ಬಾಲಿವುಡ್‌ನ ಸೌಂದರ್ಯವತಿ ತಾರಾ ಸುತಾರಿಯಾ ತಮ್ಮ ವಿಶಿಷ್ಟ ಫ್ಯಾಷನ್ ಸೆನ್ಸ್‌ನಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ತಾರಾ, ತಮ್ಮ ಸಾಂಪ್ರದಾಯಿಕ ಹಾಗೂ ಗ್ಲಾಮರಸ್ ಲುಕ್‌ನಿಂದ ಎಲ್ಲರ ಗಮನ ಸೆಳೆದಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿರುವ ನಟಿ, ಮಿಡ್‌ನೈಟ್ ಬ್ಲೂ (ಗಾಢ ನೀಲಿ) ಬಣ್ಣದ ಲೆಹೆಂಗಾದಲ್ಲಿ ಮಿಂಚಿದ್ದಾರೆ.
ಅಹಮದಾಬಾದ್ ಇವೆಂಟ್‌ಗಾಗಿ ತಾರಾ, ಪ್ರಸಿದ್ಧ ಡಿಸೈನರ್ ಲೇಬಲ್ ‘ಬಾಸಂತಿ’ ವಿನ್ಯಾಸಗೊಳಿಸಿದ ನವಿಲು ನೀಲಿ ಬಣ್ಣದ ಬೃಹತ್ ಗೇರದ ಲೆಹೆಂಗಾ ಧರಿಸಿದ್ದರು. ಈ ಉಡುಪಿನ ತುಂಬಾ ಅತ್ಯಂತ ಸೂಕ್ಷ್ಮವಾದ ಸೀಕ್ವಿನ್ಸ್, ಹರಳುಗಳು ಹಾಗೂ ಕ್ರಿಸ್ಟಲ್ ತಾಸೆಲ್‌ಗಳ ರಿಚ್ ಎಂಬ್ರಾಯ್ಡರಿ ಕೆಲಸವಿತ್ತು. ಇದಕ್ಕೆ ಜೋಡಿಯಾಗಿ ಸೇಮ್ ಡಿಸೈನ್‌ನ ಕಾರ್ಸೆಟ್ ಶೈಲಿಯ ಬ್ಲೌಸ್ ಹಾಗೂ ಶೀರ್ ದುಪಟ್ಟಾ ಧರಿಸಿ ರಾಯಲ್ ಲುಕ್‌ನಲ್ಲಿ ಕಾಣಿಸಿಕೊಂಡರು. ಬಾಸಂತಿ ಬ್ರ್ಯಾಂಡ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ ಈ ಡಿಸೈನರ್ ಉಡುಪಿನ ಬೆಲೆ ₹87,990 ಆಗಿದ್ದು, ಪ್ರಸ್ತುತ ಇದು ಸೋಲ್ಡ್ ಔಟ್ ಆಗಿದೆ.
ಸಾಂಪ್ರದಾಯಿಕ ಆಭರಣಗಳ ಬದಲು ಹೊಳೆಯುವ ವಜ್ರದ ಹಾರ (ಡೈಮಂಡ್ ನೆಕ್ಲೇಸ್) ಹಾಗೂ ಅದಕ್ಕೆ ಹೊಂದುವ ಕಿವಿಯೋಲೆಗಳನ್ನು ಧರಿಸುವ ಮೂಲಕ ಅವರು ತಮ್ಮ ಲುಕ್ ಹೆಚ್ಚಿಸಿಕೊಂಡಿದ್ದರು. ನೈಸರ್ಗಿಕ ಮೇಕ್ಅಪ್, ಸಿಲ್ಕಿ ಕೇಶವಿನ್ಯಾಸದೊಂದಿಗೆ ತಾರಾ ನೀಡಿದ ಭಂಗಿಗಳು ಹಳೆಯ ಹಾಲಿವುಡ್ ಶೈಲಿಯ ಗ್ಲಾಮರ್ ಅನ್ನು ನೆನಪಿಸುವಂತಿತ್ತು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅವರ ಈ ಫೋಟೋಗಳು ವೈರಲ್ ಆಗುತ್ತಿದ್ದು, ಅಭಿಮಾನಿಗಳು ನಟಿಯ ಫ್ಯಾಷನ್ ಸೆನ್ಸ್‌ಗೆ ಫಿದಾ ಆಗಿದ್ದಾರೆ.

