HomeAgricultureರೈತರ ಬೆಳೆ ಪರಿಹಾರ ತಿರಸ್ಕೃತ ಸಾಧ್ಯತೆ: ಪಹಣಿಯಲ್ಲಿ ನಿಖರ ಬೆಳೆ ವಿವರ ಅಧಿಕೃತವಾಗಿ ದಾಖಲಿಸಲು ಸೂಚನೆ

ರೈತರ ಬೆಳೆ ಪರಿಹಾರ ತಿರಸ್ಕೃತ ಸಾಧ್ಯತೆ: ಪಹಣಿಯಲ್ಲಿ ನಿಖರ ಬೆಳೆ ವಿವರ ಅಧಿಕೃತವಾಗಿ ದಾಖಲಿಸಲು ಸೂಚನೆ

ಧಾರವಾಡ: ರೈತರ ಬೆಳೆ ಸಮೀಕ್ಷೆಯ ಡೇಟಾ ಹಾಗೂ ಬೆಳೆ ವಿಮೆ ಅರ್ಜಿಯ ಮಾಹಿತಿ ಹೊಂದಾಣಿಕೆಯಾಗದಿದ್ದರೆ ವಿಮೆ ಪರಿಹಾರ ತಿರಸ್ಕೃತಗೊಳ್ಳುವ ಸಾಧ್ಯತೆ ಇರುತ್ತದೆ. ಕೃಷಿ ಇಲಾಖೆಯ ಇತರೆ ಸವಲತ್ತುಗಳು, ಬೆಂಬಲ ಬೆಲೆ ಯೋಜನೆ ಹಾಗೂ ಪರಿಹಾರ ಪಡೆಯಲು ಸಮೀಕ್ಷೆಯೇ ಆಧಾರವಾಗಿರುತ್ತದೆ. ರೈತರ ಪಹಣಿ ಪತ್ರಿಕೆಯಲ್ಲಿ ರೈತರು ಬೆಳೆದ ನಿಖರ ಬೆಳೆ ವಿವರಗಳನ್ನು ಅಧಿಕೃತವಾಗಿ ದಾಖಲಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಳೆ ಸಮೀಕ್ಷೆ ಯೋಜನೆಯಡಿ 2026-27 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದ ರೈತರ ಜಮೀನಿನ ಬೆಳೆ ವಿವರಗಳನ್ನು ದಾಖಲಿಸಲು ಈಗಾಗಲೇ ಅವಕಾಶವನ್ನು ಕಲ್ಪಿಸಲಾಗಿದ್ದು, ಬೆಳೆ ಸಮೀಕ್ಷೆ ಮಾಹಿತಿಯನ್ನು ಬೆಳೆ ಸಾಲ, ಬೆಳೆ ವಿಮೆ, ಬೆಂಬಲ ಬೆಲೆಯಡಿ ಖರೀದಿ, ಬೆಳೆ ಪರಿಹಾರ ಮತ್ತು ವಿವಿಧ ಇಲಾಖೆಗಳ ಸವಲತ್ತುಗಳನ್ನು ಪಡೆಯಲು ಹಾಗೂ ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಉಪಯೋಗಿಸಲಾಗುತ್ತಿದ್ದು, ಸ್ವತಃ ರೈತರೇ ತಮ್ಮ ಮೊಬೈಲ್ ಆ್ಯಪ್ ಮೂಲಕ ಸಕಾಲಿಕವಾಗಿ ಬೆಳೆ ವಿವರಗಳನ್ನು ತಂತ್ರಾಂಶದಲ್ಲಿ ಅಪ್ಲೋಡ್ ಮಾಡುವುದರಿಂದ ನ್ಯೂನ್ಯತೆಗಳನ್ನು ಕಡಿಮೆ ಮಾಡಬಹುದು ಹಾಗೂ ಸೌಲಭ್ಯಗಳಿಂದ ವಂಚಿತರಾಗುವುದನ್ನು ಸಹ ತಪ್ಪಿಸಬಹುದು. ರೈತರ ಬೆಳೆ ಸಮೀಕ್ಷೆ ಆ್ಯಪ್‍ನ್ನು ಪ್ರೂಟ್ಸ್ ತಂತ್ರಾಂಶದೊಂದಿಗೆ ಸಂಯೋಜಿಸಿ ಸರಳೀಕರಿಸಲಾಗಿದೆ.

ಬೆಳೆ ಸಮೀಕ್ಷೆ ಚಟುವಟಿಕೆಗಳ ವಿವರ: ಅಗಸ್ಟ್ 15, 2026 ರೊಳಗಾಗಿ ಖಾಸಗಿ ನಿವಾಸಿಗಳಿಂದ ಬೆಳೆ ಸಮೀಕ್ಷೆ  ಕೈಗೊಳ್ಳಬೇಕು. ಅಗಸ್ಟ್ 20, 2026 ರೊಳಗಾಗಿ ಸಮೀಕ್ಷೆ ಮಾಹಿತಿಗೆ ಮೇಲ್ವಿಚಾರಕರ ಪರಿಶೀಲನೆ ಮಾಡಬೇಕು. ಅಗಸ್ಟ್ 23, 2026 ರೊಳಗಾಗಿ ಮರು ಸಮೀಕ್ಷೆ ಮಾಡಲಾಗುವುದು. ಅಗಸ್ಟ್ 25, 2026 ರೊಳಗಾಗಿ ಮರು ಸಮೀಕ್ಷೆ ಮಾಹಿತಿಯ ಮೇಲ್ವಿಚಾರಕರ ಪರಿಶೀಲನೆ ಮಾಡುವರು. ಅಗಸ್ಟ್ 28, 2026 ರೊಳಗಾಗಿ ಸಮೀಕ್ಷೆ ಆಗದೇ ಇರುವ ತಾಕುಗಳಿಗೆ ಮಾತ್ರ ರೈತರ ಆಕ್ಷೇಪಣೆ ಸಲ್ಲಿಸಬಹುದು. ಅಗಸ್ಟ್ 31, 2026 ರೊಳಗಾಗಿ ರೈತರ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲಾಗುವುದು. ತದನಂತರ ಯಾವುದೇ ವಿಸ್ತರಣೆಗೆ ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಳೆ ಸಮೀಕ್ಷೆ ವಿವರಗಳನ್ನು ಪರಿಶೀಲಿಸುವ ವಿಧಾನ:

 ರೈತರು ತಮ್ಮ ಸರ್ವೇ ನಂಬರ್‍ಗೆ ಬೆಳೆ ಸಮೀಕ್ಷೆ ದಾಖಲಾಗಿರುವುದನ್ನು ಮತ್ತು ಅದರ ಸ್ಥಿತಿಯನ್ನು ಕರ್ನಾಟಕ ಸರ್ಕಾರದ ಅಧಿಕೃತ “ಬೆಳೆ ದರ್ಶಕ” ಮೊಬೈಲ್ ಆ್ಯಪ್‍ನ್ನು ಪ್ಲೇಸ್ಟೋರ್ (Playstore) ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು. 2026-27 ಮತ್ತು ಹಂಗಾಮನ್ನು ಪೂರ್ವ ಮುಂಗಾರು (Early Kharif) ಎಂದು ಆಯ್ಕೆ ಮಾಡಬೇಕು. ಧಾರವಾಡ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಮತ್ತು ಸರ್ವೇ ನಂಬರ್ ಅನ್ನು ನಮೂದಿಸಬೇಕು. ರೈತರ ಬೆಳೆ ವಿವರಗಳು ಹಾಗೂ ಫೋಟೋಗಳು ಸರಿಯಾಗಿ ಅಪ್ಲೋಡ್ ಆಗಿವೆಯೇ ಎಂಬುದನ್ನು ಖಚಿತಪಡಿಸಿಕೊಂಡು, ಬೆಳೆ ಸಮೀಕ್ಷೆ ವಿವರ ತಪ್ಪಾಗಿದ್ದರೆ, ತಕ್ಷಣವೇ ಬೆಳೆ ದರ್ಶಕ ಆ್ಯಪ್ ಮೂಲಕ ಆಕ್ಷೇಪಣೆ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular