HomeKarnatakaಗಣೇಶ ಮೂರ್ತಿ ವಿಸರ್ಜನೆ: ಆಯ್ದ ದಿನಗಳಂದು ಮದ್ಯ ಮಾರಾಟ ನಿಷೇಧ: ಡಿಜೆ ಇಲ್ಲ, 4 ಬಾಕ್ಸ್...

ಗಣೇಶ ಮೂರ್ತಿ ವಿಸರ್ಜನೆ: ಆಯ್ದ ದಿನಗಳಂದು ಮದ್ಯ ಮಾರಾಟ ನಿಷೇಧ: ಡಿಜೆ ಇಲ್ಲ, 4 ಬಾಕ್ಸ್ ಸಾಮಾನ್ಯ ಧ್ವನಿವರ್ಧಕಗಳ ಬಳಕೆಗೆ ಅವಕಾಶ

ದಾವಣಗೆರೆ: ಗಣೇಶ ಚತುರ್ಥಿ ಅಂಗವಾಗಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಗಣೇಶ ಮೂರ್ತಿಗಳ ವಿಸರ್ಜನೆಯ ವೇಳೆ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡಲು ಆಯ್ದ ದಿನಗಳಂದು ಜಿಲ್ಲೆಯಾದ್ಯಂತ ಮದ್ಯ ಮಾರಾಟ ಮತ್ತು ಸರಬರಾಜನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ.

ಅಬಕಾರಿ ಇಲಾಖೆ ದಾವಣಗೆರೆ ನಗರ ಉಪವಿಭಾಗದ ಪಾಲಿಕೆ ವ್ಯಾಪ್ತಿಯಲ್ಲಿ: ಸೆ.16, 18 ಮತ್ತು 22, ರಂದು ಬೆಳಿಗ್ಗೆ 6 ರಿಂದ ರಾತ್ರಿ 12 ಗಂಟೆಯವರೆಗೆ ನಿಷೇಧಿಸಲಾಗಿದೆ.

ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ವ್ಯಾಪ್ತಿಯಲ್ಲಿ ಮಲೇಬೆನ್ನೂರು ಪುರಸಭೆ ವ್ಯಾಪ್ತಿ: ಸೆಪ್ಟೆಂಬರ್ 16, 18, 22, 24, 27 ರಂದು ಬೆಳಿಗ್ಗೆ 6 ರಿಂದ ರಾತ್ರಿ 12 ಗಂಟೆಯವರೆಗೆ ನಿಷೇಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹರಿಹರ ನಗರ ವ್ಯಾಪ್ತಿ ಅಕ್ಟೋಬರ್ 4 ರಂದು ಬೆಳಿಗ್ಗೆ 6 ರಿಂದ ರಾತ್ರಿ 12 ಗಂಟೆಯವರೆಗೆ ತನಕ ನಿಷೇಧಿಸಲಾಗಿದೆ.

ಚನ್ನಗಿರಿ ಉಪ ವಿಭಾಗದ ವ್ಯಾಪ್ತಿಯಲ್ಲಿ: ಚನ್ನಗಿರಿ ತಾಲ್ಲೂಕು, ಸೆ.22ರ ಮಧ್ಯರಾತ್ರಿಯಿಂದ ಸೆ.23 ಮಧ್ಯರಾತ್ರಿಯವರೆಗೆ.

ಚನ್ನಗಿರಿ ಪಟ್ಟಣ, ನಲ್ಲೂರು, ನಲ್ಲೂರು ಗ್ರಾಮದ ಸುತ್ತಮುತ್ತ ಹೊನ್ನಾಳಿ ಪಟ್ಟಣ ಹಾಗೂ ಸಾಸ್ವೇಹಳ್ಳಿ, ಸಾಸ್ವೇಹಳ್ಳಿ ಸುತ್ತಮುತ್ತ ಸೆ.25ರ ಮಧ್ಯರಾತ್ರಿಯಿಂದ ಸೆ.26ರ ಮಧ್ಯರಾತ್ರಿಯವರೆಗೆ.

  ಚನ್ನಗಿರಿ ಪಟ್ಟಣ ನಲ್ಲೂರು, ನಲ್ಲೂರು ಗ್ರಾಮದ ಸುತ್ತಮುತ್ತ ಅಕ್ಟೋಬರ್ 1ರ ಮಧ್ಯರಾತ್ರಿಯಿಂದ ಅ.2 ಮಧ್ಯರಾತ್ರಿಯವರೆಗೆ.  ಹೊನ್ನಾಳಿ ತಾಲ್ಲೂಕು ಅ.3ರ ಮಧ್ಯರಾತ್ರಿಯಿಂದ ಅ.4ರ ಮಧ್ಯರಾತ್ರಿಯವರೆಗೆ, ಚನ್ನಗಿರಿ ತಾಲ್ಲೂಕು ಅ.7ರ ಮಧ್ಯರಾತ್ರಿಯಿಂದ ಅ.8ರ ಮಧ್ಯರಾತ್ರಿಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಹೊರ ಜಿಲ್ಲೆಯ ಡಿಜೆಗೆ ಪ್ರವೇಶವಿಲ್ಲ, 4 ಬಾಕ್ಸ್ ಸಾಮಾನ್ಯ ಧ್ವನಿ ವರ್ಧಕಗಳ ಬಳಕೆಗೆ ಅವಕಾಶ

ದಾವಣಗೆರೆ: ಜಿಲ್ಲೆಯಾದ್ಯಂತ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಕಾಪಾಡುವ ಹಿತದೃಷ್ಟಿಯಿಂದ ಗಣೇಶ ಮೂರ್ತಿಗಳು ವಿಸರ್ಜನೆಯಾಗುವವರೆಗೆ ಸೌಂಡ್ ಸಿಸ್ಟಂ ಬಳಕೆಗೆ ಸಂಬಂಧಿಸಿದಂತೆ ಕೆಳಕಂಡ ಷರತ್ತುಗಳಿಗೆಗೊಳಪಟ್ಟು ನಿಯಮಾನುಸಾರ ಎಲ್ಲಾ ಅಗತ್ಯ ಮುನ್ನೆಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಆದೇಶಿಸಿದ್ದಾರೆ.

Noise Pollution (Regulation & Control) Rule-2000  ಶಬ್ದ ಮಾಲಿನ್ಯ ತಡೆ ನಿಯಮಾನುಸಾರ ಧ್ವನಿವರ್ಧಕಗಳ ಶಬ್ದದ ಬಳಕೆಯನ್ನು ಪೊಲೀಸ್ ಇಲಾಖೆಯವರು ಪರಿಶೀಲಿಸಿ ಅನುಮತಿಯನ್ನು ನೀಡಬಹುದು.

ಇತರೆ ಜಿಲ್ಲೆಗಳಿಂದ ಗಣೇಶ ಹಬ್ಬದ ಸಂದರ್ಭದಲ್ಲಿ ಡಿ.ಜೆ ಸಿಸ್ಟಂ ತಂದು ಜಿಲ್ಲೆಯಲ್ಲಿ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಡಿಜೆ ಸೌಂಡ್ ಸಿಸ್ಟಂ ಮತ್ತು ಹೆಚ್ಚಿನ ಶಬ್ದ ಹೊರಸೂಸುವ ಉಪಕರಣಗಳನ್ನು ಹೊರತುಪಡಿಸಿ 4 ಬಾಕ್ಸ್ ಸಾಮಾನ್ಯ ಧ್ವನಿ ವರ್ದಕಗಳನ್ನು ಬಳಸಲು ಅನುಮತಿ ನೀಡಲಾಗಿದೆ.

ಡಿ.ಜೆ ಗಳಲ್ಲಿ ಬಳಸಲಾಗುವ ಹೆಚ್ಚಿನ ಶಬ್ದ ಹೊರಸೂಸುವ ಪ್ರೆಸರ್ ಮೈಡ್ಸ್(Pressure Mids) ಹಾಗೂ ಇತರೆ ಹೆಚ್ಚಿನ ಶಬ್ದಗಳನ್ನು ವಿಶೇಷವಾಗಿ ಹೊರಸೂಸುವ ಉಪಕರಣಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.    ಮಾನದಂಡಗಳನ್ನು ಡಿ.ಜೆ ಬಳಕೆದಾರರು ಮತ್ತು ಆಯೋಜಕರು ಪಾಲಿಸದೇ ಇದ್ದಲ್ಲಿ ಅಂತಹವರ ವಿರುದ್ಧ ಪೊಲೀಸ್ ಇಲಾಖೆಯವರು ನಿಯಮಾನುಸಾರ ಸೂಕ್ತ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಆದೇಶದಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular