ಇಂಗ್ಲೆಂಡ್‌ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಯುವ ಬ್ಯಾಟರ್ ಡೆವಾಲ್ಡ್ ಬ್ರೂವಿಸ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರೀಡಾಭಿಮಾನಿಗಳನ್ನು ರಂಜಿಸಿದ್ದಾರೆ. ರೇಹಾನ್ ಅಹ್ಮದ್ ಎಸೆದ ಎಸೆತವನ್ನ ಅತ್ಯಂತ ಕಲಾತ್ಮಕವಾಗಿ ಎದುರಿಸಿದ ಅವರು ಬೌಂಡರಿ ಗೆರೆಯಾಚೆಗೆ ದೂಡಿದರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಈ ಉದಯೋನ್ಮುಖ ಆಟಗಾರ ಚೆಂಡನ್ನು ಬ್ಯಾಟ್‌ಗೆ ತಾಕಿಸಿದ ತಕ್ಷಣವೇ ಅದು ಸಿಕ್ಸರ್ ಹೋಗುವುದು ಖಚಿತ ಎಂಬಂತೆ ಹಿಂತಿರುಗಿ ನೋಡದೆ ತಮ್ಮ ಆತ್ಮವಿಶ್ವಾಸ ಪ್ರದರ್ಶಿಸಿದರು. ಅವರ ಈ ಶೈಲಿ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.
ಈ ಪಂದ್ಯದಲ್ಲಿ 162 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಲಂಡನ್ ಸ್ಪಿರಿಟ್ ತಂಡಕ್ಕೆ ಬ್ರೂವಿಸ್ ಮತ್ತು ಲಿವಿಂಗ್‌ಸ್ಟನ್ ಜೋಡಿ ಭದ್ರ ಬುನಾದಿ ಹಾಕಿಕೊಟ್ಟಿತು. ಇವರಿಬ್ಬರೂ ಸೇರಿ ಕೇವಲ 47 ಎಸೆತಗಳಲ್ಲಿ 103 ರನ್‌ಗಳ ಸ್ಫೋಟಕ ಪಾಲುದಾರಿಕೆ ನೀಡುವ ಮೂಲಕ ಎದುರಾಳಿ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಲಿವಿಂಗ್‌ಸ್ಟನ್ 30 ಎಸೆತಗಳಲ್ಲಿ 66 ರನ್ ಗಳಿಸಿ ಔಟಾಗುವಷ್ಟರಲ್ಲಿ ತಂಡದ ಗೆಲುವು ಬಹುತೇಕ ಖಚಿತವಾಗಿತ್ತು. ಕೊನೆಯಲ್ಲಿ ಬ್ರೂವಿಸ್ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸುವ ಮೂಲಕ ಇನ್ನೂ 18 ಎಸೆತಗಳು ಬಾಕಿ ಇರುವಂತೆಯೇ ಲಂಡನ್ ಸ್ಪಿರಿಟ್ ತಂಡಕ್ಕೆ 7 ವಿಕೆಟ್‌ಗಳ ಭರ್ಜರಿ ಗೆಲುವು ತಂದುಕೊಟ್ಟರು.
Dewald Brevis launches a HUGE no-look six!
Watch all #TheHundred action live on BBC Two and Sky Sports 🍿#RoadToTheEliminator pic.twitter.com/r0yF8oD4aI
— The Hundred (@thehundred) August 9, 2026
Dewald Brevis with a no-look six into the top tier of the Pavilion! pic.twitter.com/0nxoWE51Av
— Lord’s Cricket Ground (@HomeOfCricket) August 9, 2026

