HomeHealthGOOD NEWS : ಕ್ಯಾನ್ಸರ್ ರೋಗಿಗಳಿಗೆ ಗುಡ್ ನ್ಯೂಸ್ : ಕ್ಯಾನ್ಸರ್ ಕೋಶಗಳನ್ನೇ ನಾಶ ಮಾಡುವ...

GOOD NEWS : ಕ್ಯಾನ್ಸರ್ ರೋಗಿಗಳಿಗೆ ಗುಡ್ ನ್ಯೂಸ್ : ಕ್ಯಾನ್ಸರ್ ಕೋಶಗಳನ್ನೇ ನಾಶ ಮಾಡುವ ಹೊಸ ಔಷಧ ಅಭಿವೃದ್ದಿ

ನವದೆಹಲಿ: ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ಆಶಾಕಿರಣ ಮೂಡಿದ್ದು, ಭಾರತೀಯ ವಿಜ್ಞಾನಿಗಳು ಕ್ಯಾನ್ಸರ್ ಕೋಶಗಳನ್ನು ಮಾತ್ರ ಗುರಿಯಾಗಿಸಿಕೊಂಡು ನಾಶಪಡಿಸುವ ‘ಆರ್‌ಕೆ-251’ ಎಂಬ ಸ್ಮಾರ್ಟ್ ಔಷಧವನ್ನು ಅಭಿವೃದ್ಧಿಪಡಿಸಿದ್ದಾರೆ. ಪ್ರಾಥಮಿಕ ಪರೀಕ್ಷೆಗಳಲ್ಲಿ ಆರೋಗ್ಯಕರ ಕೋಶಗಳಿಗೆ ಹಾನಿ ಕಡಿಮೆ ಹಾಗೂ ಅಡ್ಡಪರಿಣಾಮಗಳು ಗಣನೀಯವಾಗಿ ಕಡಿಮೆಯಾಗಿರುವುದು ಕಂಡುಬಂದಿದ್ದು, ಮುಂದಿನ ಹಂತದಲ್ಲಿ ಮಾನವರ ಮೇಲಿನ ಕ್ಲಿನಿಕಲ್ ಟ್ರಯಲ್‌ಗಳ ಬಳಿಕ ಔಷಧದ ಪರಿಣಾಮಕಾರಿತ್ವ ಸ್ಪಷ್ಟವಾಗಲಿದೆ.

ಭಾರತೀಯ ವಿಜ್ಞಾನಿಗಳು ಕ್ಯಾನ್ಸರ್ ಕೋಶಗಳನ್ನು ಮಾತ್ರ ಗುರಿಯಾಗಿಸಿಕೊಂಡು ನಾಶಪಡಿಸುವ ‘ಆರ್ಕೆ-251’ ಎಂಬ ಸ್ಮಾರ್ಟ್ ಔಷಧವನ್ನು ಅಭಿವೃದ್ಧಿಪಡಿಸಿದ್ದಾರೆ. ಪ್ರಾಥಮಿಕ ಪರೀಕ್ಷೆಗಳಲ್ಲಿ ಆರೋಗ್ಯಕರ ಕೋಶಗಳಿಗೆ ಹಾನಿ ಕಡಿಮೆ ಹಾಗೂ ಅಡ್ಡಪರಿಣಾಮಗಳು ಗಣನೀಯವಾಗಿ ಕಡಿಮೆಯಾಗಿರುವುದು ಕಂಡುಬಂದಿದ್ದು, ಮುಂದಿನ ಹಂತದಲ್ಲಿ ಮಾನವರ ಮೇಲಿನ ಕ್ಲಿನಿಕಲ್ ಟ್ರಯಲ್ಗಳ ಬಳಿಕ ಔಷಧದ ಪರಿಣಾಮಕಾರಿತ್ವ ಸ್ಪಷ್ಟವಾಗಲಿದೆ.

ಸಾಮಾನ್ಯ ಕೀಮೋಥೆರಪಿಯಲ್ಲಿ ಕ್ಯಾನ್ಸರ್ ಕೋಶಗಳ ಜೊತೆಗೆ ಆರೋಗ್ಯಕರ ಕೋಶಗಳಿಗೂ ಹಾನಿಯಾಗುತ್ತದೆ. ಇದರಿಂದ ರೋಗಿಗಳಿಗೆ ಹಲವು ಅಡ್ಡಪರಿಣಾಮಗಳು ಎದುರಾಗುತ್ತವೆ. ಆದರೆ ಈ ಹೊಸ ಔಷಧವು ಕ್ಯಾನ್ಸರ್ ಕೋಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ರಿಯಾಕ್ಟಿವ್ ಆಕ್ಸಿಜನ್ ಸ್ಪೀಶೀಸ್ (ROS) ಅನ್ನು ಗುರುತಿಸಿ, ಅಲ್ಲಿಯೇ ಸಕ್ರಿಯಗೊಳ್ಳುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಂತರ ಈ ಔಷಧವು NBDHE-X ಎಂಬ ಕ್ಯಾನ್ಸರ್ ವಿರೋಧಿ ಸಂಯುಕ್ತವನ್ನು ಬಿಡುಗಡೆ ಮಾಡುತ್ತದೆ. ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆ ಮತ್ತು ಬದುಕುಳಿಯಲು ನೆರವಾಗುವ ಪ್ರೋಟೀನ್ಗಳ ಕಾರ್ಯವನ್ನು ತಡೆಯುವ ಮೂಲಕ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸಲು ಸಹಾಯ ಮಾಡುತ್ತದೆ.

ವಿಶೇಷವಾಗಿ ಆಕ್ರಮಣಕಾರಿ ಸ್ವರೂಪದ ಟ್ರಿಪಲ್-ನೆಗೆಟಿವ್ ಸ್ತನ ಕ್ಯಾನ್ಸರ್ ಕೋಶಗಳ ಮೇಲೆ ನಡೆಸಲಾದ ಪ್ರಿ-ಕ್ಲಿನಿಕಲ್ ಪರೀಕ್ಷೆಗಳಲ್ಲಿ ಈ ಔಷಧ ಉತ್ತಮ ಫಲಿತಾಂಶಗಳನ್ನು ನೀಡಿದೆ. ಆರೋಗ್ಯಕರ ಕೋಶಗಳ ಮೇಲೆ ಇದರ ಪರಿಣಾಮ ಬಹಳ ಕಡಿಮೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಅಲ್ಲದೆ, ಅಡ್ಡಪರಿಣಾಮಗಳೂ ಗಣನೀಯವಾಗಿ ಕಡಿಮೆಯಾಗಿರುವುದು ಪರೀಕ್ಷೆಗಳಲ್ಲಿ ಕಂಡುಬಂದಿದೆ.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆಯಾದ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡಿ ಇನ್ ಸೈನ್ಸ್ ಅಂಡ್ ಟೆಕ್ನಾಲಜಿ (IASST)ನ ಡಾ. ಅಸಿಸ್ ಬಾಲಾ ಮತ್ತು ಐಐಟಿ ಗುವಾಹಟಿಯ ಡಾ. ಕೆ.ಪಿ. ಭಬಕ್ ನೇತೃತ್ವದ ತಂಡ ಈ ಸಂಶೋಧನೆ ನಡೆಸಿದೆ.

ಆದರೆ, ಆರ್ಕೆ-251 ಔಷಧ ಇನ್ನೂ ಮಾನವರ ಮೇಲೆ ಪ್ರಯೋಗಿಸುವ ಹಂತಕ್ಕೆ ತಲುಪಿಲ್ಲ. ಮುಂದಿನ ಹಂತದಲ್ಲಿ ಹೆಚ್ಚಿನ ಅಧ್ಯಯನಗಳು ಹಾಗೂ ಕ್ಲಿನಿಕಲ್ ಟ್ರಯಲ್ಗಳು ನಡೆಯಬೇಕಿದೆ. ಅವು ಪೂರ್ಣಗೊಂಡ ಬಳಿಕವಷ್ಟೇ ಈ ಔಷಧದ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular