HomeKarnatakaBREAKING: ರೇಣುಕಾಸ್ವಾಮಿ ಹತ್ಯೆ ಪ್ರಕರಣ: ನಟ ದರ್ಶನ್ ಕೋರ್ಟ್ ಗೆ ಖುದ್ದು ಹಾಜರಿಗೆ ಕೋರಿದ್ದ ಅರ್ಜಿ...

BREAKING: ರೇಣುಕಾಸ್ವಾಮಿ ಹತ್ಯೆ ಪ್ರಕರಣ: ನಟ ದರ್ಶನ್ ಕೋರ್ಟ್ ಗೆ ಖುದ್ದು ಹಾಜರಿಗೆ ಕೋರಿದ್ದ ಅರ್ಜಿ ವಜಾ

ಬೆಂಗಳೂರು: ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ದರ್ಶನ್ ಖುದ್ದು ಹಾಜರಾತಿಗೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರು ನ್ಯಾಯಾಲಯ ವಜಾಗೊಳಿಸಿದೆ.

ವಿಚಾರಣೆಗೆ ಕೋರ್ಟ್ ಗೆ ಖುದ್ದು ಹಾಜರಾಗುವುದಾಗಿ ಕೋರಿ ಆರೋಪಿ ನಟ ದರ್ಶನ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್, ದರ್ಶನ್ ಅರ್ಜಿ ವಜಾಗೊಳಿಸಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳ ಹಾಜರಾತಿಗೆ ಅವಕಾಶ ನೀಡಿದೆ.

ಎಲ್ಲಾ ಆರ‍ೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗುವಂತೆ ಸೂಚಿಸಿದೆ. ಅಲ್ಲದೇ ನ್ಯಾಯಾಲಯ ಕೆಲ ಮಹತ್ವದ ಸೂಚನೆ ನೀಡಿದೆ. ಆರೋಪಿಗೆ ಕೋರ್ಟ್ ವಿಚಾರಣೆಗೆ ಸಂಬಂಧಿಸಿದಂತೆ ವಕೀಲರೊಂದಿಗೆ ಮಾತನಾಡಲು ಖಾಸಗಿತನದ ವ್ಯವಸ್ಥೆಗೆ ಸೂಚಿಸಿದೆ. ವಕೀಲರೊಂದಿಗೆ ಸಂಪೂರ್ಣ ಸಂವಹನಕ್ಕೆ ಅವಕಾಶ ನೀಡಿದೆ. ನಿಯಮ 8.3ರ ಅಡಿಯಲ್ಲಿ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಕೋರ್ಟ್ ಸೂಚನೆ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular