HomeKarnatakaಪೋಷಕರ ನಿರ್ಲಕ್ಷ: 3ನೇ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗುವಿನ ಸ್ಥಿತಿ ಗಂಭೀರ

ಪೋಷಕರ ನಿರ್ಲಕ್ಷ: 3ನೇ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗುವಿನ ಸ್ಥಿತಿ ಗಂಭೀರ

ಬೆಂಗಳೂರು: ಪೋಷಕರು ಮಕ್ಕಳ ಬಗ್ಗೆ ಕೊಂಚ ನಿರ್ಲಕ್ಷ ಮಾಡಿದರೂ ಮಕ್ಕಳು ಎಂತಹ ಅವಘಡಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಒಂದೂವರೆ ವರ್ಷದ ಮಗು ಮೂರನೇ ಮಹಡಿ ಮೇಲಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಚಿಕ್ಕಆಡುಗೋಡಿಯಲ್ಲಿ ಈ ಘಟನೆ ನಡೆದಿದೆ. ಮನೆಯ ಮಹಡಿಯಲ್ಲಿ ಮಗುವೊಂದೇ ಆಟವಾಡುತ್ತಿತ್ತು. ಮೂರನೇ ಮಹಡಿಯಿಂದ ಆಕಸ್ಮಿಕವಾಗಿ ಕ್ರೆಳಗೆ ರಸ್ತೆಗೆ ಬಿದ್ದಿದೆ. ತಕ್ಷಣ ಸ್ಥಳೀಯರು ಮಗುವನ್ನು ಎತ್ತಿಕೊಂಡು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಮಗುವಿನ ತಲೆಯ ಭಾಗದಲ್ಲಿ ಗಂಭೀರವಾದ ಪೆಟ್ಟು ಬಿದ್ದಿದೆ. ಮಗು ಸಾಅವು-ಬದುಕಿನ ನಡಿವೆ ಹೋರಾಟ ನಡೆಸುತ್ತಿದೆ. ಮಗು ಆಟವಾಡುತ್ತಿದೆ ಎಂದು ಪೋಷಕರು ಮಗುವನ್ನೊಂದೆ ಬಿಟ್ಟು ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ತಂದೆ-ತಾಯಿಗಳ ಒಂದು ಸಣ್ಣ ನಿರ್ಲಕ್ಷ ಈಗ ಮಗು ಪ್ರಾಣಕ್ಕೆ ಅಪಾಯ ತಂದುಕೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿಂದೆಯೂ ಎರಡು ಬಾರಿ ಮಗು ಮನೆಯಿಂದ ಬಿದ್ದು ಗಾಯಗೊಂಡಿತ್ತು. ಇಂದು ಮತ್ತೆ ಇದೇ ರೀತಿ ಘಟನೆ ನಡೆದಿದೆ. ಪೋಷಕರ ನಿರ್ಲಕ್ಷ್ಯದ ವಿರುದ್ಧ ಚಿಕ್ಕಆಡುಗೋಡಿ ಠಾಣೆಯಲ್ಲಿ ಸ್ಥಳೀಯರು ದೂರು ದಾಖಲಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular