ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆಗಳನ್ನು ಭರ್ತಿಗೊಳಿಸುವ ಬಗ್ಗೆ ಮಾಹಿತಿ ಇಲ್ಲಿದೆ.
ಸರ್ಕಾರದ ಅಧಿಸೂಚನೆ ಸಂ. ಇಪಿ 80 ಡಿಪಿಐ 2026 ದಿನಾಂಕ: 10/08/2026ರಂತೆ ಶಾಲಾ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕ, ಕೆ.ಜಿ. ರಸ್ತೆ, ಬೆಂಗಳೂರು -ನ್ನು ಪರೀಕ್ಷಾ ಪ್ರಾಧಿಕಾರವನ್ನಾಗಿ ನೇಮಿಸಿದ್ದು, ಶಾಲಾ ಶಿಕ್ಷಣ ಇಲಾಖೆಯಲ್ಲಿ ಖಾಲಿಯಿರುವ ಪ್ರಾಥಮಿಕ ಶಾಲಾ ಶಿಕ್ಷಕರು, ದೈ.ಶಿ.ಶಿ. ಗ್ರೇಡ್ 2. ಜಿಪಿಟಿ ಶಿಕ್ಷಕರು, ಗಣಕಯಂತ್ರ ವಿಜ್ಞಾನ ಶಿಕ್ಷಕರು, ಪ್ರೌಢ ಶಾಲಾ ಸಹಶಿಕ್ಷಕರು, ಪ್ರೌಢ ಶಾಲಾ ದೈ.ಶಿ.ಶಿ ಗ್ರೇಡ್ : ವೃಂದಗಳ 15000 ಹುದ್ದೆಗಳನ್ನು ಭರ್ತಿಗೊಳಿಸಲು ಆದೇಶಿಸಲಾಗಿದೆ. ಅದರಂತೆ. ಆಯ್ಕೆ ಪ್ರಾಧಿಕಾರಿಗಳಿಂದ ಈಗಾಗಲೇ ಅಧಿಸೂಚನೆಗಳನ್ನು ಹೊರಡಿಸಲಾಗಿದೆ.
ಈ ಅಧಿಸೂಚನೆಗಳನುಸಾರ ಪರೀಕ್ಷಾ ಪ್ರಾಧಿಕಾರಿಯಾಗಿರುವ ಕೇಂದ್ರೀಕೃತ ದಾಖಲಾತಿ ಘಟಕದಿಂದ ಅಭ್ಯರ್ಥಿಗಳ ಮಾಹಿತಿ ಮತ್ತು ನೆರವಿಗಾಗಿ ಈ ಕೆಳಗಿನಂತೆ ಸೂಚನೆಗಳು ಮತ್ತು ನಿರ್ದೇಶನಗಳನ್ನು ನೀಡಲಾಗಿದೆ. ಇವುಗಳನ್ನು ಸರಿಯಾಗಿ ಅರ್ಥೈಸಿಕೊಂಡು ಅನುಸರಿಸಲು ಕೋರಲಾಗಿದೆ.
1. ಆಯ್ಕೆ ಪ್ರಾಧಿಕಾರಿಗಳಿಂದ ಅಧಿಸೂಚನೆಗಳು: ಆಯಾಯ ಜಿಲ್ಲಾ ಮತ್ತು ವಿಭಾಗ ಮಟ್ಟದ ಆಯ್ಕೆ ಪ್ರಾಧಿಕಾರಿಗಳು ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಿರುವರು. ಅವುಗಳು ಪೂರ್ಣ ವಿವರಗಳನ್ನು ಒಳಗೊಂಡಿರುತ್ತವೆ. ಅವುಗಳನ್ನು ಓದಿ ಅರ್ಥೈಸಿಕೊಳ್ಳುವುದು. ಅವುಗಳಲ್ಲಿ ನೀಡಿರುವ ಎಲ್ಲಾ ಸೂಚನೆಗಳು ಮತ್ತು ಮಾಹಿತಿಯನ್ನು ಅನುಸರಿಸುವುದು.
1) ಅಭ್ಯರ್ಥಿಯು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಬಹಳ ಮಹತ್ತರವಾದ ಕಾರ್ಯವಾಗಿದೆ. ಇದನ್ನು ಅಭ್ಯರ್ಥಿಯು ಸ್ವತಃ ಉಪಸ್ಥಿತರಿದ್ದು, ಅತ್ಯಂತ ಜಾಗರೂಕತೆಯಿಂದ ಮಾಡಬೇಕು. ಅರ್ಜಿ ಸಲ್ಲಿಸುವಾಗ ಎಲ್ಲಾ ದಾಖಲೆಗಳನ್ನು ಸಿದ್ಧವಿರಿಸಿಕೊಂಡು ನಂತರ ಅಂಕಣಗಳನ್ನು ಒಂದೊಂದಾಗಿ ತುಂಬಬೇಕು. ಅರ್ಜಿ ಸಲ್ಲಿಸಲು ಆರಂಭಿಸುವ ಮುನ್ನ ಆಯಾಯ ಹುದ್ದೆಗೆ ಸಂಬಂಧಿಸಿದಂತೆ ಆಯಾಯ ಆಯ್ಕೆ ಪ್ರಾಧಿಕಾರಿಗಳು ಹೊರಡಿಸಿರುವ ಅಧಿಸೂಚನೆಗಳನ್ನು ಅತ್ಯಂತ ಜಾಗರೂಕರಾಗಿ ಓದಿ ಮನನ ಮಾಡಿಕೊಂಡು ಸೂಕ್ತ ನಿರ್ಧಾರಗಳನ್ನು ಕೈಗೊಂಡು ನಂತರದಲ್ಲಿ ಅರ್ಜಿ ಸಲ್ಲಿಸಬೇಕು. ಯಾವುದೇ ಗಡಿಬಿಡಿ, ಗೊಂದಲ, ಸಂದೇಹಗಳನ್ನು ಹೊಂದಿ ಈ ಕಾರ್ಯವನ್ನು ಮಾಡಬಾರದಾಗಿ ಸೂಚಿಸಿದೆ.
2) ಒಬ್ಬ ಅಭ್ಯರ್ಥಿಯು ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಲು ಅವಕಾಶವನ್ನು ನೀಡಲಾಗಿದ್ದು, ಈ ಒಂದು PST, PET Gr.1, CST, GPT, AM 2 PET Gr.2 ಅವಕಾಶವನ್ನು ಕಲ್ಪಿಸಲಾಗಿದೆ. ಒಬ್ಬ ಅಭ್ಯರ್ಥಿಯು ಈ ವಿಧ ವಿಧವಾದ ಕೇಡರುಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಹೊಂದಿದ್ದಲ್ಲಿ, ಬೇರೆ ಬೇರೆ ಜಿಲ್ಲೆಗಳ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದ್ದಲ್ಲಿಯೂ, ಒಂದೇ ಅರ್ಜಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
3) ಸಾಮಾನ್ಯವಾಗಿ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಹೆಸರಿನ ಕಾಗುಣಿತ ದೋಷಗಳನ್ನು ಸಾಕಷ್ಟು ಮಾಡುತ್ತಿರುವುದು ಕಂಡು ಬಂದಿದೆ. ಅದರೊಂದಿಗೆ, ಜಾತಿ, ವರ್ಗ, ಪ್ರವರ್ಗ, ಲಿಂಗ, RD ನಂಬರು, ಮೀಸಲಾತಿ ವಿವರಗಳು ಇತ್ಯಾದಿಗಳನ್ನು ತುಂಬುವಾಗ ಗಮನಿಸಲಾಗಿದೆ.ಈ ಬಗ್ಗೆ ಜಾಗ್ರತೆವಹಿಸುವುದು. ತಪ್ಪು ಮಾಡುತ್ತಿರುವುದನ್ನೂ
4) ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮೊದಲು ಇಲಾಖಾ ವೆಬ್ ಸೈಟ್ https://schooleducation.karnataka.gov.in/cacell/en Online Application for Recruitment of Teachers 2026″ ಎಂಬ ಲಿಂಕ್ ಅನ್ನು Click ಮಾಡಬೇಕು. ನಂತರ ‘New User ಎಂಬ ಬಟನ್ ಒತ್ತಿ ನೊಂದಣಿ (Registration) ಮಾಡಿಕೊಳ್ಳಬೇಕು. ತಾವು ಹೀಗೆ ತಯಾರಿಸಿಕೊಂಡ “Login credentials ಗಳನ್ನು ತಪ್ಪದೇ ಬರೆದಿಟ್ಟುಕೊಳ್ಳುವುದು ಹಾಗೂ ಇದನ್ನು ಕಳೆದುಕೊಂಡಲ್ಲಿ ಈ ಕಛೇರಿಯಿಂದ ಯಾವುದೇ ವೈಯಕ್ತಿಕ ನೆರವನ್ನು ನೀಡಲಾಗುವುದಿಲ್ಲ. ಆದರೆ ‘Forgot Password’ ಪ್ರಕ್ರಿಯೆಯಿಂದ ಪಡೆದುಕೊಳ್ಳುವುದು.
5) Login ನೋಂದಣಿ ಸೃಷ್ಟಿಸಿದ ನಂತರ ಅಭ್ಯರ್ಥಿಗಳು USER Name, Password ನಮೂದಿಸಿ Login ಆಗಬೇಕು. ಅಭ್ಯರ್ಥಿಗಳು ಮುಂದಿನ ಹಂತಗಳಲ್ಲಿ ವೈಯಕ್ತಿಕ ವಿವರ, ಮೀಸಲಾತಿ ವಿವರ, ವೃತ್ತಿಪರ ಶಿಕ್ಷಣ ವಿದ್ಯಾರ್ಹತೆ ವಿವರ, ಶಿಕ್ಷಕರ ಅರ್ಹತಾ ಪರೀಕ್ಷೆ ವಿವರ ಅರ್ಜಿ ಸಲ್ಲಿಸುತ್ತಿರುವ ಹುದ್ದೆಗಳ ವಿವರಗಳನ್ನು ತುಂಬಬೇಕಾಗುತ್ತದೆ. ಈ ಕಾರ್ಯವನ್ನು ಅತ್ಯಂತ ಜಾಗರೂಕತೆಯಿಂದ ಮಾಡುವುದು.ಅಭ್ಯರ್ಥಿಗಳ ದಾಖಲೆಗಳ ನಿಖರತೆ ಮತ್ತು ನೈಜತೆಗಾಗಿ ಇತರೆ ಇಲಾಖೆಯ ಸಹಭಾಗಿತ್ವದಲ್ಲಿ ದಾಖಲೆಗಳ ಮತ್ತು ಅಂಕಿಅಂಶಗಳ ಸಹಜ ಸ್ಪುರಣಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಆದರೂ ಅಭ್ಯರ್ಥಿಗಳು ಅತ್ಯಂತ ಜಾಗರೂಕತೆಯಿಂದ ಈ ಕಾರ್ಯವನ್ನು ಮಾಡುವುದು.
6) ಕೆಲವು ವಿಶ್ವವಿದ್ಯಾಲಯಗಳ ಅಂಕಪಟ್ಟಿಗಳಲ್ಲಿ ಅಂಕಗಳಿಗೆ ಬದಲಾಗಿ ಗ್ರೇಡ್ ನಮೂದಿಸಲಾಗಿದ್ದು, ಅಂತಹ ಸಂದರ್ಭದಲ್ಲಿ ಸಂಬಂಧಪಟ್ಟ ವಿಶ್ವವಿದ್ಯಾಲಯದ ನಿಯಮಾನುಸಾರ ಗ್ರೇಡ್ ನ್ನು ಅಂಕಗಳಿಗೆ ಪರಿವರ್ತಿಸಿ ನಿಗದಿತ ಅಂಕಣಗಳಲ್ಲಿ ಅಂಕಗಳನ್ನು ಭರ್ತಿ ಮಾಡುವುದು. ಸಂಬಂಧಿತ ಬೋರ್ಡ್/ವಿಶ್ವವಿದ್ಯಾನಿಲಯಗಳು ಗ್ರೇಡ್‌ನಿಂದ ಅಂಕಗಳಿಗೆ ಅಳವಡಿಸಲಾಗುವ ಅಂಕ ಪರಿವರ್ತನಾ ಪಟ್ಟಿಯನ್ನು ಆಯಾಯ ಬೋರ್ಡ್/ವಿಶ್ವವಿದ್ಯಾನಿಲಯಗಳು ಪ್ರಕಟಿಸಿವೆ.
7) ಕೆಲವು ವಿಶ್ವವಿದ್ಯಾಲಯಗಳಲ್ಲಿ ಕೆಲವು ವಿಷಯಗಳನ್ನು (ಉದಾ: Constitution of India. Computer Fundamental ) (Subsidiary Subject) ಅಧ್ಯಯನ ಮಾಡಬೇಕಾಗಿರುತ್ತದೆ. ಈ ವಿಷಯಗಳ ಅಂಕಗಳನ್ನು ವಿಶ್ವವಿದ್ಯಾಲಯವು ಒಟ್ಟು ಅಂಕಗಳಿಗೆ ಪರಿಗಣಿಸಿದ್ದಲ್ಲಿ, (ಪರಿಗಣಿಸಿರುವ ಬಗ್ಗೆ ಅಂಕಪಟ್ಟಿಯ Footnote ನಲ್ಲಿ ನಮೂದಿಸಿದ್ದಲ್ಲಿ ಮಾತ್ರ) ಆ ಅಂಕಗಳನ್ನು ಸೇರಿಸಿ ಆನ್‌ಲೈನ್ ಅರ್ಜಿಯಲ್ಲಿ ಭರ್ತಿ ಮಾಡುವುದು. ಪದವಿಯ/ಬಿ.ಇಡಿ ಯ ಎಲ್ಲಾ ವರ್ಷಗಳ/ ಸೆಮಿಸ್ಟರ್‌ಗಳ ಅಂಕಪಟ್ಟಿ ಗಳಲ್ಲಿ ನಮೂದಿಸಲಾದ ಗರಿಷ್ಠ ಅಂಕಗಳು (Maximum Marks) ಹಾಗೂ ಪಡೆದ ಅಂಕಗಳನ್ನು (Obtained Marks) ಪರಿಗಣಿಸಲಾಗುವುದು. ಆದ್ದರಿಂದ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ಭರ್ತಿ ಮಾಡುವಾಗ ಹುದ್ದೆಗೆ ಪದವಿ/ ಬಿ.ಇಡಿ ಇನ್ನಿತರೆ ನಿಗದಿತ ಶೈಕ್ಷಣಿಕ ವಿದ್ಯಾರ್ಹತೆಯ ಅಂಕಪಟ್ಟಿಗಳಲ್ಲಿರುವ ಸೂಚನೆಗಳನ್ನು ಪರಿಗಣಿಸಿ ಗರಿಷ್ಠ/ಪಡೆದ ಅಂಕಗಳನ್ನು ಮತ್ತು ಶೇಕಡಾವಾರು ಅಂಕಗಳನ್ನು ಲೆಕ್ಕಾಚಾರ ಮಾಡಿ ಆನ್‌ಲೈನ್ ಅರ್ಜಿಯಲ್ಲಿ ನಮೂದಿಸಬೇಕು. ಇದೇ ಕ್ರಮವನ್ನು ಕೊರೋನಾ ವ್ಯಾಧಿಯ ಅವಧಿಯಲ್ಲಿ ಅನುಸರಿಸಿದ ನೀತಿಗೂ ಅನುಸರಿಸುವುದು.
8) ಅಭ್ಯರ್ಥಿಗಳು ತಮ್ಮ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ (ಗರಿಷ್ಠ ಅಳತೆ: 50KB) ಮತ್ತು ಸಹಿಯನ್ನು (ಗರಿಷ್ಠ ಅಳತ: 50KB) ಸ್ಕ್ಯಾನ್ ಮಾಡಿ ಅರ್ಜಿಯೊಂದಿಗೆ ಅಪ್ ಲೋಡ್ ಮಾಡುವುದು ಕಡ್ಡಾಯವಾಗಿದೆ.
9) ಅಧಿಸೂಚನೆಯಲ್ಲಿ ನಿಗದಿಪಡಿಸಿರುವಂತೆ ನಿಗದಿತ ಶುಲ್ಕವನ್ನು ಅರ್ಜಿಯೊಂದಿಗೆ ಪಾವತಿಸುವುದು ಕಡ್ಡಾಯವಾಗಿದೆ. ಈ ಬಗ್ಗೆ ಜಾಗರೂಕತೆಯಿಂದ ವ್ಯವಸ್ಥೆ ಮಾಡಿಕೊಳ್ಳುವುದು.

