HomeEntertainmentಆರ್‌ಎನ್‌ಬಿ ಶೈಲಿಯಲ್ಲಿ ಹೆಚ್‌ಐ ಹರೀಶ್ ಕಮಾಲ್: ಗಮನ ಸೆಳೆಯುತ್ತಿದೆ 'ಲವ್ ಈಸ್ ಡೇಂಜರಸ್' ಆಲ್ಬಂ

ಆರ್‌ಎನ್‌ಬಿ ಶೈಲಿಯಲ್ಲಿ ಹೆಚ್‌ಐ ಹರೀಶ್ ಕಮಾಲ್: ಗಮನ ಸೆಳೆಯುತ್ತಿದೆ ‘ಲವ್ ಈಸ್ ಡೇಂಜರಸ್’ ಆಲ್ಬಂ

ಸಂಗೀತ ಲೋಕದಲ್ಲಿ ಹೊಸ ಹೊಸ ಪ್ರಯೋಗಗಳಿಗೆ ಯಾವತ್ತೂ ಬರಗಾಲವಿಲ್ಲ. ಪ್ರೀತಿ, ಪ್ರೇಮ, ನೋವು ಹಾಗೂ ಆಕರ್ಷಣೆಯ ವಿಭಿನ್ನ ಭಾವನೆಗಳನ್ನು ಒಳಗೊಂಡ ‘ಲವ್ ಈಸ್ ಡೇಂಜರಸ್’ ಎಂಬ ಹೊಸ ಆಲ್ಬಂ ಹಾಡು ಈಗ ಬಿಡುಗಡೆಯಾಗಿದ್ದು, ಆರ್‌ಎನ್‌ಬಿ ಹಾಗೂ ಹಿಪ್ ಹಾಪ್ ಶೈಲಿಯಲ್ಲಿದೆ.

ಈ ವಿಶೇಷ ಆಲ್ಬಂ ಹಾಡಿನಲ್ಲಿ ಹೆಚ್‌ಐ ಹರೀಶ್ ಮುಖ್ಯ ಭೂಮಿಕೆಯಲ್ಲಿ ನಟಿಸುವುದರ ಜೊತೆಗೆ ತಾವೇ ಗಾಯನ ಮತ್ತು ಸಾಹಿತ್ಯದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಹಾಡಿನ ಸಂಗೀತ ಸಂಯೋಜನೆ ಕೂಡ ಹರೀಶ್ ಅವರದ್ದೇ ಆಗಿದ್ದು, ಕೇಮನ್ ಪ್ರಭಾ ಮತ್ತು ದಿ ಧೀಲೋರ್ಡ್ ಮ್ಯೂಸಿಕ್ ಸ್ಟುಡಿಯೋ ಸಾಥ್ ನೀಡಿದೆ. ನಾಯಕಿಯಾಗಿ ತನುಶ್ರೀ ಬಿಐ ಕಾಣಿಸಿಕೊಂಡಿದ್ದು, ತೇಜಸ್ವಿನಿ ನಾಯರ್ ಮತ್ತು ಅಮೃತಾ ಸಿಜೆ ಹೆಜ್ಜೆ ಹಾಕಿದ್ದಾರೆ.

ಕಿಶೋರ್ ಅವರ ನಿರ್ದೇಶನ ಮತ್ತು ಸಂಕಲನದಲ್ಲಿ ಮೂಡಿಬಂದಿರುವ ಈ ವೀಡಿಯೋ ಹಾಡಿಗೆ ಪಿಕ್ಚರ್ ಬ್ರಹ್ಮ ಛಾಯಾಗ್ರಹಣ ಮಾಡಿದ್ದಾರೆ. ಅಭಿ ಮಡುಗೆರೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದು, ವರ್ಧಿತ ತಾಂತ್ರಿಕ ಸ್ಪರ್ಶ ಈ ಹಾಡಿಗಿದೆ. ಝಾಯಾ, ಅರ್ಥಿಗಮ್ಯ ರೆಸಾರ್ಟ್ ಮತ್ತು ಓಷನ್ ಬ್ರೀಜ್‌ನಂತಹ ಸುಂದರ ತಾಣಗಳಲ್ಲಿ ಈ ಹಾಡಿನ ಚಿತ್ರೀಕರಣ ನಡೆಸಲಾಗಿದೆ. ಪ್ರೀತಿಯಲ್ಲಿನ ವಿವಿಧ ಹಂತಗಳನ್ನು ತೆರೆಯ ಮೇಲೆ ತರಲು ಸಂಪೂರ್ಣ ತಂಡ ಸಾಕಷ್ಟು ಶ್ರಮವಹಿಸಿದ್ದು, ಯುವಜನತೆಯ ಮನಸ್ಸಿಗೆ ಹತ್ತಿರವಾಗುವಂತೆ ನಿರ್ಮಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular