ಬೆಂಗಳೂರು: ಕಳೆದ ಎರಡು ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ ಮತ್ತೆ ದಿಢೀರ್ ಏರಿಕೆಯಾಗಿದೆ. ಸೆಪ್ಟೆಂಬರ್ 18, ಶುಕ್ರವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹1,450 ಏರಿಕೆಯಾಗಿದ್ದು, ₹1,41,550ಕ್ಕೆ ತಲುಪಿದೆ. ಇನ್ನು 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹1,580 ಹೆಚ್ಚಳವಾಗಿ ₹1,54,420 ಆಗಿದೆ.
ಕಳೆದ ಒಂದು ವಾರದಿಂದ ಬಹುತೇಕ ಸ್ಥಿರವಾಗಿದ್ದ ಬೆಳ್ಳಿ ಬೆಲೆಯಲ್ಲೂ ಇಂದು ಏರಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ ₹5,000 ಹೆಚ್ಚಳವಾಗಿ ₹2.50 ಲಕ್ಷಕ್ಕೆ ತಲುಪಿದೆ. ಅಂದರೆ 100 ಗ್ರಾಂ ಬೆಳ್ಳಿ ಬೆಲೆ ₹25,000 ಹಾಗೂ ಪ್ರತಿ ಗ್ರಾಂಗೆ ₹250ರಷ್ಟಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಏರಿಕೆ
ಅಮೆರಿಕದ ಫೆಡರಲ್ ರಿಸರ್ವ್‌ನ ಬಡ್ಡಿದರ ನಿರ್ಧಾರದ ಬಳಿಕ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಯಾಗಿತ್ತು. ಆದರೆ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆ, ಡಾಲರ್ ಮೌಲ್ಯ ಹಾಗೂ ಬಾಂಡ್ ಇಳುವರಿ ಗರಿಷ್ಠ ಮಟ್ಟದಿಂದ ಕುಸಿದಿರುವುದು ಸೇರಿದಂತೆ ಹಲವು ಅಂಶಗಳು ಚಿನ್ನದ ದರದ ಮೇಲೆ ಪರಿಣಾಮ ಬೀರಿವೆ.
ಸೆಪ್ಟೆಂಬರ್ 18ರ ಶುಕ್ರವಾರದ ವಹಿವಾಟಿನಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ ಬೆಲೆ ಔನ್ಸ್‌ಗೆ ಸುಮಾರು $4,350ಕ್ಕೆ ಏರಿಕೆಯಾಗಿದೆ. ಹಿಂದಿನ ದಿನ ಇದು ಸುಮಾರು $4,270ರ ಮಟ್ಟದಲ್ಲಿತ್ತು. ಇದೇ ವೇಳೆ ಬೆಳ್ಳಿ ಬೆಲೆಯೂ ಔನ್ಸ್‌ಗೆ ಸುಮಾರು $63ರಿಂದ $66ರ ಮಟ್ಟಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ
22 ಕ್ಯಾರೆಟ್ ಆಭರಣ ಚಿನ್ನ: 1 ಗ್ರಾಂ ₹14,155 10 ಗ್ರಾಂ ₹1,41,550
24 ಕ್ಯಾರೆಟ್ ಅಪರಂಜಿ ಚಿನ್ನ: 1 ಗ್ರಾಂ ₹15,442 10 ಗ್ರಾಂ ₹1,54,420
18 ಕ್ಯಾರೆಟ್ ಚಿನ್ನ: 1 ಗ್ರಾಂ ₹11,582
ಬೆಂಗಳೂರಿನಲ್ಲಿ ಇಂದಿನ ಬೆಳ್ಳಿ ಬೆಲೆ
ಬೆಳ್ಳಿ: 1 ಗ್ರಾಂ ₹250
100 ಗ್ರಾಂ ₹25,000
1 ಕೆಜಿ ₹2,50,000
ಚಿನ್ನ ಮತ್ತು ಬೆಳ್ಳಿ ಬೆಲೆಗಳು ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳು, ಡಾಲರ್ ಮೌಲ್ಯ, ಕಚ್ಚಾ ತೈಲದ ದರ ಹಾಗೂ ಹೂಡಿಕೆದಾರರ ಬೇಡಿಕೆ ಸೇರಿದಂತೆ ಹಲವು ಅಂಶಗಳ ಆಧಾರದ ಮೇಲೆ ದಿನದಿಂದ ದಿನಕ್ಕೆ ಬದಲಾಗಬಹುದು

