HomeBusinessಡಾಲರ್ ಕುಸಿತದ ಬೆನ್ನಲ್ಲೇ ಚಿನ್ನದ ಬೆಲೆ ಏರಿಕೆ: ಬೆಳ್ಳಿ ದರ ಸ್ಥಿರ

ಡಾಲರ್ ಕುಸಿತದ ಬೆನ್ನಲ್ಲೇ ಚಿನ್ನದ ಬೆಲೆ ಏರಿಕೆ: ಬೆಳ್ಳಿ ದರ ಸ್ಥಿರ

ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳ ನಡುವೆ ಚಿನ್ನದ ಬೆಲೆ ಮತ್ತೆ ಏರಿಕೆಯ ಹಾದಿ ಹಿಡಿದಿದೆ. ಡಾಲರ್ ಮೌಲ್ಯ ಕೊಂಚ ತಗ್ಗಿದ್ದು ಮತ್ತು ಅಂತಾರಾಷ್ಟ್ರೀಯ ಹಂತದಲ್ಲಿ ಅನಿಶ್ಚಿತತೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ಸತತ ಮೂರನೇ ದಿನವೂ ಬಂಗಾರದ ದರ ಹೆಚ್ಚಾಗಿದೆ.

ಕಳೆದ 10 ದಿನಗಳಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ₹7,000ಕ್ಕೂ ಹೆಚ್ಚು ಏರಿಕೆ ಕಂಡಿದ್ದು, ಇಂದು (ಆಗಸ್ಟ್ 17, ಸೋಮವಾರ) ಶುದ್ಧ ಚಿನ್ನದ (24 ಕ್ಯಾರೆಟ್) ಬೆಲೆ ಮತ್ತೆ ₹530ರಷ್ಟು ಜಿಗಿತ ಕಂಡಿದೆ.

ಇಂದು ಎಷ್ಟಿದೆ ಚಿನ್ನ ಮತ್ತು ಬೆಳ್ಳಿ ದರ?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರು ಹಾಗೂ ಪ್ರಮುಖ ನಗರಗಳಲ್ಲಿ ಇಂದಿನ ಮಾರುಕಟ್ಟೆ ದರದ ವಿವರ ಇಲ್ಲಿದೆ:

24 ಕ್ಯಾರೆಟ್ (ಅಪರಂಜಿ ಚಿನ್ನ): ಪ್ರತಿ 1 ಗ್ರಾಂ ಬೆಲೆಯಲ್ಲಿ ₹53 ಏರಿಕೆಯಾಗಿದ್ದು, ₹15,566 ತಲುಪಿದೆ. 10 ಗ್ರಾಂ ಬೆಲೆ ₹530 ಏರಿಕೆಯಾಗಿ, ₹1,55,660 ದಾಖಲಾಗಿದೆ.

22 ಕ್ಯಾರೆಟ್ (ಆಭರಣ ಚಿನ್ನ): ಪ್ರತಿ 1 ಗ್ರಾಂ ಬೆಲೆಯಲ್ಲಿ ₹50 ಹೆಚ್ಚಳವಾಗಿ, ₹14,270 ತಲುಪಿದೆ. 10 ಗ್ರಾಂ ಬೆಲೆ ₹500 ಏರಿಕೆಯಾಗಿ, ₹1,42,700ರಲ್ಲಿ ವಹಿವಾಟು ನಡೆಸುತ್ತಿದೆ.

18 ಕ್ಯಾರೆಟ್ ಚಿನ್ನ: ಪ್ರತಿ 1 ಗ್ರಾಂ ಬೆಲೆ ₹41 ಏರಿಕೆಯಾಗಿ ₹11,676 ಹಾಗೂ 10 ಗ್ರಾಂ ಬೆಲೆ ₹11,6,760 ದಾಖಲಾಗಿದೆ.

ಬೆಳ್ಳಿ ದರ ತಟಸ್ಥ: ಬೆಳ್ಳಿ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ. ಪ್ರತಿ ಗ್ರಾಂ ಬೆಲೆ ₹250 ಹಾಗೂ 1 ಕೆಜಿ ಬೆಳ್ಳಿ ಬೆಲೆ ₹2,50,000 ತಲುಪಿದೆ.

ಚಿನ್ನದ ದರ ಏರಿಕೆಗೆ ಕಾರಣಗಳೇನು?

ಡಾಲರ್ ಮೌಲ್ಯ ಇಳಿಕೆ: ಡಾಲರ್ ಮೌಲ್ಯ ಕೊಂಚ ತಗ್ಗಿದ್ದರಿಂದ ಅಂತಾರಾಷ್ಟ್ರೀಯ ಮಟ್ಟದ ಖರೀದಿ ಹೆಚ್ಚಾಗಿದೆ.

ಸುರಕ್ಷಿತ ಹೂಡಿಕೆ: ಅಮೆರಿಕ-ಇರಾನ್ ಒಪ್ಪಂದ ಅಂತಿಮವಾಗದ ಹಿನ್ನೆಲೆಯಲ್ಲಿ ಹಣದುಬ್ಬರದ ಅನಿಶ್ಚಿತತೆ ಎದುರಾಗಿದ್ದು, ಜನರು ಸುರಕ್ಷಿತ ಹೂಡಿಕೆಯಾಗಿ ಚಿನ್ನದತ್ತ ಆಕರ್ಷಿತರಾಗುತ್ತಿದ್ದಾರೆ.

ಕಚ್ಚಾ ತೈಲ ಮತ್ತು ಜಾಗತಿಕ ಉದ್ವಿಗ್ನತೆ: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮುಂದುವರಿದಿದ್ದು, ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ ಸುಮಾರು 90 ಡಾಲರ್ ಮಟ್ಟದಲ್ಲೇ ಉಳಿದಿರುವುದು ಚಿನ್ನದ ಏರಿಕೆಗೆ ಬೆಂಬಲ ನೀಡಿದೆ.ಆಗಸ್ಟ್ 14 ಮತ್ತು 15 ರಂದು 22 ಕ್ಯಾರೆಟ್ ಚಿನ್ನದ ದರ ಕ್ರಮವಾಗಿ ₹750 ಹಾಗೂ ₹650 ಏರಿಕೆಯಾಗಿದ್ದು, ಈ ವಾರದ ಆರಂಭದಲ್ಲೂ ಅದೇ ಜಿಗಿತ ಮುಂದುವರಿದಿದೆ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ದರ

ಚೆನ್ನೈ: ₹15,566 ಪ್ರತಿ ಗ್ರಾಂ

ಮುಂಬೈ: ₹15,566 ಪ್ರತಿ ಗ್ರಾಂ

ದೆಹಲಿ: ₹15,581 ಪ್ರತಿ ಗ್ರಾಂ

ಕೋಲ್ಕತ್ತಾ: ₹15,566 ಪ್ರತಿ ಗ್ರಾಂ

ಬೆಂಗಳೂರು: ₹15,566 ಪ್ರತಿ ಗ್ರಾಂ

ಹೈದರಾಬಾದ್: ₹15,566 ಪ್ರತಿ ಗ್ರಾಂ

ಕೇರಳ: ₹15,566 ಪ್ರತಿ ಗ್ರಾಂ

ಪುಣೆ: ₹15,566 ಪ್ರತಿ ಗ್ರಾಂ

ವಡೋದರಾ: ₹15,571 ಪ್ರತಿ ಗ್ರಾಂ

ಅಹಮದಾಬಾದ್: ₹15,571 ಪ್ರತಿ ಗ್ರಾಂ

ಜೈಪುರ: ₹15,581 ಪ್ರತಿ ಗ್ರಾಂ

ಲಖನೌ: ₹15,581 ಪ್ರತಿ ಗ್ರಾಂ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular