HomeKarnatakaಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್ ಗೆ ಹೋಗಿದ್ದ ಯುವಕ ಇದ್ದಕ್ಕಿದ್ದಂತೆ ನಾಪತ್ತೆ

ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್ ಗೆ ಹೋಗಿದ್ದ ಯುವಕ ಇದ್ದಕ್ಕಿದ್ದಂತೆ ನಾಪತ್ತೆ

ನೆಲಮಂಗಲ: ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್ ಗೆ ಹೋಗಿದ್ದ ಯುವಕ ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ.

31 ವರ್ಷದ ಅದೈತ್ ನಾಪತ್ತೆಯಾಗಿರುವ ಯುವಕ. ಶಿವಗಂಗೆ ಬೆಟ್ಟದಲ್ಲಿ ಬೈಕ್ ಪಾರ್ಕಿಂಗ್ ಮಾಡಿ ಯುವಕ ಬೆಟ್ಟ ಹತ್ತಿದ್ದ. ಆದರೆ ಈಗ ಯುವಕ ನಾಪತ್ತೆಯಾಗಿದ್ದಾನೆ. ಆತನ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದ್ದು ಆತಂಕಕ್ಕೆ ಕಾರಣವಗಿದೆ.

ಯುವಕ ಅಧೈತ್ ಬೆಟ್ಟ ಹತ್ತುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ ವಾಪಸ್ ಆಗಿಲ್ಲ. ಬೈಕ್ ನಿಲ್ಲಿಸಿದ್ದ ಜಾಗದಲ್ಲಿಯೇ ನಿಂತಿದ್ದು, ಯುವಕ ಯಾವುದೇ ಸಂಪರ್ಕಕ್ಕೆ ಸಿಗುತ್ತಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯುವಕ ಅಧೈತ್ 5 ದಿನಗಳ ಹಿಂದೆ ವೈಟ್ ಫೀಲ್ಡ್ ನಿಂದ ಬೈಕ್ ಬಾಡಿಗೆಗೆ ಪಡೆದಿದ್ದ. ನಿನ್ನೆ ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್ ಗೆ ಬಂದಿದ್ದ. ಹೋಗೆ ಟ್ರೆಕಿಂಗ್ ಗೆ ಬೆಟ್ಟ ಹತ್ತಿ ಹೋಗಿರುವ ಯುವಕ ನಾಪತ್ತೆಯಾಗಿದ್ದಾನೆ. ನೆಲಮಂಗಲ ಪೊಲೀಸರು ಹಾಗೂ ಡಾಬಸ್ ಪೇಟೆ ಪೊಲೀಸರು ಶಿವಗಂಗೆ ಬೆಟ್ಟದ ಶಾಂತಲಾ ಡ್ರಾಪ್ ನಲ್ಲಿ ಯುವಕನ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular