HomeLatest NewsSHOCKING : ಈತ ಮನುಷ್ಯನಲ್ಲ, ಮೃಗ..! ಪತ್ನಿ ಮನೆ ಬಿಟ್ಟು ಹೋದ ಕೋಪಕ್ಕೆ ಸ್ವಂತ 4...

SHOCKING : ಈತ ಮನುಷ್ಯನಲ್ಲ, ಮೃಗ..! ಪತ್ನಿ ಮನೆ ಬಿಟ್ಟು ಹೋದ ಕೋಪಕ್ಕೆ ಸ್ವಂತ 4 ವರ್ಷದ ಮಗಳ ಮೇಲೆಯೇ ಅತ್ಯಾಚಾರ ಎಸಗಿದ ತಂದೆ

ಗುಜರಾತ್‌ನ ಗಾಂಧೀನಗರದಲ್ಲಿ ಮಾನವೀಯತೆಯನ್ನೇ ಮರೆಸುವಂತಹ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಪತ್ನಿಯ ಸ್ನೇಹಿತೆಯ ಮೇಲೆ ಲೈಂಗಿಕ ಕಿರುಕುಳ ನೀಡಿದ್ದ ಕಾರಣ ಪತ್ನಿ ಮಕ್ಕಳೊಂದಿಗೆ ತವರು ಮನೆಗೆ ತೆರಳಿದ ಹಿನ್ನೆಲೆಯಲ್ಲಿ, ಆಕೆಯ ಮೇಲಿನ ದ್ವೇಷದಿಂದ ಆರೋಪಿ ತನ್ನದೇ ನಾಲ್ಕು ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಪೊಲೀಸರ ಮಾಹಿತಿ ಪ್ರಕಾರ, 32 ವರ್ಷದ ಆರೋಪಿ ತನ್ನ ಮನೆಯಲ್ಲಿ ವಾಸವಾಗಿದ್ದ ಪತ್ನಿಯ ಸ್ನೇಹಿತೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಆಕೆ ಒಬ್ಬಳೇ ಇದ್ದ ವೇಳೆ ಲೈಂಗಿಕ ಕಿರುಕುಳ ನೀಡಿದ್ದನು. ಈ ವಿಚಾರ ತಿಳಿದು ಪತಿ-ಪತ್ನಿಯ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಮನನೊಂದು ಪತ್ನಿ ತನ್ನ ನಾಲ್ಕು ವರ್ಷದ ಮಗಳು ಹಾಗೂ ಎರಡು ವರ್ಷದ ಮಗನನ್ನು ಕರೆದುಕೊಂಡು ತವರು ಮನೆಗೆ ತೆರಳಿದ್ದಳು.

ಕೆಲವು ದಿನಗಳ ಬಳಿಕ ಆರೋಪಿ ಪತ್ನಿಯ ಮನೆಗೆ ತೆರಳಿ, ಮಕ್ಕಳಲ್ಲಿ ಒಬ್ಬರನ್ನು ತನ್ನೊಂದಿಗೆ ಕಳುಹಿಸುವಂತೆ ಒತ್ತಾಯಿಸಿದ್ದಾನೆ. ಆರಂಭದಲ್ಲಿ ಕುಟುಂಬದವರು ನಿರಾಕರಿಸಿದರೂ, ಬಳಿಕ ನಾಲ್ಕು ವರ್ಷದ ಮಗಳನ್ನು ತಂದೆಯೊಂದಿಗೆ ಕಳುಹಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮನೆಗೆ ಕರೆದುಕೊಂಡು ಹೋದ ಬಳಿಕ ರಾತ್ರಿ ವೇಳೆ ಮಲಗಿದ್ದ ಬಾಲಕಿಯ ಮೇಲೆ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ತೀವ್ರ ನೋವಿನಿಂದ ಮಗು ಅಳಲು ಆರಂಭಿಸಿದಾಗ ಆತ ಕೃತ್ಯವನ್ನು ನಿಲ್ಲಿಸಿದ್ದಾನೆ.

ಮರುದಿನ ಬೆಳಗ್ಗೆ ಬಾಲಕಿಗೆ ಸ್ನಾನ ಮಾಡಿಸುವಾಗ ಆಕೆಯ ಸಂಬಂಧಿಕರು ರಕ್ತಸ್ರಾವವಾಗಿರುವುದನ್ನು ಗಮನಿಸಿ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಬಾಲಕಿಯನ್ನು ಗಾಂಧೀನಗರ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ. ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತಕ್ಷಣವೇ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿ, ಕೆಲವೇ ಗಂಟೆಗಳಲ್ಲಿ 32 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ. ಈ ಅಮಾನವೀಯ ಘಟನೆ ಗಾಂಧೀನಗರದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular