HomeLatest Newsಹತ್ತು ಗ್ರಾಂ ಚಿನ್ನದ ಬೆಲೆ 2 ದಿನದಲ್ಲಿ ₹5,250 ಏರಿಕೆ

ಹತ್ತು ಗ್ರಾಂ ಚಿನ್ನದ ಬೆಲೆ 2 ದಿನದಲ್ಲಿ ₹5,250 ಏರಿಕೆ

ಬೆಂಗಳೂರು: ದೇಶೀಯ ಆಭರಣ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಒಂದೇ ಬಾರಿಗೆ ಭಾರಿ ಜಿಗಿತ ಕಂಡಿದ್ದು, ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದೆ. ಬುಧವಾರ ಸಾಧಾರಣ ಏರಿಕೆ ಕಂಡಿದ್ದ ಚಿನ್ನದ ದರ, ಗುರುವಾರ ಬರೋಬ್ಬರಿ ಜಿಗಿತ ಕಾಣುವ ಮೂಲಕ ಸಾರ್ವಕಾಲಿಕ ದಾಖಲೆಯತ್ತ ಮುನ್ನುಗ್ಗುತ್ತಿದೆ. ಚಿನ್ನದ ಬೆಲೆ ಸತತವಾಗಿ ಏರುಮುಖದಲ್ಲಿದ್ದರೂ, ಬೆಳ್ಳಿ ದರದಲ್ಲಿ ಮಾತ್ರ ಯಾವುದೇ ವ್ಯತ್ಯಾಸವಾಗದೆ ಸ್ಥಿರತೆ ಕಾಯ್ದುಕೊಂಡಿದೆ.ಆಗಸ್ಟ್ 6ರ ಮಾರುಕಟ್ಟೆ ವರದಿಯ ಪ್ರಕಾರ, ಚಿನ್ನ ಮತ್ತು ಬೆಳ್ಳಿಯ ಪ್ರಸ್ತುತ ದರ ಹಾಗೂ ಏರಿಕೆಯ ಸಂಪೂರ್ಣ ವಿವರ ಇಲ್ಲಿದೆ:

ಕೇವಲ ಎರಡೇ ದಿನದಲ್ಲಿ ₹525 ಏರಿಕೆ

ಬುಧವಾರ ಪ್ರತಿ ಗ್ರಾಮ್ ಚಿನ್ನದ ಮೇಲೆ 160 ರೂಪಾಯಿ ಹೆಚ್ಚಳವಾಗಿತ್ತು. ಆದರೆ ಗುರುವಾರ ಒಂದೇ ದಿನ ಬರೋಬ್ಬರಿ 365 ರೂಪಾಯಿ ಜಿಗಿತ ಕಂಡಿದೆ. ಇದರೊಂದಿಗೆ ಕೇವಲ ಎರಡೇ ದಿನಗಳಲ್ಲಿ ಪ್ರತಿ ಗ್ರಾಮ್ ಚಿನ್ನದ ಬೆಲೆಯಲ್ಲಿ 525 ರೂಪಾಯಿ ಹೆಚ್ಚಳವಾದಂತಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಅಪರಂಜಿ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.

ಆಗಸ್ಟ್ 6ರ ಪ್ರಮುಖ ಆಭರಣ ದರಗಳ ವಿವರ (1 ಗ್ರಾಮ್‌ಗೆ):

24 ಕ್ಯಾರಟ್ (ಅಪರಂಜಿ ಚಿನ್ನ): ₹14,973

22 ಕ್ಯಾರಟ್ (ಆಭರಣ ಚಿನ್ನ): ₹13,725

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

18 ಕ್ಯಾರಟ್ ಚಿನ್ನ: ₹11,230

ಬೆಳ್ಳಿ (ಪ್ರತಿ ಗ್ರಾಮ್‌ಗೆ): ₹240

10 ಗ್ರಾಮ್ ಚಿನ್ನ ಹಾಗೂ ಬೆಳ್ಳಿಯ ಒಟ್ಟು ಬೆಲೆ:

22 ಕ್ಯಾರಟ್ ಆಭರಣ ಚಿನ್ನ (10 ಗ್ರಾಮ್): ₹1,37,250

24 ಕ್ಯಾರಟ್ ಅಪರಂಜಿ ಚಿನ್ನ (10 ಗ್ರಾಮ್): ₹1,49,730

ಬೆಳ್ಳಿ ದರ (100 ಗ್ರಾಮ್‌ಗೆ): ₹24,000

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ

​ನಗರಗಳ ಹೆಸರು ​ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ₹1,49,730

ನಾಗ್ಪುರ ₹1,49,730

ಮುಂಬೈ ₹1,49,730

ಚೆನ್ನೈ ₹1,50,000

ಕೋಲ್ಕತ್ತಾ ₹1,49,730

ಪಾಟ್ನಾ ₹1,49,760

ಸೂರತ್‌ ₹1,49,760

ಚಂಡೀಗಢ ₹1,49,860

ಲಕ್ನೋ ₹1,49,860

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular