HomeLatest News35 ವರ್ಷಗಳ ಬಳಿಕ ಶಾಂತಿ ಕ್ರಾಂತಿ ರೀ-ರಿಲೀಸ್‌ಗೆ ಭರ್ಜರಿ ಬೇಡಿಕೆ ಆದರೆ ಬಾಕ್ಸ್ ಆಫೀಸ್ ಸವಾಲು

35 ವರ್ಷಗಳ ಬಳಿಕ ಶಾಂತಿ ಕ್ರಾಂತಿ ರೀ-ರಿಲೀಸ್‌ಗೆ ಭರ್ಜರಿ ಬೇಡಿಕೆ ಆದರೆ ಬಾಕ್ಸ್ ಆಫೀಸ್ ಸವಾಲು

ಬೊಂಗಳೂರು: 1991ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ 35 ವರ್ಷಗಳ ಪೂರೈಸುತ್ತಿರುವ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಬಹುಭಾಷಾ ಕನಸಿನ ಯೋಜನೆ ಶಾಂತಿ ಕ್ರಾಂತಿ ಸಿನಿಮಾ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಂದಿನ ಕಾಲದಲ್ಲೇ ಸುಮಾರು ₹10 ಕೋಟಿಗೂ ಅಧಿಕ ಬೃಹತ್ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಈ ಚಿತ್ರವನ್ನು ಮತ್ತೆ ಥಿಯೇಟರ್‌ಗಳಲ್ಲಿ ಮರು-ಬಿಡುಗಡೆ (Re-release) ಮಾಡಬೇಕೆಂಬ ಪಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ.

ಆದರೆ, ಸೋಶಿಯಲ್ ಮೀಡಿಯಾದಲ್ಲಿ ಕಾಣಿಸುವ ಕ್ರೇಜ್‌ಗೂ ಮತ್ತು ಬಾಕ್ಸ್ ಆಫೀಸ್‌ನ ವಾಸ್ತವ ಸ್ಥಿತಿಗೂ ಅಂತರ ದೊಡ್ಡದಿದೆ ಎಂಬ ವಿಶ್ಲೇಷಣೆ ಗಾಂಧಿನಗರದ ಚಿತ್ರರಂಗದ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಭಾರತೀಯ ಚಿತ್ರರಂಗದ ಅಸಲಿ ಪ್ಯಾನ್-ಇಂಡಿಯಾ ಪ್ರಯೋಗ

ಇಂದಿನ ಪ್ಯಾನ್-ಇಂಡಿಯಾ ಸಿನಿಮಾಗಳು ಒಂದೇ ಭಾಷೆಯಲ್ಲಿ ಶೂಟ್ ಆಗಿ ಇತರೆ ಭಾಷೆಗಳಿಗೆ ಡಬ್ ಆಗುತ್ತವೆ. ಆದರೆ, 80ರ ದಶಕದ ಕೊನೆಯಲ್ಲಿ ಈಶ್ವರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರವಿಚಂದ್ರನ್ ಅವರು ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಪ್ರತ್ಯೇಕ ಸೂಪರ್‌ಸ್ಟಾರ್‌ಗಳನ್ನು (ಕನ್ನಡದಲ್ಲಿ ರವಿಚಂದ್ರನ್, ತೆಲುಗಿನಲ್ಲಿ ನಾಗಾರ್ಜುನ, ತಮಿಳು/ಹಿಂದಿಯಲ್ಲಿ ರಜನಿಕಾಂತ್) ಇಟ್ಟುಕೊಂಡು ಶೂಟಿಂಗ್ ಮಾಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿತ್ರೀಕರಣದ ಹಂತದಲ್ಲೇ ರವಿಚಂದ್ರನ್ ಅವರಿಗೆ ಈ ಯೋಜನೆಯ ಸವಾಲುಗಳ ಅರಿವಾಗಿ ಸಿನಿಮಾ ನಿಲ್ಲಿಸಲು ಯೋಚಿಸಿದ್ದರು. ಆದರೆ ತಂದೆ ಎನ್. ವೀರಾಸ್ವಾಮಿ ಅವರ ಸೂಚನೆಯಂತೆ, ರಜನಿಕಾಂತ್ ಹಾಗೂ ನಾಗಾರ್ಜುನ ಅವರ ಕಾಲ್‌ಶೀಟ್‌ ವ್ಯರ್ಥವಾಗಬಾರದೆಂದು ಕಷ್ಟಪಟ್ಟು ಪೂರ್ಣಗೊಳಿಸಿದ್ದರು. 1991ರಲ್ಲಿ ತೆರೆಕಂಡ ಈ ಚಿತ್ರವು ಅಂದು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಮುಖಭಂಗ ಅನುಭವಿಸಿದರೂ, ಹಂಸಲೇಖ ಅವರ ಸಂಗೀತದ ಹಾಡುಗಳು ಇಂದಿಗೂ ಅಮರವಾಗಿ ಉಳಿದಿವೆ.

ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ಶಾಂತಿ ಕ್ರಾಂತಿ ರೀ-ರಿಲೀಸ್‌ಗೆ ಭಾರಿ ಬೆಂಬಲ ಸಿಗುತ್ತಿದ್ದು, ಸಂಬಂಧಿಸಿದ ರೀಲ್ಸ್ ಹಾಗೂ ಪೋಸ್ಟ್‌ಗಳಿಗೆ ಲಕ್ಷಾಂತರ ಲೈಕ್ಸ್, ವ್ಯೂವ್ಸ್ ಹರಿದುಬರುತ್ತಿವೆ. ಆದರೆ ಈ ಪೈಕಿ ಎಷ್ಟು ಮಂದಿ ಹಣ ಕೊಟ್ಟು ಥಿಯೇಟರ್‌ಗೆ ಬರುತ್ತಾರೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.

ಉಚಿತ ವೀಕ್ಷಣೆ ಲಭ್ಯತೆ: ‘ಶಾಂತಿ ಕ್ರಾಂತಿ’ ಸಿನಿಮಾ ಈಗಾಗಲೇ ಯೂಟ್ಯೂಬ್‌ನಲ್ಲಿ ಉಚಿತವಾಗಿ ಲಭ್ಯವಿದ್ದು, ಕಿರುತೆರೆಯಲ್ಲೂ ಪದೇ ಪದೇ ಪ್ರಸಾರವಾಗುತ್ತಿದೆ. ಇಂದಿನ ಕಾಲದಲ್ಲಿ ಜನರು ಸಮಯ ಮೀಸಲಿಟ್ಟು, ಟಿಕೆಟ್, ಪಾರ್ಕಿಂಗ್, ಪಾಪ್‌ಕಾರ್ನ್‌ಗೆ ಸಾವಿರಾರು ರೂಪಾಯಿ ವೆಚ್ಚ ಮಾಡಿ ಹಳೆಯ ಸಿನಿಮಾ ನೋಡಲು ಥಿಯೇಟರ್‌ಗೆ ಬರುವುದು ತೀರಾ ವಿರಳ.

ರೀ-ಮಾಸ್ಟರಿಂಗ್ ವೆಚ್ಚ: ಹಳೆಯ ಸಿನಿಮಾವನ್ನು 4K ನೆಗೆಟಿವ್ ಕ್ಲೀನಿಂಗ್ ಹಾಗೂ ಸೌಂಡ್ ಮಿಕ್ಸಿಂಗ್ ಮಾಡಿ ಇಂದಿನ ತಂತ್ರಜ್ಞಾನಕ್ಕೆ ತಕ್ಕಂತೆ ಮರು-ಬಿಡುಗಡೆ ಮಾಡಲು ಮತ್ತೆ ಲಕ್ಷಾಂತರ ರೂಪಾಯಿ ಹೂಡಿಕೆ ಬೇಕಾಗುತ್ತದೆ. ಈ ಬಂಡವಾಳ ವಾಪಸ್ ಬರುವುದು ಅನುಮಾನ.

95% ರೀ-ರಿಲೀಸ್ ಸಿನಿಮಾಗಳ ವೈಫಲ್ಯ: ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಮರು-ಬಿಡುಗಡೆಯಾದ ಶೇಕಡಾ 95ರಷ್ಟು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸೋತಿವೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಥಿಯೇಟರ್ ಮುಂದೆ ಸಂಭ್ರಮಿಸುವ ವೀಡಿಯೋಗಳು ಕೇವಲ ಶೇ. 2ರಷ್ಟು ಮಾತ್ರ ವಾಸ್ತವ. ಉಳಿದ ಶೇ. 98ರಷ್ಟು ಶೋಗಳು ಖಾಲಿ ಇರುತ್ತವೆ ಎಂಬುದು ಪ್ರದರ್ಶಕರ ಅನುಭವ.

ಸೋಶಿಯಲ್ ಮೀಡಿಯಾದಲ್ಲಿ ಎದ್ದಿರುವ ಈ ಟ್ರೆಂಡ್ ಕೇವಲ ಡಿಜಿಟಲ್ ಸಂಭ್ರಮಕ್ಕೆ ಸೀಮಿತವಾಗುತ್ತದೆಯೇ ಅಥವಾ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಕರೆತರುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular