೆ. ಶಿವು ರಾಮನಗರ ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರವನ್ನು ‘ಕಾಮರೊಟ್ಟು ಚೆಕ್ ಪೋಸ್ಟ್’ ಸಿನಿಮಾ ನಿರ್ಮಿಸಿದ್ದ ಸಿಆರ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಚೇತನ್ ರಾಜ್ ನಿರ್ಮಾಣ ಮಾಡಿದ್ದಾರೆ.

ಚಿತ್ರದಲ್ಲಿ ನಾಯಕ-ನಾಯಕಿಯ ಜೊತೆಗೆ ಕಾಮಿಡಿ ಸಂತು (ಟುಕಲಿ ಸಂತು), ಕುರಿ ಪ್ರತಾಪ್, ಮಹಾಂತೇಶ್ ಹಿರೇಮಠ, ಅಹಮದ್ ಸಲ್ಮಾನ್, ಗಿರಿ ಮೂಲೆಹಟ್ಟಿ ಸೇರಿದಂತೆ ದೊಡ್ಡ ಕಲಾವಿದರ ಬಳಗವೇ ಅಭಿನಯಿಸಿದೆ. ರಾಜು ಹೆಮ್ಮಿಗೆಪುರ ಛಾಯಾಗ್ರಹಣ ಹಾಗೂ ವಿಜಯ್ ಸಿದಗಿ ಸಂಕಲನ ಈ ಚಿತ್ರಕ್ಕಿದೆ. ಎನರ್ಜಿಟಿಕ್ ರಿದಮ್ ಹೊಂದಿರುವ ಈ ಶೀರ್ಷಿಕೆ ಗೀತೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕೇಳುಗರನ್ನು ಕುಣಿಯುವಂತೆ ಮಾಡುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular