ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರ ವಿವಿಧ ಸ್ಕಾಲರ್ಶಿಪ್ಗಳನ್ನು ನೀಡುತ್ತಿದೆ. ಇದೀಗ ಸ್ನಾತಕೋತ್ತರ (PG) ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತಿಂಗಳಿಗೆ ₹15,000 ವರೆಗೆ ಸ್ಕಾಲರ್ಶಿಪ್ ಪಡೆಯುವ ಅವಕಾಶವಿದೆ. ಒಂದು ಶೈಕ್ಷಣಿಕ ವರ್ಷದಲ್ಲಿ ಗರಿಷ್ಠ ₹1.50 ಲಕ್ಷ ಆರ್ಥಿಕ ನೆರವು ದೊರೆಯಲಿದೆ. ಅರ್ಹ ವಿದ್ಯಾರ್ಥಿಗಳನ್ನು ಅವರ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಈ ಸ್ಕಾಲರ್ಶಿಪ್ ಅನ್ನು ಎರಡು ವರ್ಷಗಳವರೆಗೆ ಪಡೆಯಬಹುದಾಗಿದೆ.
ಯುಜಿಸಿ ಅಧೀನದಲ್ಲಿ ಸ್ಕಾಲರ್ಶಿಪ್
ನ್ಯಾಷನಲ್ ಸ್ಕಾಲರ್ಶಿಪ್ ಫಾರ್ ಪೋಸ್ಟ್ ಗ್ರಾಜುಯೇಟ್ ಸ್ಟಡೀಸ್ ಯೋಜನೆಯನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಅಧೀನದಲ್ಲಿ ನಡೆಸಲಾಗುತ್ತಿದೆ. ಇದರಡಿ PG ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ₹15,000 ಸ್ಕಾಲರ್ಶಿಪ್ ನೀಡಲಾಗುತ್ತದೆ.
ವಿದ್ಯಾರ್ಥಿಗಳಿಗೆ 10 ತಿಂಗಳ ಕಾಲ ಈ ಮೊತ್ತ ಲಭ್ಯವಾಗಲಿದ್ದು, ಒಂದು ಶೈಕ್ಷಣಿಕ ವರ್ಷದಲ್ಲಿ ಒಟ್ಟು ₹1.50 ಲಕ್ಷದವರೆಗೆ ಆರ್ಥಿಕ ನೆರವು ಪಡೆಯಬಹುದು. ದೇಶದ ಯುಜಿಸಿ ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ PG ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
PG ಕೋರ್ಸ್ಗೆ ಪ್ರವೇಶ ಪಡೆದ ಬಳಿಕ ವಿದ್ಯಾರ್ಥಿಗಳು ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸಬಹುದಾಗಿದೆ.
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ವಿದ್ಯಾರ್ಥಿಗಳು ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ (NSP) ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು. ಪೋರ್ಟಲ್ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ, ಕೇಳಿರುವ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
ನಂತರ ಅರ್ಜಿದಾರರ ಶೈಕ್ಷಣಿಕ ಅರ್ಹತೆ ಮತ್ತು ಮೆರಿಟ್ ಅನ್ನು ಪರಿಶೀಲಿಸಿ ಅರ್ಹ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಮಂಜೂರು ಮಾಡಲಾಗುತ್ತದೆ.ಈ ಯೋಜನೆಯಡಿ ಒಟ್ಟು 10,000 ಸ್ಕಾಲರ್ಶಿಪ್ಗಳನ್ನು ನೀಡಲಾಗುತ್ತದೆ. ದೇಶಾದ್ಯಂತದ ಮೆರಿಟ್ ಆಧಾರದ ಮೇಲೆ ಫಲಾನುಭವಿಗಳ ಆಯ್ಕೆ ನಡೆಯಲಿದೆ. ಇದರಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಶೇ.30ರಷ್ಟು ಸ್ಲಾಟ್ಗಳನ್ನು ಮೀಸಲಿಡಲಾಗಿದೆ. ಸಿಂಗಲ್ ಗರ್ಲ್ ಚೈಲ್ಡ್, ಟ್ವಿನ್ ಅಥವಾ ಫ್ರಾಟರ್ನಲ್ ಗರ್ಲ್ ಚೈಲ್ಡ್ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ.
ಸ್ಕಾಲರ್ಶಿಪ್ನ ಹಣವನ್ನು ವಿದ್ಯಾರ್ಥಿಗಳು ಪುಸ್ತಕಗಳು, ಪ್ರಯಾಣ ಮತ್ತು ಇತರ ಶೈಕ್ಷಣಿಕ ವೆಚ್ಚಗಳಿಗೆ ಬಳಸಿಕೊಳ್ಳಬಹುದು.
ಅರ್ಹತೆಗಳೇನು?
ಅರ್ಜಿದಾರರು ಭಾರತೀಯ ನಾಗರಿಕರಾಗಿರಬೇಕು.
ಯುಜಿಸಿ ಮಾನ್ಯತೆ ಹೊಂದಿರುವ ಶಿಕ್ಷಣ ಸಂಸ್ಥೆಯಲ್ಲಿ PG ಪ್ರವೇಶ ಪಡೆದಿರಬೇಕು.
ಇದು ವಿದ್ಯಾರ್ಥಿಯ ಮೊದಲ PG ಪದವಿ ಕಾರ್ಯಕ್ರಮವಾಗಿರಬೇಕು.
PG ಕೋರ್ಸ್ ಅನ್ನು ನಿಯಮಿತ ಅಥವಾ ಪೂರ್ಣಾವಧಿ (Full-time) ಮಾದರಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು.
ಪ್ರವೇಶ ಪಡೆಯುವ ಸಮಯದಲ್ಲಿ ವಿದ್ಯಾರ್ಥಿಯ ವಯಸ್ಸು 30 ವರ್ಷಕ್ಕಿಂತ ಕಡಿಮೆ ಇರಬೇಕು.
ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿರುವ ಶಿಕ್ಷಣ ಸಂಸ್ಥೆಯು ಯುಜಿಸಿ ಮಾನ್ಯತೆ ಹೊಂದಿರಬೇಕು.
ಸ್ಕಾಲರ್ಶಿಪ್ ಮಂಜೂರು, ಪಾವತಿ ಮತ್ತು ನವೀಕರಣಕ್ಕೆ ಸಂಬಂಧಿಸಿದಂತೆ ಯುಜಿಸಿ ನಿಗದಿಪಡಿಸಿರುವ ನಿಯಮಗಳನ್ನು ಪಾಲಿಸಬೇಕು.

