HomeLatest Newsಕೇಸರಿ ಉಡುಪಿನ ಬಗ್ಗೆ ವಿಚಿತ್ರ ಪ್ರಶ್ನೆ: 'ಮೈ ಡಿಯರ್ ಬ್ರದರ್' ಎನ್ನುತ್ತಲೇ ವರದಿಗಾರನ ಬಾಯಿ ಮುಚ್ಚಿಸಿದ...

ಕೇಸರಿ ಉಡುಪಿನ ಬಗ್ಗೆ ವಿಚಿತ್ರ ಪ್ರಶ್ನೆ: ‘ಮೈ ಡಿಯರ್ ಬ್ರದರ್’ ಎನ್ನುತ್ತಲೇ ವರದಿಗಾರನ ಬಾಯಿ ಮುಚ್ಚಿಸಿದ ಪ್ರಿಯಾ ಪ್ರಕಾಶ್!

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಬೆಡಗಿ ಎಂದೇ ಹೆಸರುವಾಸಿಯಾದ ಮಲೆಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಕೇರಳದಲ್ಲಿ ನಡೆದ ಬ್ರ್ಯಾಂಡ್ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರಿಗೆ, ಧರಿಸಿದ್ದ ಬಟ್ಟೆಯ ಬಣ್ಣದ ಕುರಿತು ಮಾಧ್ಯಮ ಪ್ರತಿನಿಧಿಯೊಬ್ಬರು ವಿಚಿತ್ರ ಪ್ರಶ್ನೆಯೊಂದನ್ನು ಕೇಳಿದ್ದರು. ಈ ವೇಳೆ ಕೊಂಚವೂ ತಾಳ್ಮೆ ಕಳೆದುಕೊಳ್ಳದೆ ನಟಿ ನೀಡಿದ ಉತ್ತರ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಕ್ಯುಟಿಕುರಾ ಟಾಲ್ಕಮ್ ಪೌಡರ್ ಬ್ರ್ಯಾಂಡ್ ಉತ್ತೇಜನ ಕಾರ್ಯಕ್ರಮದಲ್ಲಿ ನಟಿ ಪ್ರಿಯಾ ಕೇಸರಿ ಬಣ್ಣದ ಉಡುಪು ಧರಿಸಿ ಪಾಲ್ಗೊಂಡಿದ್ದರು. ಈ ಸಮಯದಲ್ಲಿ ವರದಿಗಾರನೊಬ್ಬ, ನೀವು ಕೇಸರಿ ಬಣ್ಣದ ಉಡುಪನ್ನೇ ಧರಿಸಲು ಏನಾದರೂ ವಿಶೇಷ ಕಾರಣವಿದೆಯೇ ಎಂದು ಪ್ರಶ್ನೆ ಎಸೆದಿದ್ದನು. ಈ ಅನಿರೀಕ್ಷಿತ ಪ್ರಶ್ನೆಯಿಂದ ಕ್ಷಣಕಾಲ ಅಚ್ಚರಿಗೊಂಡರೂ ತಕ್ಷಣವೇ ನಿಭಾಯಿಸಿದ ನಟಿ, ಮುಗುಳುನಗುತ್ತಲೇ ಉತ್ತರ ನೀಡಿದರು.

ನನ್ನ ಪ್ರೀತಿಯ ಸಹೋದರ, ಈ ಉಡುಪಿನ ಆಯ್ಕೆಯ ಹಿಂದೆ ಯಾವುದೇ ವಿಶೇಷ ಉದ್ದೇಶವಿಲ್ಲ. ಕಾರ್ಯಕ್ರಮದ ಬ್ರ್ಯಾಂಡ್ ಥೀಮ್‌ಗೆ ಹೊಂದುವಂತೆ ಇದನ್ನು ಧರಿಸಿದ್ದೇನೆ. ನಾನು ಎಲ್ಲಾ ಬಣ್ಣದ ಉಡುಪುಗಳನ್ನೂ ಧರಿಸುತ್ತೇನೆ ಎಂದು ನಟಿ ಸ್ಪಷ್ಟಪಡಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೇಸರಿ ಬಣ್ಣವು ರಾಜಕೀಯವಾಗಿ ನಿರ್ದಿಷ್ಟ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಕಾರಣ ಈ ಪ್ರಶ್ನೆ ಮುನ್ನೆಲೆಗೆ ಬಂದಿತ್ತು. ಆದರೆ ತಮ್ಮ ಉಡುಪಿಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಪ್ರಿಯಾ ನಿರೂಪಿಸಿದ್ದಾರೆ. ಇನ್ನು ಪ್ರಿಯಾ ಪ್ರಕಾಶ್ ವಾರಿಯರ್ ಕೊನೆಯದಾಗಿ ಸರ್ವಂ ಮಾಯಾ ಚಿತ್ರದ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮುಂಬರುವ ದಿನಗಳಲ್ಲಿ 3 ಮಂಕೀಸ್ ಹಾಗೂ ಲವ್ ಹ್ಯಾಕರ್ಸ್ ಸಿನಿಮಾಗಳಲ್ಲಿ ಅಭಿನಯಿಸಲಿದ್ದಾರೆ.

Wow…

A Kerala reporter asked her why she chose to wear an orange dress, as if it needed an explanation. She calmly replied that it matched the brand colors. Even then, they continued mocking her.

In Kerala, wearing saffron is being treated like a sin and that mindset is… pic.twitter.com/KHKY6gTZIy

— Sona🐾🇮🇳 (@sona_sebin) August 6, 2026

https://www.instagram.com/reel/DbqQbacvEmt

https://www.instagram.com/p/DWL8IxPkiba

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular