HomeEntertainmentಹಾಲಿವುಡ್‌ಗೆ ರೀಮೇಕ್ ಆಗಲಿದೆ ವಿಜಯ್ ಸೇತುಪತಿಯ 'ಮಹಾರಾಜ': ತಮಿಳು ಚಿತ್ರರಂಗಕ್ಕೆ ಒಲಿದ ಜಾಗತಿಕ ಗೌರವ!

ಹಾಲಿವುಡ್‌ಗೆ ರೀಮೇಕ್ ಆಗಲಿದೆ ವಿಜಯ್ ಸೇತುಪತಿಯ ‘ಮಹಾರಾಜ’: ತಮಿಳು ಚಿತ್ರರಂಗಕ್ಕೆ ಒಲಿದ ಜಾಗತಿಕ ಗೌರವ!

ತಮಿಳು ಚಿತ್ರರಂಗದ ಪ್ರಸಿದ್ಧ ನಟ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಅಭಿನಯದ ಹಿಟ್ ಸಿನಿಮಾ ಮಹಾರಾಜ ಇದೀಗ ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ಕಳೆದ ಕೆಲವು ದಿನಗಳಿಂದ ಈ ಚಿತ್ರ ಹಾಲಿವುಡ್‌ಗೆ ರೀಮೇಕ್ ಆಗಲಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಇದೀಗ ಚಿತ್ರದ ನಿರ್ಮಾಣ ಸಂಸ್ಥೆಯಾದ ಪ್ಯಾಶನ್ ಸ್ಟುಡಿಯೋಸ್ ಈ ಸುದ್ದಿಯನ್ನು ಅಧಿಕೃತವಾಗಿ ಖಚಿತಪಡಿಸಿದೆ.

ಹಾಲಿವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆಯೊಂದು ಈ ಸಿನಿಮಾದ ರೀಮೇಕ್ ಹಕ್ಕುಗಳನ್ನು ಪಡೆದುಕೊಂಡಿದ್ದು, ಶೀಘ್ರದಲ್ಲೇ ನಿರ್ಮಾಣ ಕಾರ್ಯ ಆರಂಭವಾಗಲಿದೆ. ವಿಶೇಷವೆಂದರೆ, ಪ್ರಸಿದ್ಧ ಇಂಟರ್‌ಸ್ಟೆಲ್ಲಾರ್ ಸಿನಿಮಾದ ನಟ ಮ್ಯಾಥ್ಯೂ ಮೆಕ್‌ಕೋನಾಘಿ ಅವರು ವಿಜಯ್ ಸೇತುಪತಿ ಅಭಿನಯಿಸಿದ್ದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ತಮಿಳು ಸಿನಿಮಾವೊಂದು ಪ್ರಥಮ ಬಾರಿಗೆ ಹಾಲಿವುಡ್‌ನಲ್ಲಿ ಅಧಿಕೃತವಾಗಿ ರೀಮೇಕ್ ಆಗುತ್ತಿರುವುದು ಭಾರತೀಯ ಚಿತ್ರರಂಗಕ್ಕೆ ದೊರೆತ ಅತ್ಯಂತ ದೊಡ್ಡ ಗೌರವ ಹಾಗೂ ಹೆಮ್ಮೆಯ ಕ್ಷಣವಾಗಿದೆ. ಈ ಪ್ರಸಿದ್ಧ ಕಥೆಯನ್ನು ಹಾಲಿವುಡ್‌ನಲ್ಲಿ ಯಾರು ನಿರ್ದೇಶಿಸಲಿದ್ದಾರೆ ಮತ್ತು ಇತರ ಪ್ರಮುಖ ಪಾತ್ರಗಳಲ್ಲಿ ಯಾರು ನಟಿಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular