HomeAutoಗ್ರಾಹಕರಿಗೆ ಜಿಯೋ ಬಂಪರ್ ಆಫರ್: ತಿಂಗಳಿಗೆ ₹103ಕ್ಕೆ 336 ದಿನಗಳ ವ್ಯಾಲಿಡಿಟಿ; ಅನ್‌ಲಿಮಿಟೆಡ್ ಕಾಲ್‌, ಡೇಟಾ!

ಗ್ರಾಹಕರಿಗೆ ಜಿಯೋ ಬಂಪರ್ ಆಫರ್: ತಿಂಗಳಿಗೆ ₹103ಕ್ಕೆ 336 ದಿನಗಳ ವ್ಯಾಲಿಡಿಟಿ; ಅನ್‌ಲಿಮಿಟೆಡ್ ಕಾಲ್‌, ಡೇಟಾ!

ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ನೀಡಲು ಸಾಧ್ಯವಾಗದಷ್ಟು ಕಡಿಮೆ ದರದಲ್ಲಿ ಜಿಯೋ ತನ್ನ ವಾರ್ಷಿಕ ರೀಚಾರ್ಜ್‌ ಪ್ಲಾನ್‌ಗಳನ್ನು ನೀಡುತ್ತಿದೆ. ತಿಂಗಳಿಗೆ ಕೇವಲ ₹103 ವೆಚ್ಚವಾಗುವ ಈ ಪ್ರೀಪೇಯ್ಡ್‌ ಪ್ಲಾನ್‌ನಲ್ಲಿ ಅನಿಯಮಿತ ವಾಯ್ಸ್ ಕಾಲ್‌, ದೈನಂದಿನ ಡೇಟಾ ಮತ್ತು SMS ಸೌಲಭ್ಯಗಳು ಲಭ್ಯವಿವೆ. ಆದರೆ ಈ ಪ್ಲಾನ್‌ ಎಲ್ಲ ಗ್ರಾಹಕರಿಗೂ ಲಭ್ಯವಿಲ್ಲ. ಜಿಯೋ 4G ಫೀಚರ್‌ ಫೋನ್‌ ಹೊಂದಿರುವ ಗ್ರಾಹಕರಿಗೆ ಮಾತ್ರ ಇದು ಲಭ್ಯವಿದೆ.

ಈ ಗ್ರಾಹಕರಿಗಾಗಿ ಜಿಯೋ ₹1,234ರ ಪ್ಲಾನ್‌ ನೀಡುತ್ತಿದ್ದು, ಇದರಲ್ಲಿ 336 ದಿನಗಳ ವ್ಯಾಲಿಡಿಟಿ ಸಿಗುತ್ತದೆ. ಅಂದರೆ 28 ದಿನಗಳನ್ನು ಒಂದು ತಿಂಗಳು ಎಂದು ಲೆಕ್ಕ ಹಾಕಿದರೆ ಒಟ್ಟು 12 ತಿಂಗಳ ವ್ಯಾಲಿಡಿಟಿ ಸಿಗುತ್ತದೆ. ಹೀಗಾಗಿ ತಿಂಗಳಿಗೆ ಕೇವಲ ₹103 ವೆಚ್ಚವಾಗುತ್ತದೆ.

ಜಿಯೋ ₹1,234 ಪ್ಲಾನ್‌ನ ವಿವರ

ಜಿಯೋ 4G ಫೀಚರ್‌ ಫೋನ್‌ ಬಳಕೆದಾರರಿಗೆ ₹1,234ರ ಈ ಪ್ಲಾನ್‌ನಲ್ಲಿ 336 ದಿನಗಳ ವ್ಯಾಲಿಡಿಟಿ ಸಿಗುತ್ತದೆ. ಈ ಅವಧಿಯಲ್ಲಿ ಅನಿಯಮಿತ ಲೋಕಲ್‌, STD ಮತ್ತು ರೋಮಿಂಗ್ ವಾಯ್ಸ್ ಕಾಲ್‌ಗಳು ಲಭ್ಯವಿರುತ್ತವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜತೆಗೆ ಪ್ರತಿದಿನ 0.5GB ಡೇಟಾ ಸಿಗುತ್ತದೆ. 336 ದಿನಗಳಲ್ಲಿ ಒಟ್ಟು ಸುಮಾರು 165GB ಡೇಟಾ ಬಳಸಬಹುದು. ಪ್ರತಿದಿನದ 0.5GB ಡೇಟಾ ಮುಗಿದ ಬಳಿಕ ಇಂಟರ್‌ನೆಟ್ ವೇಗ 64 Kbpsಗೆ ಇಳಿಯುತ್ತದೆ.

ಇದರೊಂದಿಗೆ ಪ್ರತಿ 28 ದಿನಗಳಿಗೆ 300 SMS ಸೌಲಭ್ಯವೂ ಲಭ್ಯವಿದೆ. ಜಿಯೋಸಾವನ್‌ ಮತ್ತು ಜಿಯೋ ಟಿವಿ ಸಬ್‌ಸ್ಕ್ರಿಪ್ಶನ್‌ಗಳನ್ನೂ ಈ ಪ್ಲಾನ್‌ನಲ್ಲಿ ನೀಡಲಾಗುತ್ತದೆ. ಡೇಟಾ ಸಾಕಾಗದಿದ್ದರೆ ಪ್ರತ್ಯೇಕ ಡೇಟಾ ವೋಚರ್‌ಗಳ ಮೂಲಕ ಹೆಚ್ಚುವರಿ ಡೇಟಾವನ್ನು ಪಡೆಯಬಹುದು. ಜಿಯೋ 4G ಫೀಚರ್‌ ಫೋನ್‌ಗಳಲ್ಲಿ ಯೂಟ್ಯೂಬ್‌, ಜಿಯೋ ಟಿವಿ, ಜಿಯೋಸ್ಟಾರ್‌ ಸೇರಿದಂತೆ ಕೆಲವು OTT ಆ್ಯಪ್‌ಗಳನ್ನು ಬಳಸಬಹುದಾಗಿದೆ.

₹122 ಡೇಟಾ ಆಡ್‌ಆನ್‌ ಪ್ಲಾನ್‌

ಜಿಯೋ ₹122ರ ಡೇಟಾ ಆಡ್‌ಆನ್‌ ಪ್ಲಾನ್‌ ಕೂಡ ನೀಡುತ್ತಿದೆ. ಇದಕ್ಕೆ 28 ದಿನಗಳ ವ್ಯಾಲಿಡಿಟಿ ಇದ್ದು, ಪ್ರತಿದಿನ 1GB ಡೇಟಾ ಸಿಗುತ್ತದೆ. ದಿನದ ಡೇಟಾ ಮುಗಿದ ಬಳಿಕ ವೇಗ 64 Kbpsಗೆ ಇಳಿಯುತ್ತದೆ. ಈ ಪ್ಲಾನ್‌ ಬಳಸಲು ಸಕ್ರಿಯ ಜಿಯೋ ಪ್ಲಾನ್‌ ಇರಬೇಕು.

₹182 ಪ್ಲಾನ್‌ನಲ್ಲಿ ಪ್ರತಿದಿನ 2GB ಡೇಟಾ

ಹೆಚ್ಚಿನ ಡೇಟಾ ಅಗತ್ಯವಿರುವ ಗ್ರಾಹಕರಿಗೆ ಜಿಯೋ ₹182ರ ಪ್ಲಾನ್‌ ಲಭ್ಯವಿದೆ. ಇದರಲ್ಲಿ 28 ದಿನಗಳ ವ್ಯಾಲಿಡಿಟಿ ಇದ್ದು, ಪ್ರತಿದಿನ 2GB ಡೇಟಾ ಸಿಗುತ್ತದೆ. ಡೇಟಾ ಮಿತಿ ಮುಗಿದ ಬಳಿಕ ವೇಗ 64 Kbpsಗೆ ಇಳಿಯುತ್ತದೆ.ಈ ಪ್ಲಾನ್‌ ಜಿಯೋಫೋನ್‌ ಮಾತ್ರವಲ್ಲದೆ ಪ್ರಿಮಾ ಸೇರಿದಂತೆ ಇತರ ಜಿಯೋ 4G ಫೀಚರ್‌ ಫೋನ್‌ಗಳಿಗೂ ಅನ್ವಯಿಸುತ್ತದೆ.

ಜಿಯೋ 4G ಫೀಚರ್‌ ಫೋನ್‌ ಪ್ಲಾನ್‌ಗಳ ಆರಂಭಿಕ ಬೆಲೆ ₹123. ಈ ಪ್ಲಾನ್‌ನಲ್ಲಿ 28 ದಿನಗಳವರೆಗೆ ಅನಿಯಮಿತ ಲೋಕಲ್‌, STD ಮತ್ತು ರೋಮಿಂಗ್ ವಾಯ್ಸ್ ಕಾಲ್‌ಗಳ ಜೊತೆಗೆ ಪ್ರತಿದಿನ 0.5GB ಡೇಟಾ ಹಾಗೂ 300 SMS ಸೌಲಭ್ಯ ದೊರೆಯುತ್ತದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular