HomeIndiaಗೃಹಸಾಲ ಪಡೆದವರಿಗೆ 'RBI' ಗುಡ್ ನ್ಯೂಸ್ ; ಇನ್ಮುಂದೆ 3 ತಿಂಗಳಲ್ಲೇ ಬಡ್ಡಿ ಇಳಿಕೆಯ ಲಾಭ...

ಗೃಹಸಾಲ ಪಡೆದವರಿಗೆ ‘RBI’ ಗುಡ್ ನ್ಯೂಸ್ ; ಇನ್ಮುಂದೆ 3 ತಿಂಗಳಲ್ಲೇ ಬಡ್ಡಿ ಇಳಿಕೆಯ ಲಾಭ !

ಹೋಮ್ ಲೋನ್ ಪಡೆದಿರುವವರಿಗೆ ಆರ್‌ಬಿಐ ಸಿಹಿ ಸುದ್ದಿ ನೀಡಿದೆ. ಗೃಹ ಸಾಲಗಳ ಬಡ್ಡಿ ದರಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಲು ಆರ್‌ಬಿಐ ಮುಂದಾಗಿದೆ. ಈ ಹೊಸ ನಿಯಮಗಳು 2027ರ ಏಪ್ರಿಲ್ 1ರಿಂದ ಜಾರಿಗೆ ಬರಲಿವೆ.

ಆರ್‌ಬಿಐ ರೆಪೊ ದರವನ್ನು ಕಡಿಮೆ ಮಾಡಿದಾಗ ಅದರ ಪ್ರಯೋಜನವನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ವರ್ಗಾಯಿಸುವಲ್ಲಿ ಸಾಕಷ್ಟು ವಿಳಂಬ ಮಾಡುತ್ತಿವೆ. ಕೆಲವೊಮ್ಮೆ ಬಡ್ಡಿ ದರ ಇಳಿಕೆಯ ಲಾಭ ಗ್ರಾಹಕರಿಗೆ ತಲುಪಲು ಒಂದು ವರ್ಷದವರೆಗೂ ಸಮಯ ತೆಗೆದುಕೊಳ್ಳುತ್ತಿದೆ. ಕೆಲವು ಬ್ಯಾಂಕ್‌ಗಳು ಬಡ್ಡಿ ದರವನ್ನೇ ಪರಿಷ್ಕರಿಸುತ್ತಿಲ್ಲ. ಇದರಿಂದ ಆರ್‌ಬಿಐ ಬಡ್ಡಿ ದರ ಕಡಿಮೆ ಮಾಡಿದರೂ ಸಾಲ ಪಡೆದವರಿಗೆ ತಕ್ಷಣದ ಪ್ರಯೋಜನ ಸಿಗುತ್ತಿಲ್ಲ.

ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡಿರುವ ಆರ್‌ಬಿಐ, ಫ್ಲೋಟಿಂಗ್ ಬಡ್ಡಿ ದರದ ಸಾಲಗಳಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಪ್ರಸ್ತಾಪಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೋಮ್ ಲೋನ್ ಪಡೆದಿದ್ದೀರಾ?

ಹೋಮ್ ಲೋನ್‌ಗಳು ಸಾಮಾನ್ಯವಾಗಿ ಫ್ಲೋಟಿಂಗ್ ಬಡ್ಡಿ ದರದೊಂದಿಗೆ ಸಂಪರ್ಕ ಹೊಂದಿರುತ್ತವೆ. ಆರ್‌ಬಿಐ ಬಡ್ಡಿ ದರ ಕಡಿಮೆ ಮಾಡಿದಾಗ ಬ್ಯಾಂಕ್‌ಗಳೂ ತಮ್ಮ ಫ್ಲೋಟಿಂಗ್ ಬಡ್ಡಿ ದರವನ್ನು ಕಡಿಮೆ ಮಾಡಬೇಕಾಗುತ್ತದೆ. ಆದರೆ ಬ್ಯಾಂಕ್‌ಗಳು ಈ ಪರಿಷ್ಕರಣೆಯನ್ನು ವಿಳಂಬ ಮಾಡುವುದರಿಂದ ಗ್ರಾಹಕರಿಗೆ ನಷ್ಟವಾಗುತ್ತಿದೆ.

ಇದನ್ನು ತಪ್ಪಿಸಲು ಆರ್‌ಬಿಐ ಹೊಸ ನಿಯಮಗಳನ್ನು ಪ್ರಸ್ತಾಪಿಸಿದೆ. ಆರ್‌ಬಿಐ ಬಡ್ಡಿ ದರದಲ್ಲಿ ಬದಲಾವಣೆ ಮಾಡಿದ ಗರಿಷ್ಠ ಮೂರು ತಿಂಗಳೊಳಗೆ ಅದರ ಪರಿಣಾಮವನ್ನು ಫ್ಲೋಟಿಂಗ್ ರೇಟ್ ಸಾಲಗಳ ಮೇಲೆ ಜಾರಿಗೆ ತರಬೇಕಾಗುತ್ತದೆ. ಇದರಿಂದ ಗೃಹ ಸಾಲ ಪಡೆದವರಿಗೆ ಬಡ್ಡಿ ದರ ಇಳಿಕೆಯ ಪ್ರಯೋಜನ ವೇಗವಾಗಿ ಸಿಗಲಿದೆ.

ಸದ್ಯ ಆರ್‌ಬಿಐ ಈ ನಿಯಮಗಳ ಕರಡು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಬ್ಯಾಂಕ್‌ಗಳು ಸೇರಿದಂತೆ ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಪಡೆಯುತ್ತಿದೆ. ಸೆಪ್ಟೆಂಬರ್ 11ರೊಳಗೆ ಅಭಿಪ್ರಾಯಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಬಳಿಕ ಅಗತ್ಯ ಬದಲಾವಣೆಗಳನ್ನು ಮಾಡಿ, 2027ರ ಏಪ್ರಿಲ್‌ನಿಂದ ಹೊಸ ನಿಯಮಗಳನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ.

ಬಡ್ಡಿ ದರ ಹೆಚ್ಚಾದರೂ ಇದೇ ನಿಯಮ

ಆರ್‌ಬಿಐ ಬಡ್ಡಿ ದರವನ್ನು ಹೆಚ್ಚಿಸಿದ ಸಂದರ್ಭದಲ್ಲೂ ಇದೇ ನಿಯಮ ಅನ್ವಯವಾಗಲಿದೆ. ಆದರೆ ಈ ನಿಯಮಗಳು ಫ್ಲೋಟಿಂಗ್ ಬಡ್ಡಿ ದರದ ಸಾಲಗಳಿಗೆ ಮಾತ್ರ ಅನ್ವಯಿಸುತ್ತವೆ.

ವೈಯಕ್ತಿಕ ಸಾಲ, ವಾಹನ ಸಾಲ ಸೇರಿದಂತೆ ಕೆಲವು ಸಾಲಗಳು ಸ್ಥಿರ ಬಡ್ಡಿ ದರದಲ್ಲಿರಬಹುದು. ಅಂತಹ ಸಾಲಗಳಿಗೆ ಈ ಹೊಸ ನಿಯಮಗಳ ನೇರ ಪರಿಣಾಮ ಇರುವುದಿಲ್ಲ.

ಹೋಮ್ ಲೋನ್‌ಗಳು ಹೆಚ್ಚಾಗಿ ಫ್ಲೋಟಿಂಗ್ ಬಡ್ಡಿ ದರಕ್ಕೆ ಸಂಬಂಧಿಸಿರುವುದರಿಂದ, ಈ ಹೊಸ ನಿಯಮಗಳು ಗೃಹ ಸಾಲ ಪಡೆದವರಿಗೆ ಸಾಕಷ್ಟು ಅನುಕೂಲವಾಗುವ ಸಾಧ್ಯತೆಯಿದೆ. ಆದರೆ ಈ ಪ್ರಯೋಜನ ಪಡೆಯಲು 2027ರ ಏಪ್ರಿಲ್‌ವರೆಗೆ ಕಾಯಬೇಕಾಗುತ್ತದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular