ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ 13 ವರ್ಷದ ಬಾಲಕನ ಅಪಹರಣ ಮಾಡಿ ಕೊಲೆ ಮಾಡಲಾಗಿದೆ. ಬಾಲಕನ ಪಕ್ಕದ ಮನೆಯ ನಿವಾಸಿ ಭಾಸ್ಕರ್ ರೆಡ್ಡಿ ಎಂಬಾತ ಹಣಕ್ಕಾಗಿ ಬಾಲಕನನ್ನು ಅಪಹರಣ ಮಾಡಿ ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ.
ಆರೋಪಿ ಭಾಸ್ಕರ್ ಮತ್ತು ಬಾಲಕ ಪ್ರಜ್ವಲ್ ಯಲಹಂಕದ ವಿನಾಯಕ ನಗರ ನಿವಾಸಿಗಳಾಗಿದ್ದಾರೆ. ಮೊನ್ನೆ ಸಂಜೆ ಬಾಲಕನನ್ನು ಭಾಸ್ಕರ್ ರೆಡ್ಡಿ ಕಾರ್ ನಲ್ಲಿ ಕರೆದುಕೊಂಡು ಹೋಗಿದ್ದ. ಗಣಪತಿ ಮೆರವಣಿಗೆಗೆ ಪಟಾಕಿ ತರಬೇಕೆಂದು ಪಕ್ಕದ ಮನೆಯ ಬಾಲಕ ಪ್ರಜ್ವಲ್ ನನ್ನು ಕಾರ್ ಕರೆದುಕೊಂಡು ಹೋಗಿದ್ದ ಭಾಸ್ಕರ್ ರೆಡ್ಡಿ ಕಾರ್ ನಲ್ಲಿ ಪ್ರಜ್ವಲ್ ನನ್ನು ಇಟ್ಟುಕೊಂಡು ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಅಲ್ಲದೇ, ಬಾಲಕನಿಂದಲೂ ವಿಡಿಯೋ ಮಾಡಿಸಿ ಪೋಷಕರಿಗೆ ಬೆದರಿಕೆ ಹಾಕಿದ್ದ
ಆದರೆ, ಎಣ್ಣೆ ಮತ್ತಿನಲ್ಲಿ ಬಾಲಕನನ್ನು ಹೊಡೆದು ಕೊಲೆ ಮಾಡಿದ್ದಾನೆ. ಹಾಲೋ ಬ್ರಿಕ್ಸ್ ನಿಂದ ಹೊಡೆದು ಬಾಲಕ ಪ್ರಜ್ವಲ್ ಅನ್ನು ಕೊಲೆ ಮಾಡಿದ ಭಾಸ್ಕರ್ ರೆಡ್ಡಿ ಕಾರ್ ಡಿಕ್ಕಿಯಲ್ಲಿ ಮೃತದೇಹ ಇಟ್ಟುಕೊಂಡು ಪರಾರಿಯಾಗಿದ್ದಾನೆ. ಕೊಲೆಯ ನಂತರ ಬಾಲಕನ ಶವವನ್ನು ಕಾರಿನ ಡಿಕ್ಕಿಯಲ್ಲಿಟ್ಟು ಆಂಧ್ರಪ್ರದೇಶದ ಕಡೆಗೆ ಪರಾರಿಯಾಗುತ್ತಿದ್ದ ಆರೋಪಿ ಭಾಸ್ಕರ್ ರೆಡ್ಡಿ ಗಾಬರಿಯಲ್ಲಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದ್ದ. ನಂತರ ತಡೆಗೋಡೆಗೆ ಕಾರ್ ಡಿಕ್ಕಿ ಹೊಡೆದಿದ್ದು, ಬಳಿಕ ಬಳ್ಳಾರಿ ಸರ್ವಿಸ್ ರಸ್ತೆಯಲ್ಲಿ ಸರಣಿ ಅಪಘಾತ ಮಾಡಿದ್ದ.
ಸರಣಿ ಅಪಘಾತ ನಡೆಸಿ ಸ್ಥಳೀಯರಿಗೆ ಭಾಸ್ಕರ್ ರೆಡ್ಡಿ ಸಿಕ್ಕಿಬಿದ್ದಿದ್ದ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಚಿಕ್ಕಜಾಲ ಠಾಣೆ ಪೊಲೀಸರು ಪರಿಶೀಲನೆ ನಡೆಸಿದಾಗ ಕಾರ್ ನಲ್ಲಿ ಮೃತದೇಹ ಕಂಡು ಬಂದಿದೆ. ಕಾರ್ ಪರಿಶೀಲನೆ ಮಾಡುವಾಗ ಪೊಲೀಸರು ಡಿಕ್ಕಿ ಓಪನ್ ಮಾಡಿದ್ದು, ಶವ ಕಂಡು ಪೊಲೀಸರು ಶಾಕ್ ಆಗಿದ್ದಾರೆ. ವಿಚಾರಣೆಯ ವೇಳೆ ಭಾಸ್ಕರ್ ರೆಡ್ಡಿ ಅಪಘಾತದ ನಾಟಕ ಮಾಡಿದ್ದ. ದಾರಿಯಲ್ಲಿ ಬರುವಾಗ ಬಾಲಕ ಕಾರ್ ಅಡ್ಡ ಸಿಕ್ಕಿ ಮೃತಪಟ್ಟಿದ್ದ ಎಂದು ಹೇಳಿದ್ದ. ತನ್ನ ಗೆಳೆಯ ಹೇಳಿದಂತೆ ಆಂಧ್ರಪ್ರದೇಶದ ಕಡೆ ಹೊರಟಿದ್ದೆ ಎಂದು ಪೊಲೀಸ್ ವಿಚಾರಣೆಯ ವೇಳೆ ಆರೋಪಿ ಭಾಸ್ಕರ್ ರೆಡ್ಡಿ ಕತೆ ಕಟ್ಟಿದ್ದ. ಆದರೆ ಪ್ರಾಥಮಿಕ ತನಿಖೆಯಲ್ಲಿ ಬಾಲಕನ ಕೊಲೆ ಮಾಡಿರುವುದು ಪತ್ತೆಯಾಗಿದೆ. ಸದ್ಯ ಆರೋಪಿ ಭಾಸ್ಕರ್ ರೆಡ್ಡಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಕರಾಮುವಿ ಪ್ರವೇಶಾತಿ ಅವಧಿ ವಿಸ್ತರಣೆ
ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 2026-27 ನೇ ಸಾಲಿನ ಜುಲೈ ಆವೃತ್ತಿಯ ಸ್ನಾತಕ ಕೋರ್ಸುಗಳಾದ ಬಿ.ಎ., ಬಿ.ಕಾಂ., ಬಿ.ಬಿ.ಎ., ಬಿ.ಸಿ.ಎ., ಬಿ.ಎಸ್‌ಡಬ್ಲ್ಯೂ., ಬಿ.ಎಸ್ಸಿ., ಬಿ.ಲಿಬ್.ಐ.ಎಸ್ಸಿ. ಸೇರಿದಂತೆ ವಿವಿಧ ಸ್ನಾತಕ ಕೋರ್ಸುಗಳು ಹಾಗೂ ಎಂ.ಎ., ಎಂ.ಕಾಂ., ಎಂ.ಬಿ.ಎ., ಎಂ.ಸಿ.ಎ., ಎಂ.ಎಸ್‌ಡಬ್ಲ್ಯೂ., ಎಂ.ಎಸ್ಸಿ., ಎಂ.ಲಿಬ್.ಐ.ಎಸ್ಸಿ ಹಾಗೂ ಸೇರಿದಂತೆ ಸ್ನಾತಕೋತ್ತರ ಕೋರ್ಸುಗಳಿಗೆ ಪ್ರವೇಶ ಪಡೆಯಬಹುದಾಗಿದೆ.
ಪಿಜಿ ಡಿಪ್ಲೊಮಾ, ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸುಗಳ ಪ್ರವೇಶಾತಿ ಅವಧಿಯನ್ನು ಅಕ್ಟೋಬರ್ 13 ವರೆಗೆ ವಿಸ್ತರಿಸಲಾಗಿದೆ.
ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಬೆಂಗಳೂರು ಪ್ರಾದೇಶಿಕ ನಿರ್ದೇಶಕರು , ಬೆಂಗಳೂರು ಪ್ರಾದೇಶಿಕ ಕೇಂದ್ರ -01 ,ಮೊದಲನೇ ಮಹಡಿ, ಕೆ.ಎಸ್. ಆರ್ ಟಿ.ಸಿ. ಸ್ಯಾಟಲೈಟ್ ಬಸ್ ನಿಲ್ದಾಣ, ಮೈಸೂರು ರಸ್ತೆ, ಬಾಪೂಜಿನಗರ, ಬೆಂಗಳೂರು ಇಲ್ಲಿ ಭೇಟಿ ನೀಡಿ ಪ್ರವೇಶಾತಿ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್ www.ksoumysuru.in ಅಥವಾ ಬೆಂಗಳೂರು ಪ್ರಾದೇಶಿಕ ಕೇಂದ್ರದ ದೂರವಾಣಿ ಸಂಖ್ಯೆ 080-26603664, 98805-26439, 90195-26439 ಅನ್ನು ಸಂಪರ್ಕಿಸಬಹುದು ಎಂದು ಕರಾಮುವಿ ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

