ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಬ್ಲಾಕ್‌ಬಸ್ಟರ್ ಜಯ ಬಾರಿಸಿದ್ದು ಎಲ್ಲರಿಗೂ ತಿಳಿದಿದೆ. ಆ ಚಿತ್ರದಲ್ಲಿದ್ದ ತಮನ್ನಾ ಭಾಟಿಯಾ ಅವರ ‘ಕಾವಾಲಾ’ ಸಾಂಗ್ ದೇಶಾದ್ಯಂತ ದೊಡ್ಡ ಮಟ್ಟದ ಹೈಪ್ ಸೃಷ್ಟಿಸಿತ್ತು. ಇದೀಗ ಅದರ ಮುಂದುವರಿದ ಭಾಗವಾಗಿ ಮೂಡಿಬರುತ್ತಿರುವ ‘ಜೈಲರ್ 2’ ಸಿನಿಮಾದಲ್ಲೂ ಅಂತಹದ್ದೇ ಒಂದು ಧಮಾಕ ಸಾಂಗ್ ಸಿದ್ಧವಾಗಿದ್ದು, ಅದಕ್ಕೆ ‘ಅಲಾ ಬೊಲೇಲೊ’ ಎಂದು ಹೆಸರಿಡಲಾಗಿದೆ.
ಈ ವಿಶೇಷ ಹಾಡಿನ ಪ್ರೊಮೊ ತುಣುಕು ಇತ್ತೀಚೆಗಷ್ಟೇ ಹೊರಬಿದ್ದಿದ್ದು, ನಟಿ ಪೂರ್ಣಾ ತಮ್ಮ ಕುಣಿತದಿಂದ ಪ್ರೇಕ್ಷಕರನ್ನು ಅಚ್ಚರಿಗೊಳಿಸಿದ್ದಾರೆ. ಇತ್ತೀಚೆಗೆ ಮಹೇಶ್ ಬಾಬು ಜೊತೆಗಿನ ‘ಕುರ್ಚಿ ಮಡತಪೆಟ್ಟಿ’ ಹಾಡಿನಲ್ಲಿ ಧೂಳೆಬ್ಬಿಸಿದ್ದ ಪೂರ್ಣಾ, ಇದೀಗ ಮತ್ತೊಬ್ಬ ಸೂಪರ್‌ಸ್ಟಾರ್ ಜೊತೆ ಹೆಜ್ಜೆ ಹಾಕಲು ಸಜ್ಜಾಗಿದ್ದಾರೆ. ಈ ಮಾಸ್ ಸಾಂಗ್ ಕ್ಲಿಕ್ ಆದಲ್ಲಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚುವುದರ ಜೊತೆಗೆ ಪೂರ್ಣಾ ಅವರ ವೃತ್ತಿಜೀವನಕ್ಕೂ ದೊಡ್ಡ ಮಟ್ಟದ ಮೈಲೇಜ್ ಸಿಗಲಿದೆ.
“>

