ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ದೇವರಿಗೆ ನೈವೇದ್ಯ ಮಾಡಲು ಹಾಗೂ ಮನೆಗೆ ಬರುವ ಅತಿಥಿಗಳಿಗೆ ಸವಿಯಲು ಹೊಸ ಬಗೆಯ ಸಿಹಿ ತಿಂಡಿ ಹುಡುಕುತ್ತಿದ್ದರೆ ಬಾದಾಮಿ ಮತ್ತು ರಾಜಗಿರಿ ಲಾಡು ಅತ್ಯುತ್ತಮ ಆಯ್ಕೆ. ಆರೋಗ್ಯಕ್ಕೆ ಅತ್ಯಂತ ಹಿತಕರವಾಗಿರುವ ಈ ಲಾಡುವನ್ನು ಅತ್ಯಂತ ಕಡಿಮೆ ಸಮಯದಲ್ಲಿ ಸುಲಭವಾಗಿ ತಯಾರಿಸಬಹುದು.
ಬೇಕಾಗುವ ಸಾಮಗ್ರಿಗಳು:
-
ಅರಳಿಸಿದ ರಾಜಗಿರಿ ಕಾಳುಗಳು 50 ಗ್ರಾಂ
-
ಕರಗಿಸಿದ ಬೆಲ್ಲ 50 ಮಿಲಿ
-
ಬಾದಾಮಿ ಚೂರುಗಳು 30 ಗ್ರಾಂ
ತಯಾರಿಸುವ ವಿಧಾನ: ಮೊದಲಿಗೆ ಒಂದು ಅಗಲವಾದ ಪಾತ್ರೆಯಲ್ಲಿ ಅರಳಿಸಿದ ರಾಜಗಿರಿ ಕಾಳುಗಳು, ಬಾದಾಮಿ ಚೂರುಗಳು ಮತ್ತು ಕರಗಿಸಿದ ಬೆಲ್ಲವನ್ನು ಹಾಕಿ. ನಂತರ ಎಲ್ಲ ಸಾಮಗ್ರಿಗಳು ಒಂದಕ್ಕೊಂದು ಸರಿಯಾಗಿ ಕಲೆಯುವಂತೆ ಚೆನ್ನಾಗಿ ಮಿಕ್ಸ್ ಮಾಡಿ. ತಯಾರಾದ ಮಿಶ್ರಣವನ್ನು ಕೈಗೆ ಸ್ವಲ್ಪ ಒತ್ತಡ ನೀಡಿ ಸಣ್ಣ ಸಣ್ಣ ಗಟ್ಟಿಯಾದ ಲಾಡುಗಳನ್ನಾಗಿ ಕಟ್ಟಿ. ಈಗ ರುಚಿಕರ ಹಾಗೂ ಪೌಷ್ಟಿಕಾಂಶಯುಕ್ತ ಲಾಡು ಸೇವನೆಗೆ ಸಿದ್ಧ.

