ಲಕ್ನೋ: ನಿಷೇಧಿತ ನಕ್ಸಲ್ ಸಂಘಟನೆಯ ಕಮಾಂಡರ್ ಬ್ರಿಜೇಶ್ ಗಂಜು ಅಲಿಯಾಸ್ ಗೋಪಾಲ್ ಸಿಂಗ್ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (UP ATS) ನಡೆಸಿದ ಎನ್ಕೌಂಟರ್ನಲ್ಲಿ ಹತ್ಯೆಯಾಗಿದ್ದಾನೆ.
ಹಲವು ವರ್ಷಗಳಿಂದ ಭದ್ರತಾ ಸಂಸ್ಥೆಗಳಿಗೆ ಬೇಕಾಗಿದ್ದ ನಕ್ಸಲ್ ಕಮಾಂಡರ್ ಬ್ರಿಜೇಶ್ ಗಂಜುನನ್ನು ಯುಪಿ ಎಟಿಎಸ್ ಅಧಿಕಾರಿಗಳಿ ಹೊಡೆದುರುಳಿಸಿದ್ದಾರೆ. ಕೊಲ್ಲಲ್ಪಟ್ಟ ಬ್ರಿಜೇಶ್ ಗಂಜು, ಜಾರ್ಖಂಡ್ ಮೂಲದ ನಿಷೇಧಿತ ನಕ್ಸಲ್ ಸಂಘಟನೆಯಾದ ತೃತೀಯಾ ಪ್ರಸ್ತುತಿ ಸಮಿತಿ (ಟಿಪಿಸಿ)ಯ ಪ್ರಮುಖ ಕಮಾಂಡರ್ ಆಗಿದ್ದನು. ಈತ ಹಲವಾರು ವರ್ಷಗಳಿಂದ ಭದ್ರತಾ ಸಂಸ್ಥೆಗಳ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿದ್ದ.
ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ನಡೆಸುತ್ತಿರುವ ತಾಂಡ್ವಾ ಭಯೋತ್ಪಾದನೆಗೆ ಹಣಕಾಸು ನೆರವು ಪ್ರಕರಣದಲ್ಲೂ ಈತ ಪ್ರಮುಖ ಆರೋಪಿಯಾಗಿದ್ದ. ನಕ್ಸಲ್ ಕಮಾಂಡರ್ ಬ್ರಿಜೇಶ್ ಗಂಜುವಿನ ಮಾಹಿತಿ ನೀಡಿದವರಿಗೆ 30 ಲಕ್ಷ ರೂ. ಬಹುಮಾನವನ್ನು ಘೋಷಿಸಲಾಗಿತ್ತು. ಇದರಲ್ಲಿ ಜಾರ್ಖಂಡ್ ಸರ್ಕಾರವು 25 ಲಕ್ಷ ರೂ. ಮತ್ತು ಎನ್ ಐಎ ಹೆಚ್ಚುವರಿಯಾಗಿ 5 ಲಕ್ಷ ರೂ. ಬಹುಮಾನವನ್ನು ನಿಗದಿಪಡಿಸಿದ್ದವು.
ಎಟಿಎಸ್ ಅಧಿಕಾರಿಗಳಿಗೆ ವಾರಣಾಸಿಯ ನಿರ್ದಿಷ್ಟ ಪ್ರದೇಶದಲ್ಲಿ ನಕ್ಸಲ್ ಕಮಾಂಡರ್ ಇರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿ ಆಧರಿಸಿ ಯುಪಿ ಎಟಿಎಸ್ ಮತ್ತು ವಿಶೇಷ ಕಾರ್ಯಪಡೆ (STF) ಜಂಟಿ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಎನ್ಕೌಂಟರ್ ನಲ್ಲಿ ಹತ್ಯೆಗೈದಿದೆ.
ಬೆಂಗಳೂರಿನಲ್ಲಿ ವ್ಹೀಲಿಂಗ್ ಪುಂಡರ ಹುಚ್ಚಾಟಕ್ಕೆ ಓರ್ವ ಬಲಿ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ವ್ಹೀಲಿಂಗ್ ಪುಂಡರ ಹಾವಳಿ ಹೆಚ್ಚಾಗುತ್ತಿದೆ. ವ್ಹೀಲಿಂಗ್ ಮಾಡುವವರ ವಿರುದ್ಧ ಪೊಲಿಸರು ಎಷ್ಟೇ ಕ್ರಮ ಕೈಗೊಂಡರೂ ಮತ್ತೆ ಪುಂದಾಟ ಮುಂದುವರೆದಿದೆ. ವ್ಹೀಲಿಂಗ್ ಪುಂಡರ ಹುಚ್ಚಾಟಕ್ಕೆ ವ್ಯಕ್ತಿಯೋರ್ವರು ಬಲಿಯಾಗಿರುವ ಘಟನೆ ನಡೆದಿದೆ.
ಅನ್ನಪೂರ್ಣೇಶ್ವರಿ ನಗರದ ಮಹದೇಶ್ವರ ದೇಗುಲದ ಬಳಿ ಈ ಘಟನೆ ನಡೆದಿದೆ. ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದವರನ್ನು ತಪ್ಪಿಸಲು ಹೋಗಿ ಟಿಟಿ ವಾಹನ ಅಪಘಾತಕ್ಕೀಡಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ಟಿಟಿ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಟಿಟಿ ವಾಹನದಲ್ಲಿದ್ದ ಮನೋಜ್ ಕುಮಾರ್ ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಅಖಲಿಸಲಾಗಿದೆ.
ಮನೋಜ್ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಟಿಟಿ ವಾಹನ ಲಗ್ಗೆರೆಯಿಂದ ಬರುತ್ತಿತ್ತು. ಈ ವೇಳೆ ಪುಂಡರು ಬೈಕ್ ವ್ಹೀಲಿಂಗ್ ಮಾಡುತ್ತಾ ಟಿಟಿ ವಾಹನಕ್ಕೆ ಅಡ್ಡ ಬಂದಿದ್ದಾರೆ. ಅವರನ್ನು ತಪ್ಪಿಸಲು ಹೋಗಿ ಈ ದುರಂತ ಸಂಭವಿಸಿದೆ.
ಅಪಘಾತ ಸಂಭವ್ಚಿಸಿ ಒಂದು ಗಂಟೆಯಾದರೂ ಆಂಬುಲೆನ್ಸ್ ವಾಹನ ಸ್ಥಳಕ್ಕೆ ಬಂದಿಲ್ಲ. ಇದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವ್ಹೀಲಿಂಗ್ ಮಾಡುತ್ತಿದ್ದ ಯುವಕರ ವಿರುದ್ಧ ಈವರೆಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

