HomeLatest NewsBREAKING : ಪಂಜಾಬ್ ಮಾಜಿ ಡಿಸಿಎಂ 'ಸುಖ್ಬೀರ್ ಸಿಂಗ್' ಬಾದಲ್ ಹತ್ಯೆಗೆ ಯತ್ನ ; ಮಾರಕಾಸ್ತ್ರಗಳಿಂದ...

BREAKING : ಪಂಜಾಬ್ ಮಾಜಿ ಡಿಸಿಎಂ ‘ಸುಖ್ಬೀರ್ ಸಿಂಗ್’ ಬಾದಲ್ ಹತ್ಯೆಗೆ ಯತ್ನ ; ಮಾರಕಾಸ್ತ್ರಗಳಿಂದ ದಾಳಿ

ಮಾಜಿ ಪಂಜಾಬ್ ಉಪಮುಖ್ಯಮಂತ್ರಿ ಹಾಗೂ ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಅವರ ಮೇಲೆ ಗುರುವಾರ ಮಹಾರಾಷ್ಟ್ರದ ನಾಂದೇಡ್ ಸಾಹಿಬ್‌ನ ತಖ್ತ್ ಶ್ರೀ ಹಜೂರ್ ಸಾಹಿಬ್‌ನ ಮಾತಾ ಸಾಹಿಬ್ ಗುರುದ್ವಾರ ಬಳಿ ದಾಳಿ ನಡೆದಿದೆ.

ಮಹಾರಾಷ್ಟ್ರದ ನಾಂದೇಡ್ ಸಾಹಿಬ್‌ನಲ್ಲಿ ಮಾಜಿ ಪಂಜಾಬ್ ಉಪಮುಖ್ಯಮಂತ್ರಿ ಹಾಗೂ ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಅವರ ಮೇಲೆ ದಾಳಿ ನಡೆದಿದೆ. ಗುರುದ್ವಾರಕ್ಕೆ ತೆರಳುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಹರಿತವಾದ ಆಯುಧದಿಂದ ಇರಿಯಲು ಯತ್ನಿಸಿದ್ದು, ಪೊಲೀಸರ ತಕ್ಷಣದ ಮಧ್ಯಪ್ರವೇಶದಿಂದ ದೊಡ್ಡ ಅನಾಹುತ ತಪ್ಪಿದೆ. ಘಟನೆಯಲ್ಲಿ ಬಾದಲ್ ಅವರ ಕೈಗೆ ಗಾಯವಾಗಿದ್ದು, ಓರ್ವ ಪೊಲೀಸ್ ಸಿಬ್ಬಂದಿಗೂ ಗಾಯವಾಗಿದೆ.

ಗುರುದ್ವಾರಕ್ಕೆ ತೆರಳುತ್ತಿದ್ದ ವೇಳೆ ಬೆಳಗ್ಗೆ 11:30ರ ಸುಮಾರಿಗೆ ಓರ್ವ ವ್ಯಕ್ತಿ ಬಾದಲ್ ಅವರ ಬಳಿ ಬಂದು ಹರಿತವಾದ ಆಯುಧದಿಂದ ಇರಿಯಲು ಯತ್ನಿಸಿದ್ದಾನೆ. ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ದಾಳಿಕೋರನನ್ನು ತಡೆದಿದ್ದಾರೆ. ಈ ವೇಳೆ ಬಾದಲ್ ಅವರ ಕೈಗೆ ಗಾಯವಾಗಿದೆ. ಘಟನೆಯ ಬಳಿಕ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಯನ್ನು ತಡೆಯುವ ಸಂದರ್ಭದಲ್ಲಿ ಓರ್ವ ಪೊಲೀಸ್ ಸಿಬ್ಬಂದಿಗೂ ಗಾಯವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಾಳಿಕೋರನೊಬ್ಬ ಬಾದಲ್ ಅವರ ಬಳಿ ಬಂದು ಇರಿಯಲು ಯತ್ನಿಸಿದಾಗ ಪೊಲೀಸರು ಕೂಡಲೇ ಮಧ್ಯಪ್ರವೇಶಿಸಿ ಆತನನ್ನು ತಡೆದಿದ್ದಾರೆ. ಆದರೂ ಈ ಘಟನೆಯಲ್ಲಿ ಬಾದಲ್ ಗಾಯಗೊಂಡಿದ್ದಾರೆ.

https://twitter.com/PTI_News/status/2087830614099837305/video/1

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular