HomeIndiaBREAKING: ರಾಷ್ಟ್ರೀಯ ಬಿಜೆಪಿಗೆ 13 ಉಪಾಧ್ಯಕ್ಷರ ಘೋಷಣೆ: ಕರ್ನಾಟಕದ ಪ್ರೊ.ನಾಗರಾಜ್ ನೇಮಕ

BREAKING: ರಾಷ್ಟ್ರೀಯ ಬಿಜೆಪಿಗೆ 13 ಉಪಾಧ್ಯಕ್ಷರ ಘೋಷಣೆ: ಕರ್ನಾಟಕದ ಪ್ರೊ.ನಾಗರಾಜ್ ನೇಮಕ

ನವದೆಹಲಿ: ರಾಷ್ಟ್ರೀಯ ಬಿಜೆಪಿಯಲ್ಲಿ ಕೆಲ ಮಹತ್ವದ ಬದಲಾವಣೆ ಮಾಡಲಾಗಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ 13 ಉಪಾಧ್ಯಕ್ಷರ ಘೋಷಣೆ ಮಾಡಿದ್ದಾರೆ. ಆವರಲ್ಲಿ ಕರ್ನಾಟಕದ ಒಬ್ಬರಿಗೆ ಸ್ಥಾನ ನೀಡಲಾಗಿದೆ.

ಬಿಜೆಪಿ ರಾಷ್ಟ್ರೀಯ ಘಟಕವನ್ನು ಪುನಾರಚನೆ ಮಾಡಲಾಗಿದೆ. ಪ್ರೊ.ಎಂ.ನಾಗರಾಜ್ ಅವರನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ವಿನೋದ್ ತಾವಡೆ ಅವರನ್ನು ಮುಂದುವರಿಸಲಾಗಿದೆ. ಸ್ಮೃತಿ ಇರಾನಿ ಅವರನ್ನು ಇನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಇನ್ನು ಗುಜರಾತ್ ಮೂಲದ ಡಾ.ಹೇಮಾಂಗ್ ಜೋಶಿ ಅವರನ್ನು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ರಾಜಸ್ಥಾನದ ವಸುಂದರಾ ರಾಜೆ, ರಾಮ್ ಮಾಧವ್, ಆಂಧ್ರಪ್ರದೇಶದ ಡಿ.ಪುರಂದರೇಶ್ವರಿ, ಮನ್ ಪ್ರೀತ್ ಸಿಂಗ್ ಸೇರಿ ಹಲವರಿಗೆ ಸ್ಥಾನ ನೀಡಲಾಗಿದೆ. ಭಾರತಿ ಪ್ರವೀಣ್ ಪವಾರ್-ಮಹಾರಾಷ್ಟ್ರ, ಸರ್ದಾರ್ ಮನ್ ಪ್ರೀತ್ ಸಿಂಗ್ ಬಾದಲ್-ಪಂಜಾಬ್, ಲಾಲ್ ಸಿಂಗ್ ಆರ್ಯಾ-ಮಧ್ಯಪ್ರದೇಶ, ಎಸ್.ನಾಗರಾಜ್-ಕರ್ನಾಟಕ, ತಾರಿಕ್ ಮನ್ಸೂರ್-ಉತ್ತರ ಪ್ರದೇಶ, ಮಧುಛಂದಾ ಕರ್-ಪಶ್ಚಿಮ ಬಂಗಾಳ ಸೇರಿದಂತೆ ರಾಷ್ಟ್ರೀಯ ಬಿಜೆಪಿಗೆ ಒಟ್ಟು 13 ಉಪಾಧ್ಯಕ್ಷ ಘೋಷಣೆ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಜವಾಬ್ದಾರಿಯನ್ನು ಬಿ. ಎಲ್. ಸಂತೋಷ್ ಅವರಿಗೆ ವಹಿಸಲಾಗಿದ್ದು ಅವರು ಅದೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ರಾಷ್ಟ್ರೀಯ ಸಹ ಪ್ರಧಾನ ಕಾರ್ಯದರ್ಶಿಗಳಾಗಿಶಿವಪ್ರಕಾಶ್ ಹಾಗೂ ಸೌದಾನ್ ಸಿಂಗ್ ಕಾರ್ಯನಿರ್ವಹಿಸಲಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular