HomeLatest Newsಆರ್‌ಬಿಐ ಆಫೀಸ್‌ನಲ್ಲಿ ಕ್ರಿಕೆಟರ್ ಇಶಾನ್ ಕಿಶನ್: ಬ್ಯಾಟ್ ಬಿಟ್ಟು ಬ್ಯಾಂಕಿಂಗ್ ಕೆಲಸಕ್ಕಿಳಿದ ವೈರಲ್ ವಿಡಿಯೋ!

ಆರ್‌ಬಿಐ ಆಫೀಸ್‌ನಲ್ಲಿ ಕ್ರಿಕೆಟರ್ ಇಶಾನ್ ಕಿಶನ್: ಬ್ಯಾಟ್ ಬಿಟ್ಟು ಬ್ಯಾಂಕಿಂಗ್ ಕೆಲಸಕ್ಕಿಳಿದ ವೈರಲ್ ವಿಡಿಯೋ!

ಟೀಮ್ ಇಂಡಿಯಾದ ವಿಕೆಟ್ ಕೀಪರ್ ಮತ್ತು ದಂಗಲ್ ಬ್ಯಾಟರ್ ಇಶಾನ್ ಕಿಶನ್ ಕ್ರಿಕೆಟ್ ಮೈದಾನದ ಬ್ರೇಕ್ ಸಮಯದಲ್ಲಿ ತಮ್ಮ ವೃತ್ತಿಪರ ಕಚೇರಿ ಜವಾಬ್ದಾರಿಗೆ ಮರಳಿದ್ದಾರೆ. ಬಿಹಾರದ ಪಟ್ನಾದಲ್ಲಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಚೇರಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಇಶಾನ್ ಕಿಶನ್ ಕರ್ತವ್ಯ ನಿರ್ವಹಿಸುತ್ತಿರುವ ವೀಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಕ್ರೀಡಾ ಕೋಟಾದಡಿಯಲ್ಲಿ ಈ ಹುದ್ದೆಗೆ ಆಯ್ಕೆಯಾಗಿದ್ದ ಅವರು, ಮೈದಾನ ಬಿಟ್ಟು ಕಚೇರಿ ಕೆಲಸದಲ್ಲಿ ತೊಡಗಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

ಆರ್‌ಬಿಐ ನಿಯಮಾವಳಿಗಳ ಪ್ರಕಾರ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಮಾಸಿಕ ಒಟ್ಟು ವೇತನ ಸುಮಾರು ೧.೨ ಲಕ್ಷ ರೂಪಾಯಿಗೂ ಅಧಿಕವಾಗಿರುತ್ತದೆ. ಕ್ರೀಡಾ ಜಗತ್ತಿನ ಪ್ರಸಿದ್ಧ ಆಟಗಾರರಾಗಿದ್ದರೂ ಇಶಾನ್ ಕಿಶನ್ ಸರ್ಕಾರಿ ಹುದ್ದೆಯ ಕರ್ತವ್ಯವನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಭಾರತೀಯ ತಂಡ ಮತ್ತು ಐಪಿಎಲ್‌ನಲ್ಲಿ ಸಕ್ರಿಯರಾಗಿರುವ ಇಶಾನ್, ಸದ್ಯ ಕ್ರಿಕೆಟ್‌ನಿಂದ ತಾತ್ಕಾಲಿಕ ವಿರಾಮ ಪಡೆದಿದ್ದು ಶೀಘ್ರದಲ್ಲೇ ಮತ್ತೆ ಬ್ಯಾಟ್ ಹಿಡಿದು ಕಣಕ್ಕಿಳಿಯಲಿದ್ದಾರೆ.

Ishan kishan at reserve bank of india as officer duty in patne office#ishankishan #ReserveBankofIndia #RBI #officerduty pic.twitter.com/05NFJX5qJc

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

— RG Cricinfo (@CricinfoRg1512) August 4, 2026

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular