HomeEntertainment'ರಾಶಿ' ಚಿತ್ರದ 'ಮೊದಲ ಪ್ರೀತಿ' ಹಾಡು ರಿಲೀಸ್: ಅರ್ಮಾನ್ ಮಲಿಕ್ ಕಂಠಸಿರಿಯಲ್ಲಿ ಮೂಡಿಬಂದ ರೊಮ್ಯಾಂಟಿಕ್ ಮೆಲೋಡಿ!

‘ರಾಶಿ’ ಚಿತ್ರದ ‘ಮೊದಲ ಪ್ರೀತಿ’ ಹಾಡು ರಿಲೀಸ್: ಅರ್ಮಾನ್ ಮಲಿಕ್ ಕಂಠಸಿರಿಯಲ್ಲಿ ಮೂಡಿಬಂದ ರೊಮ್ಯಾಂಟಿಕ್ ಮೆಲೋಡಿ!

ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ನಟ ಆದಿತ್ಯ ಶಶಿಕುಮಾರ್ ಮತ್ತು ಸಮೀಕ್ಷಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ‘ರಾಶಿ’ ಸಿನಿಮಾದಿಂದ ಹೊಸ ಸಿಹಿ ಸುದ್ದಿ ಹೊರಬಿದ್ದಿದೆ. ಈ ಚಿತ್ರದ ‘ಮೊದಲ ಪ್ರೀತಿ’ ಎಂಬ ಪ್ರಣಯ ಗೀತೆಯ ವೀಡಿಯೋ ಹಾಡು ಇದೀಗ ಯೂಟ್ಯೂಬ್‌ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಈ ಮಧುರವಾದ ಪ್ರೇಮಗೀತೆಗೆ ಪ್ರಸಿದ್ಧ ಗಾಯಕ ಅರ್ಮಾನ್ ಮಲಿಕ್ ಧ್ವನಿಯಾಗಿದ್ದು, ತಮ್ಮ ಶಾರೀರದಿಂದ ಹಾಡಿಗೆ ಮತ್ತಷ್ಟು ಮೆರುಗು ನೀಡಿದ್ದಾರೆ. ನವೀನ ಶೈಲಿಯ ಈ ಹಾಡಿನಲ್ಲಿ ನಾಯಕ-ನಾಯಕಿಯ ರೊಮ್ಯಾಂಟಿಕ್ ಕೆಮಿಸ್ಟ್ರಿ ಗಮನ ಸೆಳೆಯುತ್ತಿದೆ. ‘ಧುವನ್ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಅಖಿಲೇಶ್ ಎಂ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ವಿಜಯ್ ಪಾಳೇಗಾರ್ ಅವರ ನಿರ್ದೇಶನದಲ್ಲೇ ಈ ಹಾಡು ಮೂಡಿಬಂದಿದೆ. ವಿಶೇಷವೆಂದರೆ ವಿಜಯ್ ಪಾಳೇಗಾರ್ ಅವರೇ ಈ ಹಾಡಿಗೆ ಸಾಹಿತ್ಯ ಬರೆದು, ಸಂಗೀತವನ್ನೂ ಸಂಯೋಜಿಸಿದ್ದಾರೆ.

ಈ ವೀಡಿಯೋ ಹಾಡಿನಲ್ಲಿ ನೃತ್ಯ ನಿರ್ದೇಶಕ ಭೂಷಣ್ ಅವರ ಕೊರಿಯೋಗ್ರಫಿ ಮೂಡಿಬಂದಿದ್ದು, ನವೀನ್ ಸೂರ್ಯ ಅವರ ಛಾಯಾಗ್ರಹಣ ಹಾಡಿನ ದೃಶ್ಯ ವೈಭವವನ್ನು ಹೆಚ್ಚಿಸಿದೆ. ಕೆ ಎಂ ಪ್ರಕಾಶ್ ಅವರ ಸಂಕಲನ ಹಾಗೂ ಮಹೇಶ್ ಸತಾನೂರು ಅವರ ಕಲಾ ನಿರ್ದೇಶನ ಈ ಹಾಡಿನಲ್ಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿತ್ರದಲ್ಲಿ ರಮೇಶ್ ಇಂದಿರಾ, ತಬಲಾ ನಾಣಿ, ವೀಣಾ ಸುಂದರ್, ಮಂಜು ಪಾವಗಡ, ಹುಲಿ ಕಾರ್ತಿಕ್, ವಿನೋದ್ ಗೊಬ್ರಗಾಲ, ಉಗ್ರಂ ರವಿ, ಕರಿ ಸುಬ್ಬು, ವರ್ಧನ್ ತೀರ್ಥಹಳ್ಳಿ ಹಾಗೂ ಭಜರಂಗಿ ಪ್ರಸನ್ನ ಅವರನ್ನೊಳಗೊಂಡ ದೊಡ್ಡ ತಾರಾಗಣವಿದೆ. ಯೂಟ್ಯೂಬ್‌ನಲ್ಲಿ ಸದ್ಯ ಸದ್ದು ಮಾಡುತ್ತಿರುವ ಈ ‘ಮೊದಲ ಪ್ರೀತಿ’ ಹಾಡು ಪ್ರೇಮಿಗಳ ನೆಚ್ಚಿನ ಗೀತೆಯಾಗಿ ಹೊರಹೊಮ್ಮುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular