ಬೆಂಗಳೂರು: ಸಂಘ ರಿಜಿಸ್ಟ್ರೇಷನ್ ಮಾಡುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದ್ದಾರೆ.
ಈ ಮೂಲಕ ಆರ್.ಎಸ್.ಎಸ್.ಗೆ ಲಗಾಮು ಹಾಕಲು ಹೊರಟ ಸಚಿವ ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಹಿಂದೂ ಜಾಗರಣ ವೇದಿಕೆ ಆಯೋಜಿಸಿದ್ದ ಅಖಂಡ ಭಾರತ ಸಂಕಲ್ಪ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ ಖರ್ಗೆ ಅವರೇ ಎಲ್ಲರನ್ನು ನೋಂದಣಿ ಮಾಡುವ ಅಗತ್ಯವಿಲ್ಲ ಎಂದು ಆರ್.ಎಸ್.ಎಸ್.ಗೆ ಲಗಾಮು ಹಾಕಲು ಹೊರಟ ಸರ್ಕಾರಕ್ಕೆ ಚಾಟಿ ಬೀಸಿದ್ದು, ಸಂಘ ರಿಜಿಸ್ಟ್ರೇಷನ್ ಮಾಡುವ ಅವಶ್ಯಕತೆ ಇಲ್ಲ. ನೋಂದಣಿಯಾಗದೆ ಆರ್.ಎಸ್.ಎಸ್. ಹಿಂದೂಗಳನ್ನು ರಕ್ಷಿಸಿದೆ. ಪ್ರಿಯಾಂಕ್ ಖರ್ಗೆ ಅವರೇ ಸಂಘ ನೋಂದಣಿ ಮಾನದಂಡವಲ್ಲ ಎಂದು ಹೇಳಿದ್ದಾರೆ.
ಆರ್.ಎಸ್.ಎಸ್. ಈ ಹಿಂದೆ ನೋಂದಣಿಯಾಗಿಲ್ಲ, ಮುಂದೆಯೂ ಆಗುವುದಿಲ್ಲ. ಸಂಘ ನೊಂದಣಿ ಮಾಡುವ ಅವಶ್ಯಕತೆ ಇಲ್ಲ. ಖರ್ಗೆ ಕುಟುಂಬ ರಜಾಕರಿಗೆ ಹೆದರಿ ಕಲಬುರಗಿಗೆ ಓಡಿ ಬಂತು. ಆಗ ನಿಮ್ಮ ರಕ್ಷಣೆಗೆ ನಿಂತಿದ್ದು ಇದೇ ಆರ್.ಎಸ್.ಎಸ್., ನಿಮ್ಮ ರಕ್ಷಣೆಗೆ ಪೊಲೀಸರು, ರಾಜಕಾರಣಿಗಳು ಬಂದಿಲ್ಲ. ರಜಾಕರ ವಿರುದ್ಧ ನಿಂತಿದ್ದು ಇದೇ ಆರ್.ಎಸ್.ಎಸ್. ಎಂದು ಬಿ.ಎಲ್. ಸಂತೋಷ್ ಹೇಳಿದ್ದಾರೆ.

