HomeEntertainmentಕಾಮಿಡಿ, ಆಕ್ಷನ್ ಹಾಗೂ ಎಮೋಷನ್ ಸಮ್ಮಿಲನ: ಕುತೂಹಲ ಮೂಡಿಸಿದೆ ಕೋಮಲ್ ನಟನೆಯ 'ರೋಲೆಕ್ಸ್' ಟೀಸರ್

ಕಾಮಿಡಿ, ಆಕ್ಷನ್ ಹಾಗೂ ಎಮೋಷನ್ ಸಮ್ಮಿಲನ: ಕುತೂಹಲ ಮೂಡಿಸಿದೆ ಕೋಮಲ್ ನಟನೆಯ ‘ರೋಲೆಕ್ಸ್’ ಟೀಸರ್

ಸ್ಯಾಂಡಲ್‌ವುಡ್‌ನಲ್ಲಿ ಹಾಸ್ಯ ನಟನಾಗಿ ಹಾಗೂ ನಾಯಕನಾಗಿ ಪ್ರೇಕ್ಷಕರನ್ನು ರಂಜಿಸಿರುವ ಕೋಮಲ್ ಕುಮಾರ್ ಅಭಿನಯದ ನೂತನ ಚಿತ್ರ ‘ರೋಲೆಕ್ಸ್’ ಟೀಸರ್ ಬಿಡುಗಡೆಯಾಗಿದೆ. ಹಾಸ್ಯ, ಕನಸುಗಳು, ಅನಿರೀಕ್ಷಿತ ಪ್ರೇಮಕಥೆ ಮತ್ತು ಭಾವನಾತ್ಮಕ ಕುಟುಂಬದ ಕಥಾಹಂದರ ಹೊಂದಿರುವ ಈ ವೀಡಿಯೋ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.

ಶ್ರೀನಿವಾಸ ಮಂಡ್ಯ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದೆ. ನಾಯಕಿಯಾಗಿ ಸೋನಲ್ ಮೊಂತೆರೋ ಅಭಿನಯಿಸಿದ್ದು, ಪ್ರಮುಖ ಪಾತ್ರಗಳಲ್ಲಿ ವಿನೋದ್ ಪ್ರಭಾಕರ್, ಅಚ್ಯುತ್ ಕುಮಾರ್, ನವೀನ್ ಡಿ ಪಡೀಲ್ ಹಾಗೂ ಅರುಣಾ ಬಾಲರಾಜ್ ಕಾಣಿಸಿಕೊಂಡಿದ್ದಾರೆ. ಮಧು ಫಿಲ್ಮ್ ಸರ್ಕ್ಯೂಟ್ಸ್ ಬ್ಯಾನರ್ ಅಡಿಯಲ್ಲಿ ಮಧು ಮೋಹನ್ ಕೃಷ್ಣ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಚಿತ್ರಕ್ಕೆ ಪ್ರಸಿದ್ಧ ಸಂಗೀತ ನಿರ್ದೇಶಕ ಜಸ್ಸಿ ಗಿಫ್ಟ್ ಈಟು ನೀಡಿದ್ದು, ರಾಕೇಶ್ ಸಿ ತಿಲಕ್ ಛಾಯಾಗ್ರಹಣ ಹಾಗೂ ಅರವಿಂದ್ ರಾಜ್ ಸಂಕಲನ ಜವಾಬ್ದಾರಿ ನಿಭಾಯಿಸಿದ್ದಾರೆ. ತಮಿಳು ಸೆಲ್ವಂ ಅವರ ಕಥೆಗೆ ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ. ಪಕ್ಕಾ ಕೌಟುಂಬಿಕ ಹಾಗೂ ಕಾಮಿಡಿ ಎಂಟರ್‌ಟೇನರ್ ಆಗಿ ತಯಾರಾಗಿರುವ ‘ರೋಲೆಕ್ಸ್’ ಸಿನಿಮಾ ಮುಂಬರುವ ಅಕ್ಟೋಬರ್ ತಿಂಗಳಲ್ಲಿ ವಿಶ್ವದಾದ್ಯಂತ ಬೆಳ್ಳಿಪರದೆಗೆ ಅಪ್ಪಳಿಸಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular