ಮೈಸೂರು: ಮೈತ್ರಿ ಸಂಸ್ಕೃತ-ಸಂಸ್ಕೃತಿ ಪ್ರತಿಷ್ಠಾನಮ್ (ರಿ) ಬೆಂಗಳೂರು ವತಿಯಿಂದ ನಾಳೆ ( ಸೆಪ್ಟೆಂಬರ್ 20, 2026ರ ) ಬೆಳಿಗ್ಗೆ 9.00 ಗಂಟೆಗೆ ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ಸಭಾಂಗಣದಲ್ಲಿ ‘ಮೇಧಾನಮನಮ್ ಸಂಸ್ಕೃತೋತ್ಸವಃ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳು:
ಸಾಮರಸ್ಯಮ್: ಸಂಸ್ಕೃತ ಭಾವಗೀತೆಗಳ ಮಧುರ ಪ್ರಸ್ತುತಿ.
ಸಂಸ್ಕೃತೋತ್ಸವಃ: ಸಾವಿರಾರು ಸಂಸ್ಕೃತ ಪ್ರೇಮಿಗಳು ಒಂದೆಡೆ ಸೇರುವ ಅಪೂರ್ವ ಅವಕಾಶ.
ಯೋಧನಮನಮ್: ದೇಶ ರಕ್ಷಣೆಗೆ ಕಟಿಬದ್ಧರಾಗಿರುವ ಸೇನಾಧಿಕಾರಿಗಳಿಗೆ ಗೌರವಾಪರ್ಣೆ.
ವಿದ್ವದ್ವಂದನಮ್: ನಾಡಿನ ಬಹುಶ್ರುತ ವಿದ್ವಾಂಸರಿಗೆ ವಿಶೇಷ ಅಭಿನಂದನೆ.
ಮೇಧಾನಮನಮ್: ಸಂಸ್ಕೃತ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪುರಸ್ಕಾರ.
ಪ್ರದರ್ಶಿನೀ: ಸಂಸ್ಕೃತ ಕಲಿಕೆಯ ನೂತನ ಪುಸ್ತಕಗಳ ಲೋಕಾರ್ಪಣೆ ಹಾಗೂ ಪ್ರದರ್ಶನ.
‘ಸಂಸ್ಕೃತಜ್ಞರು, ಸಂಸ್ಕೃತಪ್ರೇಮಿಗಳು ಹಾಗೂ ಸಾಧಕರು ಒಂದೇ ವೇದಿಕೆಯಲ್ಲಿ ಸಮ್ಮಿಲನಗೊಳ್ಳುವ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹಾಗೂ ಸಂಸ್ಕೃತ ಅಭಿಮಾನಿಗಳು ಕುಟುಂಬ ಸಮೇತರಾಗಿ ಆಗಮಿಸಿ, ಸಂಸ್ಕೃತ ಮಾತೆಯ ಅನುಗ್ರಹಕ್ಕೆ ಪಾತ್ರರಾಗಬೇಕು’ ಎಂದು ಕಾರ್ಯಕ್ರಮದ ಆಯೋಜಕರು ಆಹ್ವಾನಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕೆ.ಆರ್. ನಾಗರಾಜ: 9886765991 ಹಾಗೂ ಶ್ರೀಮತಿ ವೀಣಾರಾವ್: 7795902089 ಅವರನ್ನು ಸಂಪರ್ಕಿಸಬಹುದಾಗಿದೆ.

